ಮಡಿಕೇರಿ, ಸೆ. ೨೧: ಮಡಿಕೇರಿಯ ಶ್ರೀ ಲಕ್ಷಿö್ಮನರಸಿಂಹ ಕಲ್ಯಾಣ ಮಂಟಪದ ಶತಮಾನ ಭವನದಲ್ಲಿ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ-ಮಡಿಕೇರಿ, ಇದರ ವಾರ್ಷಿಕ ಮಹಾಸಭೆ ಆಯೋಜಿಸಲಾಗಿತ್ತು. ಈ ಸಂದರ್ಭ ೨೦೨೬-೨೭ರ ಸಾಲಿಗೆ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ರಾಮಚಂದ್ರ ಮೂಗೂರು, ಉಪಾಧ್ಯಕ್ಷರಾಗಿ ಜಿ.ಆರ್ ರವಿಶಂಕರ್, ಕಾರ್ಯದರ್ಶಿಯಾಗಿ ಬಿ.ಕೆ. ಜಗದೀಶ್, ಸಹ ಕಾರ್ಯದರ್ಶಿಯಾಗಿ ಸವಿತಾ ಭಟ್, ಖಜಾಂಚಿಯಾಗಿ ಪಿ.ವಿ. ಅಶೋಕ್, ನಿರ್ದೇಶಕರುಗಳಾಗಿ ಕೆ.ಎಸ್ ರಾಜಶೇಖರ್, ಶ್ಯಾಮಲಾ, ಕುಮಾರ ಸುಬ್ರಮಣ್ಯ, ಪಿ.ಎನ್. ನಾಗರಾಜ್, ಕೆ.ಎಸ್. ಮಂಜುನಾಥ್, ಭರತೇಶ್ ಖಂಡಿಗೆ, ಜೆ.ಡಿ ಶಿವಶಂಕರ್, ಸುಧೀರ್ ಮಕ್ಕಿಮನೆ, ಲಲಿತಾ ರಾಘವನ್ ಹಾಗೂ ಮಂಜುಳ ರಾಮಕೃಷ್ಣ ಭಟ್ ಆಯ್ಕೆಯಾದರು.
ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಿಧಿಯ ಅಧ್ಯಕ್ಷ ರಾಮಚಂದ್ರ ಮೂಗೂರು, ಮಡಿಕೇರಿಯ ಬ್ರಾಹ್ಮಣರ ಬೀದಿಯಲ್ಲಿರುವ ಶ್ರೀ ಲಕ್ಷಿö್ಮನರಸಿಂಹ ಕಲ್ಯಾಣ ಮಂಟಪ ಶತಮಾನ ಭವನದ ಮೇಲ್ಭಾಗ ಸಭಾಂಗಣ ನಿರ್ಮಾಣ, ವಾಹನ ನಿಲುಗಡೆ ಸ್ಥಳದಲ್ಲಿ ಶೀಟ್ ಅಳವಡಿಕೆ, ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ದ್ಯೇಯೋದ್ದೇಶಗಳಾಗಿವೆ ಎಂದರು.
ಬ್ರಾಹ್ಮಣ ವಿದ್ಯಾಭಿವೃದ್ದಿ ನಿಧಿ ಅಭಿವೃದ್ಧಿ ಸಾಧಿಸಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಆಯೋಜಿಸಿದ್ಧ ಕ್ರೀಡಾಕೂಟಗಳಿಂದ ಯುವಜನರನ್ನು ಸಂಘಟಿಸಲು ಸಾಧ್ಯವಾಗಿದೆ. ಯುವಜನರಿಗೆ ವೃತ್ತಿ ಮಾರ್ಗದರ್ಶನ ನೀಡಲು ಕಾರ್ಯಾಗಾರವನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಕನಿಷ್ಟ ೫೦ ಮಂದಿ ಯುವಜನರು ಕಾರ್ಯಾಗಾರದಲ್ಲಿ ಪಾಲ್ಗೊಂಡರೆ ನಿಧಿ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಸಮಾಜದ ಆಡಳಿತ ಮಂಡಳಿಗೆ ನಿರ್ದೇಶಕರಾಗಲು ಯುವಜನರು ಮುಂದೆ ಬರಬೇಕು. ನಿಧಿಯ ಸದಸ್ಯರ ಸಹಕಾರದಿಂದ ನಿಧಿಯ ಬೆಳವಣಿಗೆ ಸಾಧ್ಯವಾಗಲಿದೆ ಎಂದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು. ನಿಧಿಯ ಹಿರಿಯ ಸದಸ್ಯ ಜಿ.ಟಿ ರಾಘವೇಂದ್ರ, ಮಾಜಿ ಅಧ್ಯಕ್ಷರಾದ ಗೋಪಾಲಕೃಷ್ಣ, ಗೀತಾ ಗಿರೀಶ್, ಮಾಜಿ ನಿರ್ದೇಶಕಿ ಜಯಶೀಲ, ಸದಸ್ಯರಾದ ಮುರಳೀಧರ್, ಉದಯಕುಮಾರ್, ಹಿರಿಯ ಸದಸ್ಯ ಪ್ರಭಾಕರ್ ನೆಲ್ಲಿತ್ತಾಯ ಮಾತನಾಡಿದರು.
ಆಡಳಿತ ಮಂಡಳಿ ಉಪಾಧ್ಯಕ್ಷ ಜಿ.ಆರ್ ರವಿಶಂಕರ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಬಿ.ಕೆ ಜಗದೀಶ್ ವಂದಿಸಿದರು.