ಕೊಡಗು ಜಿಲ್ಲೆ ವೀರಾಜಪೇಟೆ ತಾಲ್ಲೂಕು, ವೀರಾಜಪೇಟೆ ಹೋಬಳಿ, ಕೆದಮುಳ್ಳೂರು ಗ್ರಾಮದ ಸರ್ವೆ ನಂ.೩೪೦A, ರಲ್ಲಿ ೧.೯೦ ಎಕರೆ ಸಾಗು ಜಾಗವು ಒ.ಕೆ. ಮಹಮ್ಮದ್ ರವರಿಗೆ ೧೯೬೭-೬೮ ರಲ್ಲಿ ಸರಕಾರದಿಂದ ಮಂಜೂರಾಗಿರುವ ಆಸ್ತಿಯಾಗಿದ್ದು ಸದರಿ ಒ.ಕೆ.ಮಹಮ್ಮದ್ ರವರು ನಿಧನರಾಗಿದ್ದು, ಅವರ ಪತ್ನಿ ಶ್ರೀಮತಿ ಖದೀಜರವರ ಹೆಸರಿನಲ್ಲಿ ಪಹಣಿ ವರ್ಗಾವಣೆಯಾಗಿರುತ್ತದೆ. ಸದರಿ ಆಸ್ತಿಯಲ್ಲಿ ನಾನು ೦.೮೦ ಎಕರೆ (ಎಂಬತ್ತು ಸೆಂಟು) ಜಾಗವನ್ನು ಹೊಂದಿರುತ್ತೇನೆ. ಸದರಿ ಜಾಗವನ್ನು ಕೆಲವು ವ್ಯಕ್ತಿಗಳು ಮಾರಾಟ ಮಾಡಲು ಹುನ್ನಾರ ನಡೆಸುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಒಂದು ವೇಳೆ ಸದರಿ ಆಸ್ತಿಯನ್ನು ಯಾರಾದರೂ ಮಾರಾಟ ಅಥವಾ ಖರೀದಿ ಮಾಡಿದರೆ ಖರೀದಿಸಿದವರನ್ನು ಸಹ ಪಕ್ಷಗಾರರನ್ನಾಗಿ ಮಾಡಿ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವುದಾಗಿ ಈ ಮೂಲಕ ತಿಳಿಸಲಾಗಿದೆ. ಸದರಿ ಆಸ್ತಿಗೆ ಯಾರಾದರೂ ಅಕ್ರಮ ಪ್ರವೇಶ ಮಾಡಿ ಆಸ್ತಿಗೆ ಯಾವುದೇ ಹಾನಿ ಅಥವಾ ಕೆಲಸ ಮಾಡಬಾರದೆಂದು ಈ ಮೂಲಕ ತಿಳಿಸಲಾಗಿದೆ.
ಶ್ರೀ.ಸಿ.ಕೆ. ಪೂವಣ್ಣ ಶ್ರೀ.ಎಂ.ಯು. ಯೂಸಫ್,
ವಕೀಲರು, ಎಸ್.ಎಸ್. ರಾಮಮೂರ್ತಿ ರಸ್ತೆ,
ವೀರಾಜಪೇಟೆ. ವೀರಾಜಪೇಟೆ, ಮೊ. : ೯೧೪೧೮೨೯೧೭೬