(ಕೆ.ಎಂ. ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಸೆ. ೨೧: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಎರಡನೇ ಹಂತದ ಪ್ರಕ್ರಿಯೆ ನಡೆಯುತ್ತಿದೆ.ಲಾಜಿಕಲ್ ಡಿಸ್ಕಿçಪೆನ್ಸಿ ಮತ್ತು ನೋ ಮ್ಯಾಪಿಂಗ್ ಅಡಿಯಲ್ಲಿ ಗುರುತಿಸಲಾಗಿರುವ ಮತದಾರರಿಗೆ ನೋಟಿಸ್ ನೀಡಿ, ಅವರ ವಿಚಾರಣೆ ನಡೆಯುತ್ತಿದೆ.
ಜಿಲ್ಲೆಯಲ್ಲಿ ಒಟ್ಟು ೫೮,೮೮೩ ಮತದಾರರಿಗೆ ನೋಟಿಸ್ ನೀಡಲು ಗುರುತಿಸಲಾಗಿದೆ. ಇದರಲ್ಲಿ ೩೫,೮೧೦ ಲಾಜಿಕಲ್ ಡಿಸ್ಕಿçಪೆನ್ಸಿ ಹಾಗೂ ೨೩,೦೮೩ ಮತದಾರರು ನೋ ಮ್ಯಾಪಿಂಗ್ ಎಂದು ನೋಟಿಸ್ ಪಡೆದಿದ್ದಾರೆ. ಜಿಲ್ಲೆಯಲ್ಲಿ ತಾ.೧೮ರವರೆಗೆ ಒಟ್ಟು ೫೮,೮೮೩ ಮತದಾರರಿಗೆ ನೋಟಿಸ್ ನೀಡಬೇಕಿದ್ದು, ೫೮,೪೮೭ ನೋಟಿಸ್‌ಗಳನ್ನು ಮನೆ-ಮನೆಗೆ ತಲುಪಿಸಲಾಗಿದೆ. ಇನ್ನೂ ೩೯೬ ನೋಟಿಸ್ ವಿತರಿಸಲು ಬಾಕಿ ಇದೆ. ಮಡಿಕೇರಿ ಕ್ಷೇತ್ರದಲ್ಲಿ ೧೮,೭೮೦ ನೋಟಿಸ್ ಗಳಲ್ಲಿ, ೧೮,೫೨೦ ವಿತರಣೆಆಗಿದ್ದು, ೮,೩೩೯ ಮಂದಿಯ ವಿಚಾರಣೆ ಪೂರ್ಣಗೊಂಡಿದೆ.
ವೀರಾಜಪೇಟೆ ಕ್ಷೇತ್ರದಲ್ಲಿ ೪೦,೧೦೪ ನೋಟಿಸ್‌ಗಳಲ್ಲಿ ೩೯,೯೬೭ ವಿತರಣೆ ಆಗಿದ್ದು, ೨೧,೪೯೬ ಮಂದಿಯ ವಿಚಾರಣೆ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು ೨೯,೮೩೫ ಮತದಾರರ ವಿಚಾರಣೆ ಈವರೆಗೆ ಪೂರ್ಣಗೊಂಡಿದೆ. ಅಕ್ಟೋಬರ್ ೧೨ರವರೆಗೆ ಮತದಾರರ ವಿಚಾರಣೆ ನಡೆಯಲಿದೆ.
ಆದರೆ ನೋಟಿಸ್ ಪಡೆದು ವಿಚಾರಣೆಗೆ ಹಾಜರಾದ ಮತದಾರರು ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳುತ್ತಾರಾ? ಎಂಬುದರ ಬಗ್ಗೆ ಖಚಿತತೆ ಇಲ್ಲ. ನೋಟಿಸ್ ಪಡೆದು ವಿಚಾರಣೆಗೆ ಹಾಜರಾದರು ಮತದಾರರು ಚುನಾವಣಾ ಆಯೋಗ ತಿಳಿಸಿರುವ ದಾಖಲೆಗಳನ್ನು ಸಲ್ಲಿಸಿ, ಅದನ್ನು ಇಆರ್‌ಒ ಪರಿಶೀಲನೆ ನಡೆಸಿದ ನಂತರ ಮಾತ್ರ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ.
