ಮಡಿಕೇರಿ,ಸೆ.೧೯: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ೨೦೨೫-೨೬ನೇ ಸಾಲಿಗೆ ರೂ.೩೧.೫೧ ಕೋಟಿಗಳ ಒಟ್ಟು ಲಾಭ ಗಳಿಸಿದ್ದು ರೂ.೯.೧೨ ಕೋಟಿಗಳನ್ನು ಆದಾಯ ತೆರಿಗೆ ಹಾಗೂ ಶಾಸನಬಧ್ಧ ಬಾಪ್ತುಗಳಿಗೆ ಕಾಯ್ದಿರಿಸಲಾಗಿ ರೂ.೨೨.೩೯ ಕೋಟಿಗಳ ನಿವ್ವಳ ಲಾಭ ಗಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಬ್ಯಾಂಕ್‌ನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ; ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ೧೯೨೧ ರ ಜೂನ್ ೨೮ ರಂದು ರೂ.೪೦೦೦ ಪಾಲು ಬಂಡವಾಳ, ರೂ.೧೦೦೦೦ ಠೇವಣಿ, ೪೮ ಸಹಕಾರ ಸಂಘಗಳು ಮತ್ತು ೧೬ ಬಿಡಿ ಸದಸ್ಯರುಗಳಿಂದ ಸ್ಥಾಪನೆಗೊಂಡು, ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಸಾರ್ಥಕತೆಯ ೧೦೫ ವರ್ಷಗಳನ್ನು ಪೂರ್ಣಗೊಳಿಸಿ, ಇದೀಗ ೧೦೬ರ ಸಂವತ್ಸರದಲ್ಲಿ ಜಿಲ್ಲೆಯ ರೈತರಿಗೆ ಹಾಗೂ ಜನತೆಗೆ ಉತ್ತಮ ಬ್ಯಾಂಕಿAಗ್ ಸೇವೆಯನ್ನು ಪಾರದರ್ಶಕ ಆಡಳಿತದ ಮೂಲಕ ನೀಡುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ೩ನೇ ಸ್ಥಾನ
ಬ್ಯಾಂಕು ಆರ್.ಬಿ.ಐ. ನಬಾರ್ಡ್ ಹಾಗೂ ಅಪೆಕ್ಸ್ ಬ್ಯಾಂಕಿನಿAದ ನೀಡಲ್ಪಡುವ ಆರ್ಥಿಕ ಮತ್ತು ತಾಂತ್ರಿಕ ಸೌಲಭ್ಯಗಳನ್ನು ಬಳಸಿಕೊಂಡು ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದ್ದು, ೨೦೨೫-೨೬ನೇ ಸಾಲಿನ ಲೀಡ್ ಬ್ಯಾಂಕಿನ ತ್ರೆöÊಮಾಸಿಕ ಸಭೆಯ ವರದಿಯಂತೆ ಜಿಲ್ಲೆಯಲ್ಲಿನ ೨೪ ವಿವಿಧ ಬ್ಯಾಂಕುಗಳ ಸುಮಾರು ೧೮೪ ಶಾಖೆಗಳ ಪೈಕಿ ಠೇವಣಾತಿ ಸಂಗ್ರಹಣೆಯಲ್ಲಿ ರೂ.