- ಪ್ರಜ್ವಲ್ ಜಿ.ಆರ್
ಮಡಿಕೇರಿ, ಸೆ. ೧೮: ಕಕ್ಕಬ್ಬೆ ಬಳಿಯ ತಡಿಯಂಡಮೋಳ್ ಬೆಟ್ಟಕ್ಕೆ ಏಪ್ರಿಲ್ ತಿಂಗಳಿನಲ್ಲಿ ಚಾರಣಕ್ಕೆ ತೆರಳಿದ್ದ ಕೇರಳದ ಯುವತಿ ಶರಣ್ಯ ನಾಪತ್ತೆಯಾಗಿ ೪ ದಿನಗಳ ಕಾಲ ಬೆಟ್ಟದಲ್ಲೇ ಕಳೆದು, ನಂತರ ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಹಕಾರದಿಂದ ರಕ್ಷಿಸಲ್ಪಟ್ಟ ಬಳಿಕ ರಾಜ್ಯ ಸರಕಾರವು ತಾತ್ಕಾಲಿಕವಾಗಿ ರಾಜ್ಯಾದ್ಯಂತ ಚಾರಣಪಥಗಳನ್ನು ಮುಚ್ಚಿಸಿತ್ತು. ಆ ಸಂದರ್ಭ ಅರಣ್ಯ ಸಚಿವರಾಗಿದ್ದ ಈಶ್ವರ್ ಖಂಡ್ರೆ ಅವರ ನೇತೃತ್ವದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮುಂದೆAದು ಇಂತಹ ಘಟನೆಗಳು ಮರುಕಳಿಸದಂತೆ ಚಾರಣ ಸ್ಥಳಗಳಲ್ಲಿ ಹಲವು ಬದಲಾವಣೆಗಳನ್ನು ತಂದ ಬಳಿಕವಷ್ಟೆ ಚಾರಣ ಪುನರಾರಂಭಿಸಲು ಅನುಮತಿ ನೀಡುವುದಾಗಿ ಅವರು ಹೇಳಿದ್ದರು.
ಈ ಸಂಬAಧ ಅಂದು ಹೊರಡಿಸಲಾದ ಎಸ್.ಒ.ಪಿ ಆಧಾರದಲ್ಲಿ ಜಿಲ್ಲೆಯಲ್ಲಿನ ಹಲವು ಪ್ರಮುಖ ಚಾರಣಪಥಗಳು ಒಂದು ವಾರದಲ್ಲಿ ಮತ್ತೇ ಆರಂಭಗೊಳ್ಳುವ ನಿರೀಕ್ಷೆಯಿದೆ. ಎಸ್.ಒ.ಪಿಯ ಪ್ರಮುಖ ಭಾಗವಾಗಿರುವ ‘ಟ್ರೆಕ್ ಗೈಡ್’ ಅಥವಾ ಪ್ರವಾಸಿ ಚಾರಣಿಗರಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಲಿರುವ ಒಟ್ಟು ೯೨ ಮಂದಿ ಸ್ಥಳೀಯರಿಗೆ ಇಲಾಖೆ ವತಿಯಿಂದ ಪ್ರಮಾಣ ಪತ್ರ ನೀಡಿ ಗೈಡ್‌ಗಳಾಗಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಆಸಕ್ತ ಹಾಗೂ ಅರ್ಜಿ ಹಾಕಿದ ಸ್ಥಳೀಯ ಗೈಡ್‌ಗಳಿಗೆ ಕಳೆದ ವಾರ ಕುಶಾಲನಗರದಲ್ಲಿ ತರಬೇತಿ ನೀಡಲಾಗಿದ್ದು, ಒಟ್ಟು ೯೨ ಮಂದಿ ಸ್ಥಳೀಯರು ಚಾರಣಿಗರಿಗೆ ಮಾರ್ಗದರ್ಶಕರಾಗಲಿದ್ದಾರೆ.