ಆದರೆ ವಿಚಾರಣೆಗೆ ಹಾಜರಾದ ಮತದಾರರಲ್ಲಿ ಎಷ್ಟು ಮಂದಿ ದಾಖಲೆಗಳನ್ನು ಸಮರ್ಪಕವಾಗಿ ಸಲ್ಲಿಸಿದ್ದಾರೆ? ಎಷ್ಟು ಮಂದಿ ಮತದಾರರ ದಾಖಲೆಗಳು ಸರಿಯಾಗಿ ಇದೆ? ಎಷ್ಟು ಮಂದಿ ಮತದಾರರನ್ನು ವಿಚಾರಣೆಯ ನಂತರ ಕೈ ಬಿಡಲಾಗಿದೆ ಎಂಬದರ ಬಗ್ಗೆ ಇದುವರೆಗೆ ಚುನಾವಣಾ ಆಯೋಗ ತಿಳಿಸಿಲ್ಲ. ಅಕ್ಟೋಬರ್ ೨೭ರಂದು ಪ್ರಕಟವಾಗಲಿರುವ ಮತದಾರರ ಪಟ್ಟಿಯಲ್ಲಿ ವಿಚಾರಣೆಗೆ ಹಾಜರಾದ ಮತದಾರರ ಹೆಸರು ಕೈ ಬಿಟ್ಟಿದ್ದರೆ, ಮತದಾರರು ಎಇಆರ್‌ಒ ಹಾಗೂ ಜಿಲ್ಲಾ ಮುಖ್ಯ ಚುನಾವಣಾಧಿಕಾರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಒಟ್ಟು ೨೧,೧೮೪ ಅರ್ಜಿಗಳು ಕ್ಲೇಮು ಮತ್ತು ಆಕ್ಷೇಪಣೆಗೆ ಜೂನ್ ೧೬ ರಿಂದ ಸೆ. ೧೭ ರವರೆಗೆ ಸಲ್ಲಿಕೆಯಾಗಿದೆ.
ಹೊಸ ಮತದಾರರ ನೋಂದಣಿ (ಈoಡಿm-೬) ೪,೦೧೭, ವಿದೇಶದ ಮತದಾರರ ಅರ್ಜಿ (ಈoಡಿm-೬ಂ) - ೨೨,ಮತ ಡಿಲೀಟ್ ಅರ್ಜಿ (ಈoಡಿm-೭) - ೫೧೦ ತಿದ್ದುಪಡಿ ಅರ್ಜಿ (ಈoಡಿm-೮) - ೧೬,೬೩೫ ತಿದ್ದುಪಡಿ ಅರ್ಜಿಗಳೇ ಅತೀ ಹೆಚ್ಚು ಸಲ್ಲಿಕೆಯಾಗಿದೆ.
ನಿಮ್ಮ ಗಮನಕ್ಕೆ ಬಾರದೇ ನಿಮ್ಮ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದೆಯಾ ಎಂದು ಅನುಮಾನವಿದೆಯೇ? ಹಾಗಿದ್ದರೆ ಈಗಲೇ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಜಾಲತಾಣಕ್ಕೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಬಹುದು.
ವಿಶೇಷ ಸಮಗ್ರ ಪರಿಷ್ಕರಣೆ (SIಖ) ಭಾಗವಾಗಿ ಪ್ರಕಟಿಸಿರುವ ಕರಡು ಮತದಾರರ ಪಟ್ಟಿಗೆ ಸಲ್ಲಿಕೆಯಾಗಿರುವ ಎಲ್ಲಾ ಕ್ಲೇಮು ಮತ್ತು ಆಕ್ಷೇಪಗಳ ಪಟ್ಟಿಯನ್ನು ಆಯೋಗ ಪ್ರಕಟಿಸಿದೆ.
