ಮಡಿಕೇರಿ, ಸೆ. ೨೨: ವೀರಾಜಪೇಟೆ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆ ನಿವಾರಿಸುವ ಸಭೆಯು ತಾ. ೨೩ ರಂದು (ಇಂದು) ಬೆಳಿಗ್ಗೆ ೧೧.೩೦ ರಿಂದ ೧೨.೩೦ ಗಂಟೆಯವರೆಗೆ ವೀರಾಜಪೇಟೆ ಉಪ ವಿಭಾಗ ಕಚೇರಿ ಆವರಣದಲ್ಲಿ ಸೆಸ್ಕ್ ಮಡಿಕೇರಿ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಗೋಣಿಕೊಪ್ಪ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆ ನಿವಾರಿಸುವ ಸಭೆಯು ತಾ. ೨೩ ರಂದು (ಇಂದು) ಮಧ್ಯಾಹ್ನ ೨.೩೦ ರಿಂದ ೩.೩೦ ಗಂಟೆಯವರೆಗೆ ಗೋಣಿಕೊಪ್ಪ ಉಪ ವಿಭಾಗ ಕಚೇರಿ ಆವರಣದಲ್ಲಿ ನಡೆಯಲಿದೆ.

ಕುಶಾಲನಗರ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆ ನಿವಾರಿಸುವ ಸಭೆಯು ತಾ.೨೪ ರಂದು ಬೆಳಿಗ್ಗೆ ೧೧.೩೦ ರಿಂದ ೧೨.೩೦ ಗಂಟೆಯವರೆಗೆ ವೀರಾಜಪೇಟೆ ಉಪವಿಭಾಗ ಕಚೇರಿ ಆವರಣದಲ್ಲಿ ನಡೆಯಲಿದೆ.

ಸೋಮವಾರಪೇಟೆ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆ ನಿವಾರಿಸುವ ಸಭೆಯು ತಾ. ೨೪ ರಂದು ಮಧ್ಯಾಹ್ನ ೨.೩೦ ರಿಂದ ೩.೩೦ ಗಂಟೆಯವರೆಗೆ ಸೋಮವಾರಪೇಟೆ ಉಪ ವಿಭಾಗ ಕಚೇರಿ ಆವರಣದಲ್ಲಿ ನಡೆಯಲಿದೆ.

ಮಡಿಕೇರಿ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆ ನಿವಾರಿಸಲು ಸಭೆಯು ತಾ. ೨೫ ರಂದು ಬೆಳಿಗ್ಗೆ ೧೧.೩೦ ರಿಂದ ೧೨.೩೦ ಗಂಟೆವರೆಗೆ ಮಡಿಕೇರಿ ಉಪ ವಿಭಾಗ ಕಚೇರಿ ಆವರಣದಲ್ಲಿ ನಡೆಯಲಿದೆ.

ಸಾರ್ವಜನಿಕರು ಈ ಸಭೆಗೆ ಹಾಜರಾಗುವಂತೆ ಚಾವಿಸನಿನಿ ಮಡಿಕೇರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಕೋರಿದ್ದಾರೆ.