ವೀರಾಜಪೇಟೆ, ಸೆ. ೧೬: ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆಯ ಗ್ರಾಮೀಣ ಕಾರ್ಯಾನುಭವ ಶಿಬಿರದ ಶಿಬಿರಾರ್ಥಿಗಳ ವತಿಯಿಂದ ಬೇಟೋಳಿ ಗ್ರಾಮದಲ್ಲಿ ರೈತರಿಗಾಗಿ ಆರ್ಕಿಡ್ ಕೃಷಿ ಕುರಿತು ವಿಧಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮ ರೈತ ಶೈಲೇಶ್ ಅವರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆಯ ಪ್ರಾಧ್ಯಾಪಕ ಡಾ. ಎಂ. ಜಡೇಗೌಡ ರೈತರಿಗೆ ಆರ್ಕಿಡ್ ಬೆಳೆಗಾರಿಕೆಯ ವೈಜ್ಞಾನಿಕ ವಿಧಾನಗಳನ್ನು ಪ್ರಾಯೋಗಿಕವಾಗಿ ವಿವರಿಸಿದರು.

ಪ್ರಾತ್ಯಕ್ಷಿಕೆಯಲ್ಲಿ ಆರ್ಕಿಡ್ ಬೆಳೆಗೆ ಸೂಕ್ತವಾದ ಮೀಡಿಯಾ ತಯಾರಿಕೆ, ಹೂಕುಂಡ ತುಂಬುವ ವಿಧಾನ, ಮೌಂಟಿAಗ್ ತಂತ್ರ, ನೆಡುವ ವಿಧಾನ, ನೀರಾವರಿ, ಪೋಷಕಾಂಶ ನಿರ್ವಹಣೆ ಹಾಗೂ ಆರೈಕೆ ಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಉತ್ತಮ ಗುಣಮಟ್ಟದ ಆರ್ಕಿಡ್ ಬೆಳೆಯಲು ಅನುಸರಿಸಬೇಕಾದ ಪ್ರಮುಖ ಅಂಶಗಳನ್ನು ರೈತರಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ರೈತರಾದ ವಸಂತ್, ಶೈಲೇಶ್, ಮುರಳಿ, ನರೇನ್, ಮುಕುಂದ, ಮುತ್ತಮ್ಮ, ಗಾನ ಗೌರಮ್ಮ, ಪ್ರಮೀಳಾ ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.