ಗೋಣಿಕೊಪ್ಪಲು, ಸೆ. ೨೨: ಇಲ್ಲಿಗೆ ಸಮೀಪದ ಕೈಕೇರಿ ಗ್ರಾಮದ ಪಡಿಕಲ್ ಜಂಕ್ಷನ್ ಯೂತ್ ಕ್ಲಬ್ ನೇತೃತ್ವದಲ್ಲಿ ದ್ವಿತೀಯ ವರ್ಷದ ಕೈಲ್ ಮುಹೂರ್ತ ಗ್ರಾಮೀಣ ಕ್ರೀಡಾಕೂಟ ನಡೆಯಿತು.

ಪುರುಷರು, ಮಹಿಳೆಯರು, ಯುವಕ-ಯುವತಿಯರು ಮಕ್ಕಳೂ ಸೇರಿದಂತೆ ತೋಟ ಮಾಲೀಕರು, ಕಾರ್ಮಿಕ ವರ್ಗ ಹಾಗೂ ಸಾರ್ವಜನಿಕರು ವಿವಿಧ ಕ್ರೀಡೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಸುಮಾರು ೫ ಕಿ.ಮೀ. ಮ್ಯಾರಥಾನ್‌ನಲ್ಲಿ ಪಡಿಕಲ್ ಗೌತಮ್ ಪ್ರಥಮ ಸ್ಥಾನ ಪಡೆದರು. ಅವರನ್ನು ಪಡಿಕಲ್ ಜಂಕ್ಷನ್ ಯೂತ್ ಕ್ಲಬ್ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.

ಕೈಕೇರಿ - ಕಳತ್ಮಾಡು ಮುಖ್ಯ ರಸ್ತೆಯಲ್ಲಿ ನಿಧಾನ ಬೈಕ್ ಹಾಗೂ ಸ್ಕೂಟಿ ಚಾಲನೆ ಸ್ಪರ್ಧೆ ನಡೆಯಿತು. ಮಹಿಳೆಯರಿಗೆ ಮಡಿಕೆ ಹೊಡೆಯುವ ಸ್ಪರ್ಧೆ, ‘ಬಾಂಬ್ ಇನ್ ದ ಸಿಟಿ', ಹಗ್ಗ-ಜಗ್ಗಾಟ, ನಿಂಬೆಹಣ್ಣು ಸ್ಪೂನ್ ಓಟ, ಶಾಟ್‌ಪುಟ್ ಎಸೆತ ಇತ್ಯಾದಿ ಸ್ಪರ್ಧೆಗಳು ನಡೆದವು.

ಪುರುಷರ ಹಗ್ಗಜಗ್ಗಾಟ, ವಯಸ್ಕರ ಓಟದ ಸ್ಪರ್ಧೆ, ಮಕ್ಕಳಿಗಾಗಿ ಓಟ ಮತ್ತು ಕಾಳುಹೆಕ್ಕುವ ಸ್ಪರ್ಧೆಗಳು ನಡೆದವು. ಪಡಿಕಲ್ ಜಂಕ್ಷನ್ ಯೂತ್ ಕ್ಲಬ್ ಗೌರವಾಧ್ಯಕ್ಷ ವಿ.ಪಿ. ರಾಜ ಇದ್ದರು. ಅತಿಥಿಗಳಾದ ಕೆ.ಇ.ಬಿ. ನಿವೃತ್ತ ನೌಕರ ಕೈಕೇರಿಯ ಒಕ್ಕಲಿಗರ ಟಿ. ರಮೇಶ್ ಕ್ರೀಡಾ ವಿಜೇತರಿಗೆ ಬಹುಮಾನ ನೀಡಿದರು.

ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ತಹಶೀಲ್ದಾರ್ ಪಡಿಕಲ್ ಪ್ರವೀಣ್, ದಾನಿಗಳಾದ ವಿ.ಟಿ. ರಮೇಶ್, ನಿವೃತ್ತ ಟಾಟಾ ಕಾಫಿ ಹಿರಿಯ ವ್ಯವಸ್ಥಾಪಕ ಪಾರುವಂಗಡ ಚಂಗಪ್ಪ, ಪತ್ರಕರ್ತ ಟಿ.ಎಲ್. ಶ್ರೀನಿವಾಸ್ ಪಾಲ್ಗೊಂಡಿದ್ದರು.

ಕ್ರೀಡಾ ಸಂಚಾಲಕ ಹಾಗೂ ವೀಕ್ಷಕ ವಿವರಣೆಗಾರ ಶಿಕ್ಷಕ ಸುದೀಪ್, ಸದಸ್ಯರಾದ ಗಗನ್ ಮುಕ್ಕಾಟಿ, ಪಡಿಕಲ್ ಮಿಥುನ್, ಜಪ್ಪೆಕೋಡಿ ರಾಜ, ಜಪ್ಪೆಕೋಡಿ ವಿಕೇಶ್, ವಿ.ಆರ್. ಅಂಕಿತ್, ವಿ.ಎಸ್. ರಕ್ಷಿತ್, ಪ್ರಜಿತ್, ಅನಿಲ್ ಕುಟ್ಟಿ, ಪಡಿಕಲ್ ಪವನ್, ಕಾಯೇರ ಕಿರಣ್, ಪಡಿಕಲ್ ಮನು ಮುಂತಾದವರು ಹಾಜರಿದ್ದರು.