೨೭೧೯.೦೩ ಕೋಟಿಯೊಂದಿಗೆ ಕೆನರಾ ಬ್ಯಾಂಕ್ ಪ್ರಥಮ, ರೂ.೨೨೮೯.೩೮ ಕೋಟಿಯೊಂದಿಗೆ ಎಸ್.ಬಿ.ಐ ದ್ವಿತೀಯ, ರೂ.೨೦೪೩.೧೧ ಕೋಟಿಯೊಂದಿಗೆ ಕೊಡಗು ಡಿ.ಸಿ.ಸಿ ಬ್ಯಾಂಕು ಮೂರನೇ ಸ್ಥಾನ ಹಾಗೂ ಸಾಲ ವಿತರಣೆಯಲ್ಲಿ ರೂ.೨೧೨೦.೬೩ ಕೋಟಿಯೊಂದಿಗೆ ಕೆನರಾ ಬ್ಯಾಂಕು ಪ್ರಥಮ, ರೂ.೧೭೭೧.೧೪ ಕೋಟಿಯೊಂದಿಗೆ ಕೊಡಗು ಡಿ.ಸಿ.ಸಿ ಬ್ಯಾಂಕು ದ್ವಿತೀಯ ಸ್ಥಾನದಲ್ಲಿದ್ದು ಕೊಡಗು ಡಿ.ಸಿ.ಸಿ ಬ್ಯಾಂಕು ಒಟ್ಟಾರೆ ಮಾರುಕಟ್ಟೆ ಶೇರು ಶೇ. ೨೧.೩೬ರಷ್ಟನ್ನು ಹೊಂದಿದ್ದು ಪ್ರಥಮ ಸ್ಥಾನದಲ್ಲಿರುತ್ತದೆ. ರಾಜ್ಯ ಮಟ್ಟದಲ್ಲಿ ೨೧ ಡಿ.ಸಿ.ಸಿ ಬ್ಯಾಂಕುಗಳ ಪೈಕಿ ೩ನೇ ಸ್ಥಾನದಲ್ಲಿರುವುದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಸಾಧನೆಯಾಗಿದ್ದು, ೨೦೨೫-೨೬ನೇ ಸಾಲಿನ ಲೆಕ್ಕ ಪರಿಶೋಧನೆ(ಆಡಿಟ್)ನಲ್ಲಿ ೯೭ ರಷ್ಟು ಅಂಕಗಳನ್ನು ಪಡೆದು. ಬ್ಯಾಂಕು ಕಳೆದ ಹಲವು ವರ್ಷಗಳಿಂದ ಆಡಿಟ್‌ನಲ್ಲಿ “ಎ” ವರ್ಗೀಕರಣ ಪಡೆದಿರುತ್ತದೆ. ಇದು ಬ್ಯಾಂಕಿನ ಉತ್ತಮ ಆಂತರಿಕ ನಿಯಂತ್ರಣ ವ್ಯವಸ್ಥೆಗೆ ಮಾದರಿಯಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಸದಸ್ಯತ್ವ - ಪಾಲು ಬಂಡವಾಳ
ತಾ. ೩೧.೦೩.೨೦೨೬ರ ಅಂತ್ಯಕ್ಕೆ ಒಟ್ಟು ೨೫೫ ಸಹಕಾರ ಸಂಘಗಳು ಬ್ಯಾಂಕಿನ ಸದಸ್ಯತ್ವವನ್ನು ಪಡೆದಿದ್ದು, ಎ, ಬಿ, ಸಿ ವರ್ಗದ ಸದಸ್ಯರಿಂದ ಒಟ್ಟು ರೂ.೩೭.೯೯ ಕೋಟಿ ಷೇರು ಬಂಡವಾಳ ಸಂಗ್ರಹಿಸಿದ್ದು, ಕಳೆದ ಸಾಲಿಗೆ ಹೋಲಿಸಿದಲ್ಲಿ ರೂ.೨.೦೮ ಕೋಟಿ ಪಾಲು ಬಂಡವಾಳದಲ್ಲಿ ಹೆಚ್ಚಳವಾಗಿರುತ್ತದೆ.
