ವೀರಾಜಪೇಟೆ, ಸೆ. ೧೬: ವೀರಾಜಪೇಟೆ ಕೊಡವ ಸಮಾಜದ ವಾರ್ಷಿಕ ಕೈಲ್‌ಪೊಳ್ದ್ ನಮ್ಮೆಯನ್ನು ತಾ. ೨೦ರಂದು ಪೂರ್ವಾಹ್ನ ೯ ಗಂಟೆಗೆ ಕೊಡವ ಸಮಾಜದ ಆವರಣದಲ್ಲಿ ನಡೆಸಲಾಗುವುದು ಎಂದು ಕೊಡವ ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೈಲ್‌ಪೊಳ್ದ್ ನಮ್ಮೆಯ ಪ್ರಯುಕ್ತ ವಿವಿಧ ಆಟೋಟ ಸ್ಪರ್ದೆಗಳನ್ನು ಆಯೋಜಿಸಲಾಗಿದೆ ಎಂದರು. ಕ್ರೀಡಾ ಸಮಿತಿ ಕಾರ್ಯದರ್ಶಿ ಅಮ್ಮಣಿಚಂಡ ರತ್ನ ಸುಬ್ರಮಣಿ ಮಾತನಾಡಿ, ಕೈಲ್‌ಪೊಳ್ದ್ ನಮ್ಮೆಯ ಆಚರಣೆ ನಿಮಿತ್ತ ಚೆಂಬೆಬೆಳ್ಳೂರು, ಕಾಕೋಟುಪರಂಬು, ನರಿಯಂದಡ, ಕೆದಮುಳ್ಳೂರು, ಬಿಟ್ಟಂಗಾಲ ಬಾಳುಗೋಡು ಪಂಚಾಯಿತಿ ಪರಿಮಿತಿಯಲ್ಲಿ ಅಂತರಕೇರಿಗಳ ನಡುವೆ ಪೈಪೋಟಿಗಳನ್ನು ಆಯೋಜಿಸಲಾಗಿದೆ. ಪೈಪೋಟಿಯಲ್ಲಿ ಬೊಳಕಾಟ್, ತಾಲಿಪಾಟ್, ಕೋಲಾಟ್, ಸಂಬAಧ ಅಡಕುವೋ, ಪರಿಯಕಳಿ ಸ್ಪರ್ಧೆಗಳು ನಡೆಯಲಿವೆ. ತೆಂಗಿನಕಾಯಿಗೆ ಗುಂಡು ಹೊಡೆಯವ ಸ್ಪರ್ಧೆಯಲ್ಲಿ ಕೊಡವ ಜನಾಂಗದವರು ಯಾರೂ ಬೇಕಾದರೂ ಭಾಗವಹಿಸಬಹುದಾಗಿದೆ. ಈ ಪೈಪೋಟಿಯಲ್ಲಿ ಪ್ರಥಮ ಸ್ಥಾನ ಪಡೆದ ತಂಡವನ್ನು ನವೆಂಬರ್ ತಿಂಗಳಲ್ಲಿ ಬಾಳುಗೋಡುವಿನಲ್ಲಿ ನಡೆಯುವ ಕೊಡವ ನಮ್ಮೆಗೆ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಕಾಣತಂಡ ಜಗದೀಶ್, ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಮರಣನಿಧಿ ಕಾರ್ಯದರ್ಶಿ ಮಾದೆಯಂಡ ಸಂಪಿ ಪೂಣಚ್ಚ ಉಪಸ್ಥಿತರಿದ್ದರು.