ಕ್ರೀಡೋತ್ಸವ ವಿಜೇತರು

ಮ್ಯಾರಥಾನ್ ಸ್ಪರ್ಧೆಯಲ್ಲಿ ಪಡಿಕಲ್ ಗೌತಮ್ (ಪ್ರಥಮ), ಶ್ರೀನಿವಾಸ್ ಗೊಟ್ಟಡ (ದ್ವಿತೀಯ) ಹಾಗೂ ಗೌತಮ್ ಆರ್ಮುಗಂ (ತೃತೀಯ) ಮಹಿಳೆಯರ ವಿಭಾಗ ಶಾಲಿನಿ ಸುನಿಲ್ (ಪ್ರಥಮ), ವೈಭವಿ ಸುದೀಪ್ (ದ್ವಿತೀಯ) ಹಾಗೂ ಯಶ್ಮಿಕಾ ಯತೀಶ್ (ತೃತೀಯ), ಪುರುಷರ ಹಗ್ಗಜಗ್ಗಾಟದಲ್ಲಿ ಗೊಟ್ಟಡ ಬಾಯ್ಸ್ ಪ್ರಥಮ, ಕಳತ್ಮಾಡು ಕಲ್ಲು ಮೇಲೆ ಬಾಯ್ಸ್ ದ್ವಿತೀಯ, ಮಹಿಳೆಯರ ಹಗ್ಗಜಗ್ಗಾಟದಲ್ಲಿ ಗೊಟ್ಟಡ ಕ್ವೀನ್ಸ್ ಪ್ರಥಮ, ಪಡಿಕಲ್ ಫ್ಯಾಮಿಲಿ ದ್ವಿತೀಯ. ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪವನ್ ನಾಯಕ್ ಪ್ರಥಮ, ಅನಿಲ್ ದ್ವಿತೀಯ, ಪಡಿಕಲ್ ಮಹೇಶ್ ತೃತೀಯ, ಪುರುಷರ ಶಾಟ್‌ಪುಟ್‌ನಲ್ಲಿ ಡಿ.ಜಿ. ನಿಖಿಲ್ ಪ್ರಥಮ, ವಿ.ಪಿ. ಚಿದಾನಂದ ದ್ವಿತೀಯ. ಮಹಿಳೆಯರ ವಿಭಾಗದಲ್ಲಿ ಪಡಿಕಲ್ ಗೀತಾ ಚಿದಾನಂದ ಪ್ರಥಮ, ಪಡಿಕಲ್ ಸಹನಾ ಶಶಿ ದ್ವಿತೀಯ, ಮಡಿಕೆ ಹೊಡೆಯುವ ಸ್ಪರ್ಧೆಯಲ್ಲಿ ತನ್ಸಿಕಾ ಪ್ರಥಮ, ಪ್ರಮೀಳ ದ್ವಿತೀಯ, ಭೂಮಿಕ ತೃತೀಯ. ವೇಗದ ನಡಿಗೆ - ಪುರುಷರ ವಿಭಾಗದಲ್ಲಿ ಪಡಿಕಲ್ ಮಾಚಯ್ಯ ಪ್ರಥಮ, ಪಡಿಕಲ್ ಮನು ದ್ವಿತೀಯ. ಮಹಿಳಾ ವಿಭಾಗದಲ್ಲಿ ರಾಧಾ ಶಿವರಾಮ್ ಪ್ರಥಮ, ನೇತ್ರಾವತಿ ದ್ವಿತೀಯ. ನಿಧಾನ ಬೈಕ್ ಚಾಲನೆ - ಪುರುಷರ ವಿಭಾಗದಲ್ಲಿ ಪವನ್ ನಾಯಕ್ ಪ್ರಥಮ, ರಕ್ಷಿತ್ ಶಿವರಾಮ್ ದ್ವಿತೀಯ. ಮಹಿಳಾ ವಿಭಾಗದಲ್ಲಿ ದೀಪಾ, ಭೂಮಿಕಾ ದ್ವಿತೀಯ. ಚಮಚ- ನಿಂಬೆಹಣ್ಣು ಓಟ - ಪುರುಷರ ವಿಭಾಗದಲ್ಲಿ ಮುಕ್ಕಾಟಿ ಗಗನ್ ಪ್ರಥಮ, ಪಡಿಕಲ್ ಗಜನ್ ದ್ವಿತೀಯ. ಮಹಿಳಾ ವಿಭಾಗz

Àಲ್ಲಿ ದೀಪಾ ಪ್ರಥಮ, ಭೂಮಿಕ ದ್ವಿತೀಯ ಬಹುಮಾನ ಪಡೆದರು. ಸುದೀಪ್ ಸ್ವಾಗತಿಸಿ, ವಂದಿಸಿದರು.