ದಿನಾಂಕ ೩೧.೦೩.೨೦೨೬ರ ಅಂತ್ಯಕ್ಕೆ ಷೇರು ಬಂಡವಾಳ, ಶಾಸನಬದ್ಧ ಮೀಸಲು ನಿಧಿಗಳು ಹಾಗೂ ಬಟವಾಡೆಯಾಗದ ಲಾಭದ ಮೊತ್ತವನ್ನು ಒಳಗೊಂಡAತೆ ಒಟ್ಟು ರೂ.೧೫೦.೬೬ ಕೋಟಿ ಮೊತ್ತದ ಸ್ವಂತ ಬಂಡವಾಳವನ್ನು ಹೊಂದಿದೆ. ಬ್ಯಾಂಕಿನ ನೆಟ್‌ವರ್ಕ್ ಪ್ರಮಾಣವು ರೂ.೧೫೦.೬೬ ಕೋಟಿ ಇದ್ದು ಶೇ.೧೦೦ಕ್ಕಿಂತ ಮೇಲ್ಪಟ್ಟಿರುವುದರಿಂದ ಬ್ಯಾಂಕು ಆರ್ಥಿಕವಾಗಿ ಉತ್ತಮವಾಗಿದ್ದು, ಬ್ಯಾಂಕು ಆರ್.ಬಿ.ಐ, ನಬಾರ್ಡ್ ಹಾಗೂ ಅಪೆಕ್ಸ್ ಬ್ಯಾಂಕು ನೀಡುವ ಯಾವುದೇ ಸೌಲಭ್ಯಕ್ಕೆ ಅರ್ಹತೆ ಹೊಂದಿರುತ್ತದೆ. ೨೦೨೫-೨೬ನೇ ಸಾಲಿನಲ್ಲಿ ಬ್ಯಾಂಕಿನ ಒಟ್ಟು ವ್ಯವಹಾರವು ರೂ.೩೮೧೫.೨೫ ಕೋಟಿಯಾಗಿರುತ್ತದೆ ಎಂದು ತಿಳಿಸಿದರು.
ಠೇವಣಾತಿಗಳು
ಜಿಲ್ಲೆಯ ಜನತೆ ಬ್ಯಾಂಕಿನ ಮೇಲಿಟ್ಟಿರುವ ನಂಬಿಕೆ ಹಾಗೂ ವಿಶ್ವಾಸದಿಂದ ಸಹಕಾರ ಸಂಘಗಳು ಹಾಗೂ ಜಿಲ್ಲೆಯ ಗ್ರಾಹಕರಿಂದ ೩೧.೦೩.೨೦೨೬ರ ಅಂತ್ಯಕ್ಕೆ ರೂ.೨೦೪೩.೧೧ ಕೋಟಿಗಳ ಠೇವಣಿ ಸಂಗ್ರಹಿಸಲಾಗಿದೆ. ೨೦೨೬-೨೭ನೇ ಸಾಲಿಗೆ ರೂ.೨೩೨೦.೦೦ ಕೋಟಿಗಳ ಠೇವಣಾತಿ ಸಂಗ್ರಹಣೆಯ ಗುರಿ ಹೊಂದಿದ್ದು, ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಗುರಿ ಸಾಧಿಸಲು ಬ್ಯಾಂಕಿನ ಸಿಬ್ಬಂದಿಗಳಿಗೆ ಶ್ರೇಣಿವಾರು ಗುರಿನಿಗದಿ ಪಡಿಸಿ, ಠೇವಣಿ ಸಂಗ್ರಹಣೆ ಮಾಡಲು ಉತ್ತೇಜಿಸಲಾಗಿರುತ್ತದೆ ಎಂದು ಹೇಳಿದರು.
ಸಾಲ ವಿತರಣೆ
ಬ್ಯಾಂಕು ಜಿಲ್ಲೆಯ ಕೃಷಿ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತö್ಯ ನೀಡುತ್ತಾ ಬಂದಿದ್ದು, ಬ್ಯಾಂಕಿಗೆ ಸಂಯೋಜಿಸಲ್ಪಟ್ಟ ಸಹಕಾರಿ ಸಂಘಗಳ ಮುಖಾಂತರ ಜಿಲ್ಲೆಯ ರೈತರಿಗೆ ಅಲ್ಪಾವಧಿ ಬೆಳೆ ಸಾಲವನ್ನು ನೀಡಲಾಗುತ್ತಿದೆ. ಬ್ಯಾಂಕಿನ ಸದಸ್ಯ ಸಹಕಾರ ಸಂಘಗಳಿಗೆ ನಗದು ಸಾಲ ಮತ್ತು ಮಾರ್ಕೆಟಿಂಗ್ ಫೈನಾನ್ಸ್ ಸಾಲ, ಎಂ.