ಪೊನ್ನಂಪೇಟೆ, ಸೆ. ೧೬: ಕೊಡವ ಎಜುಕೇಷನ್ ಸೊಸೈಟಿ ಆಶ್ರಯದಲ್ಲಿ ೨೦೧೭ರಲ್ಲಿ ಆರಂಭಗೊAಡ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಪ್ರಿ-ಯೂನಿವರ್ಸಿಟಿ ಕಾಲೇಜು ೧೦ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆ ’ಘಿ ಕಿUಇSಖಿಂ - ಖಿhe ಕಿuesಣ ಜಿoಡಿ ಏಟಿoತಿಟeಜge ಚಿಟಿಜ ಅಡಿeಚಿಣiviಣಥಿ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಕೊಡವ ಎಜುಕೇಷನ್ ಸೊಸೈಟಿ ನಿರ್ದೇಶಕ ಕೆ.ಪಿ. ಸುಬ್ರಮಣಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹುಟ್ಟಿನಿಂದ ಚಿತಾಭಸ್ಮದವರೆಗೂ ಸಮಾಜಕ್ಕೆ ಸಂಘ-ಸAಸ್ಥೆಗಳ ಅಗತ್ಯವಿದೆ. ಕೊಡವ ಎಜುಕೇಶನ್ ಸೊಸೈಟಿಯನ್ನು ಕಟ್ಟಿ ಬೆಳೆಸುವಲ್ಲಿ ಡಾ. ಚೆಂಗಪ್ಪ ಅವರಂತಹವರ ಸೇವೆ ಮಹತ್ವದ್ದಾಗಿದೆ. ಮುಂದಿನ ೨೦-೩೦ ವರ್ಷಗಳಲ್ಲಿ ಯುವಕ-ಯುವತಿಯರು ಸ್ಥಳೀಯ ಸಂಘ-ಸAಸ್ಥೆಗಳು, ಸಹಕಾರಿ ಬ್ಯಾಂಕ್ ಮುಂತಾದ ಸಂಸ್ಥೆಗಳ ಜವಾಬ್ದಾರಿ ವಹಿಸಿಕೊಂಡು ಮುನ್ನಡೆಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ ಮಾತನಾಡಿ, ವಿದ್ಯಾರ್ಥಿಗಳ ಯಶಸ್ಸು ಕೇವಲ ೧೦೦ಕ್ಕೆ ೧೦೦ ಅಂಕ ಗಳಿಸುವುದರಲ್ಲಿ ಇಲ್ಲ, ಸರ್ವಾಂಗೀಣ ಅಭಿವೃದ್ಧಿಯೂ ಮುಖ್ಯ. ಶಿಕ್ಷಣದ ಜೊತೆಗೆ ಪ್ರತಿಭೆ, ಸೃಜನಶೀಲತೆ ಮತ್ತು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಸಾಮಾನ್ಯ ಹಿನ್ನೆಲೆಯಿಂದ ಬಂದವರು ಪರಿಶ್ರಮದಿಂದ ದೊಡ್ಡ ಸಾಧನೆ ಮಾಡಿದ್ದಾರೆ ಎಂಬುದನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದರು.
ಸಿಐಪಿಯುಸಿ ಪ್ರಾಂಶುಪಾಲೆ ರೋಹಿಣಿ ತಿಮ್ಮಯ್ಯ ಮಾತನಾಡಿ, ಕಾಲೇಜು ಆವರಣದಲ್ಲಿ ನಡೆದ ‘ಎಕ್ಸ್-ಕ್ವೆಸ್ಟಾ’ ಕಾರ್ಯಕ್ರಮದಲ್ಲಿ ೨೮ ಶಾಲೆಗಳ ಸುಮಾರು ೩೦೦ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ವಿಜ್ಞಾನ, ಗಣಿತ, ತಾರ್ಕಿಕ ಸಾಮರ್ಥ್ಯ ಹಾಗೂ ತಂತ್ರಜ್ಞಾನ ವಿಷಯಗಳನ್ನೊಳಗೊಂಡ ಆನ್‌ಲೈನ್ ರಸಪ್ರಶ್ನೆ ಮತ್ತು ವಿವಿಧ ವಿಷಯಾಧಾರಿತ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಸೃಜನಶೀಲತೆಗೆ ವೇದಿಕೆ ಕಲ್ಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಸ್ಪರ್ಧೆಗಳ ಫಲಿತಾಂಶ:
ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಧ್ರುವ ವಿ ಭಾರದ್ವಾಜ್ ರೂ.೧೦,೦೦೦, ದ್ವಿತೀಯ ಕ್ರಿಶ್ ಜಾಸ್ವಾಲ್ ರೂ.೯೦೦೦, ತೃತೀಯ ಗಗನ್ ರೂ.೮,೦೦೦ ನಗದು ಬಹುಮಾನವನ್ನು ಪಡೆದುಕೊಂಡರು. ನೃತ್ಯ ಸ್ಪರ್ಧೆಯಲ್ಲಿ ಮೂರ್ನಾಡಿನ ಜ್ಞಾನಜ್ಯೋತಿ ಪ್ರೌಢಶಾಲೆಯ ರೂಟ್ಸ್ ಟು ವಿನ್ ತಂಡ ಪ್ರಥಮ ರೂ.೬,೦೦೦ ಹಾಗೂ ದ್ವಿತೀಯ ಸ್ಥಾನವನ್ನು ವೀರಾಜಪೇಟೆಯ ಎಸ್‌ಎಂಎಸ್ ಶಾಲೆಯ ನೃತ್ಯ ಮಂಡಲ ತಂಡ ರೂ.೫,೦೦೦ ನಗದು ಬಹುಮಾನ ಪಡೆದುಕೊಂಡಿತು.
ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಶಾಸ್ತಿçÃಯ ಗಾಯಕಿ ಮತ್ತು ನೃತ್ಯ ಸಂಯೋಜಕಿ ಚೇಂದಿರ ನಿರ್ಮಲ ಬೋಪಣ್ಣ ಹಾಗೂ ಪೊನ್ನಂಪೇಟೆಯ ನಾಟ್ಯ ಸಂಕಲ್ಪ ನೃತ್ಯ ಶಾಲೆಯ ನಾಟ್ಯ ನಿರ್ದೇಶಕಿ ಪ್ರೇಕ್ಷಾ ಭಟ್ ಭಾಗವಹಿಸಿದ್ದರು.
ಸ್ಪರ್ಧಿಗಳು ರೂಟ್ಸ್ ಆಫ್ ವಿಂಗ್ ಮತ್ತು ಪಂಚತತ್ವ ಎಂಬ ಥೀಮ್ ಆಧರಿಸಿ ಕಥಾಹಂದರವನ್ನು ಸೃಜನಾತ್ಮಕವಾಗಿ ಸೃಷ್ಟಿಸಿ ಅಭಿನಯಿಸಿ, ನೃತ್ಯ ಮಾಡಿದರು. ಕಾರ್ಯಕ್ರಮದ ಸಂಯೋಜಕರಾಗಿ ಡಾ.ಸುಷ್ಮತಾ ಹಾಗೂ ಶೃತಿ ಕಾರ್ಯ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಿ.ಐ.ಟಿ ಪ್ರಾಂಶುಪಾಲ ಡಾ.ಎಂ ಬಸವರಾಜ್, ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಸಿ.ಐ.ಪಿ.ಯು ಕಾಲೇಜಿನ ಶಿಕ್ಷಕ ವೃಂದದವರು, ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.