ಮಡಿಕೇರಿ, ಸೆ. ೧೯: ಮಡಿಕೇರಿ ತಾಲೂಕು ಸಂಪಾಜೆ ಚಡಾವು- ಮಂಗಳಪಾರೆ ತೆರಳುವ ರಸ್ತೆ ಸುರಕ್ಷತೆಗೆ ರೂ ೧೦ ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ತಡೆಗೋಡೆ ಕಾಮಗಾರಿಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಭೂಮಿಪೂಜೆ ನೆರೆವೇರಿಸಿದರು.
ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶೌಕತ್ ಆಲಿ, ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ್ ಕನ್ಯಾನ, ಮಾಜಿ ಅಧ್ಯಕ್ಷ ಇಸ್ಮಾಯಿಲ್, ಪಕ್ಷದ ಮುಖಂಡರಾದ ಸೂರಜ್ ಹೊಸೂರು, ಕೊಲ್ಯದ ಗಿರೀಶ್, ಸುರೇಶ್ ಸಂಪಾಜೆ, ಹನೀಫ್ ಎಸ್ ಪಿ, ಜಾಫರ್, ರಿತಿನ್, ಮೈದು ಕುನ್ನಿ, ಮುಸ್ತು ಗುಂಜಲ, ಚೆನಿಯಪ್ಪ ಕುದುರೆಪಾಯ, ಚೆನ್ನಪ್ಪ ಕುದುರೆಪ್ಪಾಯ, ರವಿರಾಜ್ ಹೊಸೂರು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.