ಎಸ್.ಸಿ ಸಾಲ, ನಿವೇಶನ ಖರೀದಿ ಸಾಲ ನೀಡಲಾಗುತ್ತಿರುವುದಲ್ಲದೆ, ಬ್ಯಾಂಕಿನ ನಾಮ ಮಾತ್ರ ಸದಸ್ಯರಿಗೆ ನೇರವಾಗಿ ರಾಜ್ಯ ಸರ್ಕಾರದ ಶೂನ್ಯ ಬಡ್ಡಿದರಕ್ಕೆ ಒಳಪಟ್ಟು ಅಲ್ಪಾವಧಿ ಕೃಷಿ ಸಾಲ ರೂ.೫ ಲಕ್ಷಗಳವರೆಗೆ ಹಾಗೂ ರಾಜ್ಯ ಸರ್ಕಾರದ ಶೇ.೩ರ ಬಡ್ಡಿ ರಿಯಾಯಿತಿ ಯೋಜನೆಯಡಿಯಲ್ಲಿ ಮಧ್ಯಮಾವಧಿ ಕೃಷಿ ಸ್ಥಿರಾಸ್ತಿ ಆಧಾರಿತ ಸಾಲ ಎಕ್ರೆ ಒಂದಕ್ಕೆ ರೂ.೧.೫೦ ಲಕ್ಷಗಳಂತೆ ಗರಿಷ್ಠ ರೂ.೧೫ ಲಕ್ಷಗಳವರೆಗೆ ಹಾಗೂ ಸಾಮಾನ್ಯ ಬಡ್ಡಿದರದಲ್ಲಿ ರೂ.೪೫ ಲಕ್ಷಗಳ ಮಧ್ಯಮಾವಧಿ ಕೃಷಿ ಸಾಲವನ್ನು ನೀಡಲಾಗಿದೆ. ಇದರೊಂದಿಗೆ
ಜಾಮೀನು ಸಾಲ, ಕೃಷಿ ಸ್ಥಿರಾಸ್ತಿ ಆಧಾರಿತ ಇತರ ಚಟುವಟಿಕೆ ಸಾಲ, ಗ್ರಾಮೀಣ ಮನೆ ನಿರ್ಮಾಣ ಸಾಲ, ವಾಹನ ಸಾಲ, ಮನೆ ನಿರ್ಮಾಣ ಸಾಲ, ವಿದ್ಯಾ ಸಹಕಾರ ಸಾಲ, ವೇತನ ಆಧಾರಿತ ಸಾಲ, ಪಿಗ್ಮಿ ಆಧಾರಿತ ಜಾಮೀನು ಸಾಲ, ವ್ಯಾಪಾರ ಮತ್ತು ವ್ಯವಹಾರ ನಡೆಸಲು ಓವರ್ ಡ್ರಾಪ್ಟ್ ಸಾಲ ಸೌಲಭ್ಯ. ಪಟ್ಟಣ ಪ್ರದೇಶದಲ್ಲಿನ ನಾಗರಿಕರಿಗೆ, ವೇತನದಾರರಿಗೆ ಮನೆ,ಕಟ್ಟಡ,ನಿವೇಶನಗಳ ಅಡಮಾನ ಮತ್ತು ಸ್ಥಿರಾಸ್ತಿ ಖರೀದಿಗಾಗಿ ಸಾಲ ಹಾಗೂ ಸೋಲಾರ್, ಸಿ.ಸಿ.ಟಿ.ವಿ ಮತ್ತು ಜನರೇಟರ್ ಖರೀದಿ ಸಾಲ ಹಾಗೂ ರೈತ ಗ್ರಾಹಕರಿಗೆ ಅನುಕೂಲವಾಗಲೆಂದು ರಿಯಾಯಿತಿ ಬಡ್ಡಿದರದಲ್ಲಿ ಆರ್.ಟಿ.ಸಿ. ಆಧಾರಿತ ಆಭರಣ ಈಡಿನ ಸಾಲ ಹಾಗೂ ರೈತರಿಗೆ ಸಾಮಾನ್ಯ ಬಡ್ಡಿದರದಲ್ಲಿ ಗರಿಷ್ಠ ರೂ.೬೦ ಲಕ್ಷಗಳವರೆಗೆ ಅಲ್ಪಾವಧಿ ಬೆಳೆ ಸಾಲವನ್ನು ನೀಡಲಾಗುತ್ತಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.