ಈ ಪಟ್ಟಿ hಣಣಠಿ://ಛಿeo.ಞಚಿಡಿಟಿಚಿಣಚಿಞಚಿ.gov.iಟಿ ಜಾಲತಾಣದಲ್ಲಿ ಲಭ್ಯವಿದ್ದು, ಆಯಾ ವಿಧಾನಸಭಾ ಕ್ಷೇತ್ರವಾರು ಪಟ್ಟಿಗಳನ್ನು ಪಿಡಿಎಫ್ ಸ್ವರೂಪದಲ್ಲಿ ಅಪ್‌ಲೋಡ್ ಮಾಡಲಾಗಿದೆ. ಮತದಾರರು ಜಾಲತಾಣಕ್ಕೆ ಭೇಟಿ ನೀಡಿ, ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಡೌನ್‌ಲೋಡ್ ಮಾಡಬಹುದಾಗಿದೆ.
ಹೊಸದಾಗಿ ನೋಂದಣಿ ಮಾಡಿಸಲು ಸಲ್ಲಿಸಿರುವ ಅರ್ಜಿಗಳನ್ನು (ಅರ್ಜಿ ನಮೂನೆ-೬) ಫಾರಂ-೯ರ ಪಟ್ಟಿಯಲ್ಲಿ ಪ್ರಕಟಿಸಲಾಗಿದೆ. ಸ್ವತಃ ಮತದಾರರು ತಮ್ಮ ಹೆಸರು ಡಿಲೀಟ್ ಮಾಡಿಸಲು ಮತ್ತು ಇತರರ ಮತ ನೋಂದಣಿಯನ್ನು ಡಿಲೀಟ್ ಮಾಡಿಸಲು ಅನ್ಯ ವ್ಯಕ್ತಿಗಳು ಸಲ್ಲಿಸಿದ ಅರ್ಜಿಗಳನ್ನು (ಅರ್ಜಿ ನಮೂನೆ-೭) ಫಾರಂ-೧೦ರಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ಯಾರ ಮತ ಡಿಲೀಟ್‌ಗೆ ಯಾರು ಅರ್ಜಿ ಸಲ್ಲಿಸಿದ್ದಾರೆ ಎಂಬುದು ಸ್ಪಷ್ಟವಾಗಿ ನಮೂದಾಗಿರುತ್ತದೆ. ಹೀಗಾಗಿ ಮತದಾರರಿಗೆ ಅರಿವಿಲ್ಲದೆ ಇತರರು ಅವರ ಮತ ಡಿಲೀಟ್ ಮಾಡಿಸಲು ಅರ್ಜಿ ಸಲ್ಲಿಸಿದ್ದರೂ ಅದು ಈ ಪಟ್ಟಿಯಲ್ಲಿ ಗೊತ್ತಾಗಲಿದೆ.
ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತಿತರ ವಿವರಗಳ ತಿದ್ದುಪಡಿಗಾಗಿ ಸಲ್ಲಿಸಿದ ಅರ್ಜಿಗಳನ್ನು (ಅರ್ಜಿ ನಮೂನೆ-೮) ಫಾರಂ-೧೧, ಫಾರಂ-೧೧ಎ ಮತ್ತು ಫಾರಂ-೧೧ಬಿ ಪಟ್ಟಿಗಳಲ್ಲಿ ಪ್ರಕಟಿಸಲಾಗಿದೆ. ಮತದಾರರು ತಾವು ಸಲ್ಲಿಸಿರುವ ಕ್ಲೇಮು ಮತ್ತು ಆಕ್ಷೇಪಗಳು ದಾಖಲಾಗಿವೆಯೇ ಎಂಬುದನ್ನು ಈ ಪಟ್ಟಿಗಳಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ.
