ಕುಶಾಲನಗರ, ಸೆ. ೧೯: ಪಟ್ಟಣದ ವಾಸವಿ ಯುವಜನ ಚಾರಿಟೇಬಲ್ ಟ್ರಸ್ಟ್ ಮತ್ತು ವಾಸವಿ ಯುವಜನ ಸಂಘ, ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ದೇವಸ್ಥಾನದ ವತಿಯಿಂದ ರೂ.೫೦ ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ವಾಣಿಜ್ಯ ಕಟ್ಟಡವನ್ನು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಉದ್ಘಾಟಿಸಿದರು.
ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಅಂಗವಾಗಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಡಾ. ಮಂತರ್ ಗೌಡ ಅವರು ಪಾಲ್ಗೊಂಡು ಶುಭ ಹಾರೈಸಿದರು. ಈ ಸಂದರ್ಭ ಯುವಜನ ಸಂಘದ ಅಧ್ಯಕ್ಷ ವಿ.ಜಿ. ಬಾಲಾಜಿ, ಉಪಾಧ್ಯಕ್ಷ ಬಿ.ಎಂ. ಅಂಜನ್ ಹಾಗೂ ಪ್ರಹಲ್ಲಾದ್, ಕಾರ್ಯದರ್ಶಿ ಪಿ.ಆರ್. ರಾಕೇಶ್, ಖಜಾಂಚಿ ನಿಖಿಲ್ ನಿರ್ದೇಶಕರಾದ ರವಿಪ್ರಕಾಶ್, ಶ್ರೇಯಸ್, ಸಂಕೀರ್ತ, ಮಧುಸೂದನ್, ಆದರ್ಶ, ರಿತ್ವಿಕ್, ಭಗವಾನ್, ಅಮೃತ್ ಟ್ರಸ್ಟ್ ಚೇರ್ಮನ್ ಗೌತಮ್, ನಿರ್ದೇಶಕರಾದ ರವಿಕುಮಾರ್ ಬಿ.ಎಲ್ ಸತೀಶ್, ಹರೀಶ್, ಸಂಜಯ್, ಶ್ರೀನಿವಾಸ್, ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಅಮೃತ್ ರಾಜ್, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಕಾರ್ಯದರ್ಶಿ ಪ್ರವೀಣ್, ಜಿಲ್ಲಾಧ್ಯಕ್ಷ ಬಿ.ಎಲ್. ಸತ್ಯನಾರಾಯಣ, ಹಿರಿಯರಾದ ವಿ.ಎನ್. ವಸಂತ್‌ಕುಮಾರ್ ಪಾಲ್ಗೊಂಡಿದ್ದರು.