ಕೆ.ಸಿ.ಸಿ ಸಾಲಕ್ಕೆ ಸಂಬAಧಿಸಿದAತೆ ೨೦೨೩-೨೪ ರಿಂದ ರೂ.೩ ಲಕ್ಷ ದಿಂದ ರೂ.೫ ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ವಿತರಿಸಲು ಕರ್ನಾಟಕ ರಾಜ್ಯ ಸರ್ಕಾರದ ಆದೇಶವಿದ್ದರೂ ರಾಜ್ಯದ ೨೧ ಡಿ.ಸಿ.ಸಿ ಬ್ಯಾಂಕುಗಳ ಪೈಕಿ ಕೇವಲ ಕೊಡಗು ಡಿ.ಸಿ.ಸಿ ಬ್ಯಾಂಕು ಮಾತ್ರ ರೂ.೩ ಲಕ್ಷ ದಿಂದ ರೂ.೫ ಲಕ್ಷದವರೆಗೆ ಸಾಲ ನೀಡಿದ್ದು, ಸ್ವಂತ ಬಂಡವಾಳದ ಕೊರತೆ ಇದ್ದರೂ ಸಹ ರೈತರ ಹಿತದೃಷ್ಟಿಯಿಂದ ೨೦೨೫-೨೬ನೇ ಸಾಲಿನಲ್ಲಿ ರೂ.೩ ಲಕ್ಷ ದಿಂದ ರೂ.೫ ಲಕ್ಷದವರೆಗೆ ೯೭೧೯ ರೈತರಿಗೆ ರೂ.೪೪೩.೯೨ ಕೋಟಿ ಸಾಲ ಸ್ವಂತ ಬಂಡವಾಳದಿAದ ವಿತರಿಸಲಾಗಿದೆ ಎಂದು ತಿಳಿಸಿದರು.
ಹೊಸ ಸಾಲ ಯೋಜನೆ
ಜಿಲ್ಲೆಯ ರೈತರ ಮತ್ತು ಗ್ರಾಹಕರ ಅನುಕೂಲ ಹಾಗೂ ಅಭಿವೃದ್ಧಿಗಾಗಿ ಆಡಳಿತ ಮಂಡಳಿಯ ಚಿಂತನೆಯAತೆ ಜಿಲ್ಲೆಯ ನಗರ, ಪಟ್ಟಣ, ಗ್ರಾಮೀಣ ಮನೆ ನವೀಕರಣಕ್ಕಾಗಿ ಅರ್ಹತೆ ಆಧಾರದಲ್ಲಿ ಗರಿಷ್ಠ್ಟ
ರೂ.೨೦ ಲಕ್ಷಗಳ ಸಾಲ ಯೋಜನೆಯನ್ನು ಸ್ಪರ್ಧಾತ್ಮಕ ಬಡ್ಡಿದರದಲ್ಲಿ ರೂಪಿಸಿಲಾಗಿದ್ದು, ಸಾಲ ಸೌಲಭ್ಯ ಕೊಡಗು ಜಿಲ್ಲಾ ಸಹಕಾರ ಕೇಂದ್ರ
ಬ್ಯಾಂಕಿನಲ್ಲಿ ಮಾತ್ರ ಲಭ್ಯವಿದ್ದು, ಜಿಲ್ಲೆಯಲ್ಲಿರುವ ಇತರ ೨೪ ವಾಣಿಜ್ಯ ಬ್ಯಾಂಕುಗಳಲ್ಲಿ ಈ ಸಾಲ ಸೌಲಭ್ಯ ಇರುವುದಿಲ್ಲ ಎಂದು ಹೇಳಿದರು.