ಇಕೋ ಟೂರಿಸಂ ಅಭಿವೃದ್ಧಿ ಮಂಡಳಿಯಿAದ ತರಬೇತಿ
ಕರ್ನಾಟಕ ಇಕೋ ಟೂರಿಸಂ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ರವಿಶಂಕರ್ (ಐ.ಎಫ್.ಎಸ್) ಅವರ ನೇತೃತ್ವದಲ್ಲಿ ಈ ೯೨ ಮಂದಿಗೆ ತರಬೇತಿ ನೀಡಲಾಗಿದೆ. ಕೊಡಗಿನ ಶಾಸಕದ್ವಯರೂ ಕೂಡ ತರಬೇತಿ ತ್ವರಿತಗತಿಯಲ್ಲಿ ಆಯೋಜನೆಗೊಳ್ಳುವಂತೆ ಒತ್ತಡ ಹೇರಿದ ಪರಿಣಾಮವಾಗಿ ಸೆ.೧೦ ರಿಂದ ೧೨ ರವರೆಗೆ ೯೨ ಮಂದಿ ತರಬೇತಿ ಪಡೆದುಕೊಂಡಿದ್ದಾರೆ. ಪ್ರಥಮ ಚಿಕಿತ್ಸೆ, ಪಕ್ಷಿಗಳ ಗುರುತಿಸುವಿಕೆ, ಗಿಡಗಳ ಬಗ್ಗೆ ಗೈಡ್‌ಗಳಿಗೆ ಮಾಹಿತಿ ನೀಡಲಾಗಿದ್ದು, ಚಾರಣಿಗರೊಂದಿಗೆ ಈ ಮಾಹಿತಿಯನ್ನು ಗೈಡ್‌ಗಳು ಚಾರಣ ಸಂದರ್ಭ ಹಂಚಿಕೊಳ್ಳಬಹುದಾಗಿದೆ. ಪ್ರತಿ ಗೈಡ್‌ಗಳಿಗೆ ವಾಕಿ-ಟಾಕಿಗಳನ್ನೂ ನೀಡುವ ಮೂಲಕ ತುರ್ತು ಸಂದರ್ಭ ಸಂಪರ್ಕ ಸಾಧನೆಗೆ ಸಹಕಾರಿಯಾಗಲಿದೆ.
ರೂ.ಸಾವಿರ ಸಂಭಾವನೆ
ಎಸ್.ಒ.ಪಿ ಪ್ರಕಾರ ಪ್ರತಿ ೧೦ ಚಾರಣಿಗರಿಗೆ ಓರ್ವ ಗೈಡ್ ಕಡ್ಡಾಯ. ಚಾರಣಿಗರು ಆನ್‌ಲೈನ್ ಮೂಲಕ ಚಿಡಿಚಿಟಿಥಿಚಿvihಚಿಚಿಡಿಚಿ.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಚಾರಣವನ್ನು ಕಾಯ್ದಿರಿಸಬಹುದಾಗಿದೆ. ಸದ್ಯದ ಮಟ್ಟಿಗೆ ಕೊಡಗಿನ ಯಾವ ಚಾರಣಪಥವೂ ತೆರೆದಿಲ್ಲ. ಚಾರಣ ಮಾರ್ಗಗಳು ತೆರದುಕೊಂಡ ಬಳಿಕ ಚಾರಣಿಗರು ಹಣ ಪಾವತಿಸಿ ಆನ್‌ಲೈನ್ ಮೂಲಕ ಚಾರಣವನ್ನು ಕಾಯ್ದಿರಿಸಬಹುದಾಗಿದೆ. ಈ ಸಂದರ್ಭ ೧೦ ಗೈಡ್‌ಗಳು ಲಭ್ಯವಿದ್ದಲ್ಲಿ ೧೦೦ ಚಾರಣಿಗರು, ೧೫ ಗೈಡ್‌ಗಳು ಲಭ್ಯವಿದ್ದಲ್ಲಿ ೧೫೦ ಚಾರಣಿಗರು, ಈ ರೀತಿ ಒಬ್ಬ ಗೈಡ್‌ಗೆ ೧೦ ಚಾರಣಿಗರಂತೆ ಚಾರಣಕ್ಕೆ ಅನುಮತಿ ನೀಡಲಾಗುವುದು. ಪ್ರತಿ ಚಾರಣಿಗ ರೂ.