ಮಡಿಕೇರಿ, ಸೆ. ೧೬: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿಗೆ ಕೊಡಗು ಜಿಲ್ಲೆಯ ಮಹಿಳಾ ಲೇಖಕಿಯರು ಪ್ರಕಟಿಸಿದ ಕನ್ನಡ ಭಾಷೆಯ ಕೃತಿಗಳನ್ನು ಆಹ್ವಾನಿಸಲಾಗಿದೆ. ೨೦೨೬-೨೭ನೇ ಸಾಲಿನ ಪ್ರಶಸ್ತಿ ಪುರಸ್ಕಾರ ಪಡೆಯಲು ಆಸಕ್ತ ಮಹಿಳಾ ಲೇಖಕಿಯರು ತಾವು ರಚಿಸಿ ಪ್ರಕಟಿಸಿದ ಕಥೆ, ಕಾದಂಬರಿ, ಕವನ ಸಂಕಲನ, ಲೇಖನ ಸಂಗ್ರಹ ಕೃತಿಗಳ ನಾಲ್ಕು ಪ್ರತಿಗಳನ್ನು ಅರ್ಜಿಯೊಂದಿಗೆ ಕಳುಹಿಸಿತಕ್ಕದ್ದು.

೨೦೨೧ರ ನಂತರ ಪ್ರಕಟಿತ ಪುಸ್ತಕಗಳನ್ನು ಮಾತ್ರ ಕಳುಹಿಸಬೇಕು. ಸ್ಪರ್ಧೆಗೆ ಪುಸ್ತಕ ಕಳುಹಿಸುವ ಲೇಖಕಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರಬೇಕು. ಓರ್ವ ಲೇಖಕಿ ಒಂದು ಕೃತಿಯನ್ನು ಮಾತ್ರ ಕಳುಹಿಸಬೇಕು. ಲಕೋಟೆಯ ಮೇಲೆ ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿಗೆ ಎಂದು ಬರೆಯಬೇಕು. ಕೊಡಗು ಜಿಲ್ಲೆಯ ಲೇಖಕಿಯರಿಗೆ ಮಾತ್ರ ಅವಕಾಶ.

ಕಳುಹಿಸಬೇಕಾದ ವಿಳಾಸ: ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಂಬೇಡ್ಕರ್ ಭವನದ ಬಳಿ, ಸುದರ್ಶನ ವೃತ್ತ, ಮಡಿಕೇರಿ. ಮೊಬೈಲ್ ಸಂಖ್ಯೆ - ೯೪೪೮೩ ೪೬೨೭೬. ಇಲ್ಲಿಗೆ ತಾ. ೨೫ ರ ಒಳಗಾಗಿ ತಲುಪಿಸಬೇಕೆಂದು ಪ್ರಕಟಣೆ ತಿಳಿಸಿದೆ.