ಮತದಾರರು ಸಲ್ಲಿಸಿದ ಅರ್ಜಿಗಳನ್ನು ಮತದಾರರ ನೋಂದಣಾಧಿಕಾರಿ (ಇಖಔ) ವರ್ಗೀಕರಿಸಿದ ನಂತರವಷ್ಟೇ ಈ ಪಟ್ಟಿಯಲ್ಲಿ ಅರ್ಜಿಗಳು ಗೋಚರವಾಗುತ್ತವೆ. ಪ್ರತಿದಿನವೂ ಹೊಸ ಪಟ್ಟಿ ಪ್ರಕಟವಾಗುತ್ತಿದ್ದು, ಈಗ ಸೆಪ್ಟೆಂಬರ್ ೧ರಿಂದ ಪಟ್ಟಿಗಳು ಜಾಲತಾಣದಲ್ಲಿ ಲಭ್ಯವಿವೆ.
೨ ದಿನದಲ್ಲಿ ೯೫೪ ಅರ್ಜಿ ಸಂಗ್ರಹ
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕೊಡಗು ಜಿಲ್ಲೆಯಲ್ಲಿ ಸೆಪ್ಟೆಂಬರ್ ೧೯ ಮತ್ತು ೨೦ ರಂದು ನಡೆದ ವಿಶೇಷ ಮತದಾರರ ನೋಂದಣಿ ಅಭಿಯಾನದಲ್ಲಿ ಎರಡು ದಿನಗಳಲ್ಲಿ ಒಟ್ಟು ೯೫೪ ಅರ್ಜಿಗಳನ್ನು ಸಂಗ್ರಹಿಸಲಾಗಿದೆ.
ಸೆಪ್ಟೆAಬರ್ ೧೯ - ಒಟ್ಟು ೫೪೯ ಅರ್ಜಿ
ನಮೂನೆ-೬ (ಹೊಸ ಸೇರ್ಪಡೆ) - ೨೮೧, ನಮೂನೆ-೭ (ಡಿಲೀಟ್) - ೦, ನಮೂನೆ-೬ಂ (ವಿದೇಶಿ ಮತದಾರ) - ೦, ನಮೂನೆ-೮ (ತಿದ್ದುಪಡಿ) - ೨೬೮, ಸೆಪ್ಟೆಂಬರ್ ೨೦ - ಒಟ್ಟು ೪೦೫ ಅರ್ಜಿ, ನಮೂನೆ-೬ - ೨೨೬, ನಮೂನೆ-೭ - ೫, ನಮೂನೆ-೬ಂ - ೦, ನಮೂನೆ-೮ - ೧೭೪
ಕ್ಷೇತ್ರವಾರು ಮತ್ತು ತಾಲೂಕುವಾರು ವಿವರ
೨೦೮-ಮಡಿಕೇರಿ ವಿಧಾನಸಭಾ ಕ್ಷೇತ್ರ (೨೮೫ ಭಾಗಗಳು) - ಒಟ್ಟು ೫೦೨ ಅರ್ಜಿ
ಸೋಮವಾರಪೇಟೆ ತಾಲೂಕು - ೨೦೬, ಕುಶಾಲನಗರ ತಾಲೂಕು - ೧೭೮, ಮಡಿಕೇರಿ ತಾಲೂಕು - ೧೧೮
೨೦೯-ವೀರಾಜಪೇಟೆ ವಿಧಾನಸಭಾ ಕ್ಷೇತ್ರ (೨೮೨ ಭಾಗಗಳು) - ಒಟ್ಟು ೪೫೨ ಅರ್ಜಿ
ಪೊನ್ನಂಪೇಟೆ ತಾಲೂಕು - ೧೭೧, ಮಡಿಕೇರಿ ತಾಲೂಕು - ೧೪೪, ವೀರಾಜಪೇಟೆ ತಾಲೂಕು - ೧೩೭