೧೦೦ ಗೈಡ್ ಶುಲ್ಕ ಪಾವತಿಸಬೇಕು. ಇದರಿಂದಾಗಿ ಪ್ರತಿ ಗೈಡ್‌ಗೆ ಒಂದು ಚಾರಣಕ್ಕೆ ರೂ.೧,೦೦೦ ಸಂಭಾವನೆ ಲಭಿಸಲಿದೆ. ಗೈಡ್‌ಗಳಾಗಿ ಕಾರ್ಯನಿರ್ವಹಿಸಲು ಬೆಂಗಳೂರಿನಿAದಲೂ ಚಾರಣಪ್ರಿಯರು ಆಸಕ್ತಿ ವಹಿಸಿದ್ದಾರೆ. ಆದರೆ ಎಸ್.ಒ.ಪಿ ಪ್ರಕಾರ ಸ್ಥಳೀಯರಿಗೆ ಆದ್ಯತೆ ನೀಡುವ ಅವಶ್ಯಕತೆ ಇರುವುದರಿಂದ ಸದ್ಯದ ಮಟ್ಟಿಗೆ ಹೊರಜಿಲ್ಲೆಗಳಿಂದ ಯಾರನ್ನೂ ಗೈಡ್ ಆಗಿ ನೇಮಿಸಿಲ್ಲ. ಅನಿವಾರ್ಯವಾದಲ್ಲಿ ಮುಂದಿನ ದಿನಗಳಲ್ಲಿ ಎಸ್.ಒ.ಪಿ ಬದಲಾಯಿಸಿ ಹೊರಗಿನವರನ್ನೂ ಗೈಡ್ ಆಗಿ ನೇಮಿಸುವ ಸಾಧ್ಯತೆ ಇದೆ.ಒಂದು ವಾರದಲ್ಲಿ ಚಾರಣ ಪುನರಾರಂಭ ಸಾಧ್ಯತೆ
ರಾಜ್ಯದ ಇತರೆಡೆಗಳಲ್ಲಿ ಕೆಲ ಜಿಲ್ಲೆಗಳಲ್ಲಿ ಎಸ್.ಒ.ಪಿ ಮಾರ್ಗಸೂಚಿ ಪಾಲನೆಯಾದ ಹಿನ್ನೆಲೆ ಚಾರಣಗಳು ಪ್ರಾರಂಭವಾಗಿವೆ. ದಕ್ಷಿಣ ಕನ್ನಡದ ನೇತ್ರಾವತಿ ಚಾರಣಕ್ಕೆ ಸುಮಾರು ೩೦೦ ಸಂಖ್ಯೆಯಲ್ಲಿ ಗೈಡ್‌ಗಳು ಆಸಕ್ತಿ ತೋರಿದ್ದಾರೆ. ಸುಲಭ ಚಾರಣವಾಗಿರುವ ಕಾರಣ ಅಲ್ಲಿನ ಸ್ಥಳೀಯರು, ಬಹುತೇಕ ಕೃಷಿಕರು ಹೆಚ್ಚಿನ ಆದಾಯ ಗಳಿಸುವ ನಿಟ್ಟಿನಲ್ಲಿ ಆಸಕ್ತಿ ತೋರಿದ ಹಿನ್ನೆಲೆ ಅಲ್ಲಿನ ಚಾರಣ ಪ್ರಾರಂಭವಾಗಿ ಆನ್‌ಲೈನ್ ಬುಕ್ಕಿಂಗ್ ಕೂಡ ಪ್ರಾರಂಭವಾಗಿದೆ.
ಕೊಡಗಿಗೆ ಸಂಬAಧಿಸಿದAತೆ ತಡಿಯಂಡಮೋಳ್ ಚಾರಣ ಇನ್ನೊಂದು ವಾರದಲ್ಲಿ ಆರಂಭವಾಗಲಿದೆ ಎಂದು ಮಡಿಕೇರಿಯ ಡಿ.ಸಿ.ಎಫ್ ಅಭಿಷೇಕ್ ಅವರು ‘ಶಕ್ತಿ‘ಗೆ ಮಾಹಿತಿ ನೀಡಿದ್ದಾರೆ. ಇತರ ಪ್ರಮುಖ ಚಾರಣಗಳಾದ ನಿಶಾನಿ ಮೊಟ್ಟೆ ಹಾಗೂ ಕುಮಾರ ಪರ್ವತ ಚಾರಣ ಕೂಡ ಸದ್ಯದಲ್ಲಿಯೇ ಪ್ರಾರಂಭವಾಗಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.