ಸಾಲ ವಿತರಣೆ - ವಸೂಲಾತಿ
ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿನ ವತಿಯಿಂದ ರೂ.೧೪೩೪.೦೫ ಕೋಟಿ ಸಾಲ ವಿತರಣೆ ಮಾಡಲಾಗಿದ್ದು, ಈ ಪೈಕಿ ಕೃಷಿ ಸಾಲ ರೂ.೬೯೬.೦೩ ಕೋಟಿ ಹಾಗೂ ಕೃಷಿಯೇತರ ಸಾಲ ರೂ.೭೩೮.೦೨ ಕೋಟಿ ವಿತರಣೆಯಾಗಿರುತ್ತದೆ. ತಾ. ೩೧.೦೩.೨೦೨೬ರ ಅಂತ್ಯಕ್ಕೆ ಹೊರಬಾಕಿ ನಿಂತ ಸಾಲ ರೂ.೧೭೭೨.೧೪ ಕೋಟಿ ಆಗಿರುತ್ತದೆ. ಬ್ಯಾಂಕಿನ ಸಾಲ ವಸೂಲಾತಿ ಪ್ರಮಾಣವನ್ನು ಶೇ.೧೦೦ ರಷ್ಟು ಮಾಡಲು ಆಡಳಿತ ಮಂಡಳಿA ಗುರಿ ಹೊಂದಿದ್ದು, ಕೃಷಿ ಸಾಲ ವಸೂಲಾತಿ ಶೇ.೯೯.೯೨, ಕೃಷಿಯೇತರ ಸಾಲ ವಸೂಲಾತಿ ಶೇ.೯೪.೦೩ ರಷ್ಟಿದ್ದು ಬ್ಯಾಂಕಿನ ಒಟ್ಟಾರೆ ಸಾಲ ವಸೂಲಾತಿಯು ಶೇ.೯೮.೧೨ ರಷ್ಟಿರುತ್ತದೆ. ೨೦೨೬-೨೭ನೇ ಸಾಲಿಗೆ ಒಟ್ಟು ರೂ.೧೮೮೧ ಕೋಟಿ ಸಾಲ ವಿತರಣೆಯ ಗುರಿ ನಿಗದಿಪಡಿಸಲಾಗಿದೆ. ತಾ.೩೧.೦೩.೨೦೨೬ರ ಅಂತ್ಯಕ್ಕೆ ಬ್ಯಾಂಕಿನ ಎನ್‌ಪಿಎ ಪ್ರಮಾಣವು ಶೇ.೧.೧೨ ಆಗಿದ್ದು ನಿವ್ವಳ ಎನ್‌ಪಿಎ ಪ್ರಮಾಣವು ಶೂನ್ಯವಾಗಿರುತ್ತದೆ ಎಂದು ತಿಳಿಸಿದರು.
ಉದ್ದೇಶಿತ ಯೋಜನೆಗಳು
ಬ್ಯಾಂಕಿನ ವ್ಯವಹಾರವನ್ನು ವೃದ್ಧಿಸುವ ನಿಟ್ಟಿನಲ್ಲಿ ಹಾಗೂ ಬ್ಯಾಂಕಿAಗ್ ಸೇವೆಯನ್ನು ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೆ ಒದಗಿಸುವ ಉದ್ದೇಶದಿಂದ ಕುಶಾಲನಗರ ತಾಲೂಕಿನ ಚೆಟ್ಟಳ್ಳಿ ಹಾಗೂ ಕೂಡುಮಂಗಳೂರಿನಲ್ಲಿ, ಪೊನ್ನಂಪೇಟೆ ತಾಲೂಕಿನ ಕಾನೂರು ಹಾಗೂ ಸೋಮವಾರಪೇಟೆ ತಾಲೂಕಿನ ಅಲೂರು ಸಿದ್ದಾಪುರದಲ್ಲಿ ಬ್ಯಾಂಕಿನ ನೂತನ ಶಾಖೆಯನ್ನು ತೆರೆಯುವ ಸಂಬAಧ ಆರ್.ಬಿ.ಐ ಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗಣಪತಿ ತಿಳಿಸಿದರು.
ಗೋಷ್ಠಿಯಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ಹೊಟ್ಟೆಂಗಡ ಎಂ. ರಮೇಶ್, ಹೊಸೂರು ಜೆ. ಸತೀಶ್‌ಕುಮಾರ್, ಹೆಚ್.ಕೆ ಮಾದಪ್ಪ,… ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಕೆ ಬೆಳ್ಯಪ್ಪ ಹಾಜರಿದ್ದರು.