ಮಡಿಕೇರಿ, ಸೆ. ೧೮: ‘ದಿ ಕೂರ್ಗ್ ರೇವ್‘ ಹೆಸರಿನಲ್ಲಿ ಕೆÆಡಗಿನಲ್ಲಿ ಸೆ. ೨೫ ರಿಂದ ೨೭ ರವರೆಗೆ ರೇವ್ ಪಾರ್ಟಿ ಆಯೋಜಿಸುವುದಾಗಿ ಹೊರ ಊರಿನವರು ಸಾಮಾಜಿಕ ಜಾಲ ತಾಣಗಳಲ್ಲಿ ಸಂದೇಶ ಹರಿಬಿಟ್ಟು, ಆಸಕ್ತರಿಂದ ಹಣ ಪಡೆಯುತ್ತಿದ್ದು, ಇಂತಹ ಪಾರ್ಟಿಗಳ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ಸೂಚಿಸಿದ್ದಾರೆ.

ಇಂತಹ ಪಾರ್ಟಿಗಳಲ್ಲಿ ಮಾದಕ ವಸ್ತುಗಳ ಸರಬರಾಜು ಸಾಧ್ಯತೆ ಇದ್ದು, ಮಾದಕ ವಸ್ತುಗಳ ಜಾಲದಿಂದ ದೂರವಿರಲು, ಅಪರಿಚಿತ ವ್ಯಕ್ತಿಗಳ ಆಕರ್ಷಣೆಗೆ ಒಳಗಾಗದಂತೆ ಹಾಗೂ ಪಾರ್ಟಿ ಸಂಬAಧ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳದAತೆ ಎಸ್.ಪಿ ಎಚ್ಚರಿಸಿದ್ದಾರೆ.

ಸಾಮಾಜಿಕ ಜಾಲತಾಣ ಇನ್ಸಾ÷್ಟಗ್ರಾಮ್‌ನಲ್ಲಿ ಈ ಬಗ್ಗೆ ಆಯೋಜಕರು ಮಾಹಿತಿ ಹಂಚಿಕೊAಡಿದ್ದು, ಬೆಂಗಳೂರಿನಿAದ ಬಸ್ ಆಯೋಜಿಸಿದ್ದಾಗಿ, ಒಟ್ಟು ೩೦ ಮಂದಿಗೆ ಈ ಪಾರ್ಟಿಯಲ್ಲಿ ಅವಕಾಶವಿರುವುದಾಗಿ ತಿಳಿಸಿದ್ದಾರೆ. ಕೊಡಗಿನಲ್ಲಿ ಕಾಡಿನಲ್ಲಿ ಕ್ಯಾಂಪ್‌ಸೈಟ್ ನಿರ್ಮಿಸಿ ಬಾನ್‌ಫೈರ್ ಮಧ್ಯೆ ರೇವ್ ಪಾರ್ಟಿ ಆಯೋಜನೆ ಮಾಡುವುದಾಗಿ ತಿಳಿಸಲಾಗಿದೆ. ಒಟ್ಟು ರೂ.೫,೭೯೯ ಒಬ್ಬರಿಗೆ ನಿಗದಿಪಡಿಸಿದ್ದು, ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಲು ಅವಕಾಶವೂ ಕಲ್ಪಿಸಲಾಗಿದೆ. ಈ ಸಂಬAಧ ಪ್ರಕಟಣೆ ನೀಡಿರುವ ಎಸ್.ಪಿ, ಈ ಸಂದೇಶವು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸೈಬರ್ ವಂಚನೆ ಸಂಬAಧಿಸಿದ ಪೋಸ್ಟ್ ಇದಾಗಿದೆ ಎಂದು ಕೂಡ ಮಾಹಿತಿ ನೀಡಿದ್ದಾರೆ.