ಮಡಿಕೇರಿ, ಸೆ. ೧೬: ಬೆಂಗಳೂರಿನಲ್ಲಿ ಆಯೋಜಿತ ಫ್ಯಾಷನ್ ಶೋನಲ್ಲಿ ಫೋನಿಕ್ಸ್ ಮಾಡೆಲ್ ಹಂಟ್‌ನಲ್ಲಿ ಮಡಿಕೇರಿಯ ಯುವಕ ಪಾಲೆಯಂಡ ಕುಶಾಲ್ ನಾಣಯ್ಯ ಪ್ರಥಮ ಸ್ಥಾನ ಪಡೆದಿದ್ದಾರೆ.

ಬೆಂಗಳೂರಿನಲ್ಲಿ ಆಯೋಜಿತ ಫ್ಯಾಷನ್ ಶೋನಲ್ಲಿ ದೇಶದ ಹೆಸರಾಂತ ಕೋರಿಯೋಗ್ರಾಫರ್ ಪ್ರಸಾದ್ ಬಿದ್ದಪ್ಪ ಅವರ ನೇತೃತ್ವದಲ್ಲಿ ಆಯೋಜಿತ ಫ್ಯಾಷನ್ ಶೋನಲ್ಲಿ ದೇಶದ ವಿವಿಧ ಭಾಗಗಳಿಂದ ೧ ಸಾವಿರಕ್ಕೂ ಅಧಿಕ ಯುವಕ, ಯುವತಿಯರು ಪಾಲ್ಗೊಂಡಿದ್ದರು. ಬುದ್ದಿಮತ್ತೆ, ಸೌಂದರ್ಯ, ಚತುರತೆ ಮಾಡೆಲಿಂಗ್ ವ್ಯಕ್ತಿತ್ವಗಳ ಆಧಾರದ ಮೇಲೆ ಈ ಸ್ಪರ್ಧೆಯ ಅಂತಿಮ ಹಂತದಲ್ಲಿ ಮಡಿಕೇರಿ ಬಳಿಯ ಕರ್ಣಂಗೇರಿ ಗ್ರಾಮದ ನಿವಾಸಿ ಪಾಲೆಯಂಡ ಕಿಶನ್ ಸುಬ್ಬಯ್ಯ ಮತ್ತು ರೂಪಾ ಸುಬ್ಬಯ್ಯ ದಂಪತಿಯ ಪುತ್ರನಾಗಿರುವ ಕುಶಾಲ್ ಪ್ರಥಮ ಸ್ಥಾನ ಪಡೆದು ಫೋನಿಕ್ಸ್ ಮೆಘಾ ಮಾಡೆಲ್ -೨೦೨೬ ಆಗಿ ಆಯ್ಕೆಯಾದರು.