ವೀರಾಜಪೇಟೆ, ಸೆ. ೧೫: ಪೂರ್ವಜರು ಕಂಡುಕೊAಡ ಸಾಂಪ್ರದಾಯಿಕ ಪದ್ಧತಿಗಳು ಸಂಶೋಧನೆಯ ಮೂಲಕ ಪರಿಪೂರ್ಣಗೊಂಡು ಇಂದಿಗೂ ಬಳಕೆಯಲ್ಲಿವೆ ಎಂದು ಕೊಡಗು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಅಶೋಕ ಎಸ್. ಆಲೂರ ಅಭಿಪ್ರಾಯಪಟ್ಟರು.
ಸೆಂಟ್ ಆ್ಯನ್ಸ್ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಐಕ್ಯೂಎಸಿ ಹಾಗೂ ಐಪಿಆರ್ ಕೋಶ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ‘ಉನ್ನತ ಶಿಕ್ಷಣದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳು: ಸಂಶೋಧನೆಯಿAದ ನಾವೀನ್ಯತೆ ಮತ್ತು ವಾಣಿಜ್ಯೀಕರಣದವರೆಗೆ’ ಎಂಬ ವಿಷಯದ ಕುರಿತು ಆಯೋಜಿಸಿದ್ದ ಒಂದು ದಿನದ ರಾಷ್ಟಿçÃಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸೃಜನಶೀಲತೆ ಹಾಗೂ ನವೋದ್ಯಮದತ್ತ ಗಮನಹರಿಸಿ ಗುರಿ ಹೊಂದಬೇಕು. ಸಮಾಜದ ಅಗತ್ಯತೆಗಳಿಗೆ ಸ್ಪಂದಿಸುವ ಹಾಗೂ ಆಧುನಿಕ ಯುಗಕ್ಕೆ ತಕ್ಕಂತಹ ನೂತನ ಆವಿಷ್ಕಾರಗಳನ್ನು ಕಂಡುಕೊಳ್ಳುವ ಮೂಲಕ ವಾಣಿಜ್ಯ ಅಭಿವೃದ್ಧಿಗೆ ಸಹಕರಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಕೆಲವು ಸಾಂಪ್ರದಾಯಿಕ ವಸ್ತುಗಳ ನಿರ್ಮಾಣ ವಿಧಾನಗಳು ಇಂದಿಗೂ ಆಧುನಿಕ ತಂತ್ರಜ್ಞಾನಕ್ಕೆ ಸವಾಲು ಒಡ್ಡುತ್ತಿವೆ. ಆಧುನಿಕತೆ ಬರುವ ಮುನ್ನ ಬಳಸುತ್ತಿದ್ದ ಹಲವು ವಸ್ತುಗಳ ಕುರಿತು ಸಂಶೋಧನೆಗಳು ನಡೆದು ಅವುಗಳಿಗೆ ಹೊಸ ರೂಪ ನೀಡಲಾಗಿದೆ ಎಂದು ಹೇಳಿದರು.
ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ರೆ. ಫಾ. ಮುದಲೈ ಮುತ್ತು ಮಾತನಾಡಿ, ನಿರಂತರ ಸಂಶೋಧನೆಗಳ ಮೂಲಕ ಆಧುನಿಕತೆಗೆ ಹೊಂದಿಕೊAಡ ವಾತಾವರಣ ನಿರ್ಮಾಣವಾಗುತ್ತಿದೆ. ತಂತ್ರಜ್ಞಾನ ಬೆಳವಣಿಗೆಯೊಂದಿಗೆ ಹೊಸ ಆವಿಷ್ಕಾರಗಳು ಹುಟ್ಟಿಕೊಳ್ಳುತ್ತಿವೆ. ಕೆಲವು ಸಂಶೋಧನೆಗಳು ಸಮಾಜಕ್ಕೆ ಪೂರಕವಾಗಿ ಪರಿಣಮಿಸಿದರೆ, ಇನ್ನು ಕೆಲವು ಮಾರಕವಾಗಿಯೂ ಪರಿಣಮಿಸಬಹುದು. ಸಂಶೋಧನೆಯ ಉದ್ದೇಶ ಮತ್ತು ಅದರ ಬಳಕೆಯನ್ನು ಸೂಕ್ಷö್ಮವಾಗಿ ಗ್ರಹಿಸಿದಾಗ ಮಾತ್ರ ನಾವೀನ್ಯತೆಯ ಮಹತ್ವ ಅರಿವಾಗುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಚಾರ ಸಂಕಿರಣದಲ್ಲಿ ‘ಶಿಕ್ಷಣ ಕ್ಷೇತ್ರದಲ್ಲಿ ಐಪಿಆರ್: ಆಲೋಚಿಸಿ, ರಚಿಸಿ ಮತ್ತು ರಕ್ಷಿಸಿ’*ವಿಷಯದ ಕುರಿತು ಕೆಎಸ್ಸಿಎಸ್ಟಿ ಪ್ರಾಜೆಕ್ಟ್ ಇಂಜಿನಿಯರ್ ವಿನೀತ್ ಕುಮಾರ್ ಎಸ್.ಆರ್., ‘ಜೀವವೈವಿಧ್ಯ ಮತ್ತು ಭೌಗೋಳಿಕ ಸೂಚ್ಯಂಕ (ಜಿಐ)’ ಕುರಿತು ಕೆಎಲ್ಇ ಸೊಸೈಟಿ, ಬೆಂಗಳೂರಿನ ಉಪಪ್ರಾಧ್ಯಾಪಕಿ ರಶ್ಮೀ ಹಾಗೂ ‘ಸಂಶೋಧನಾ ಪ್ರಬಂಧಗಳನ್ನು ಮೀರಿದ್ದು: ಸಂಶೋಧನೆಯನ್ನು ಬೌದ್ಧಿಕ ಆಸ್ತಿಯನ್ನಾಗಿ ಪರಿವರ್ತಿಸುವುದು’ ವಿಷಯದ ಕುರಿತು ಕಾವೇರಿ ಕಾನೂನು ಕಾಲೇಜು, ವೀರಾಜಪೇಟೆಯ ಪ್ರಾಂಶುಪಾಲೆ ವಿನೀತಾ ಪಿ. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿಚಾರ ಮಂಡಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಐಪಿಆರ್ ವಿಭಾಗದ ಸಂಚಾಲಕಿ ಪೂಜಾ ಎಚ್.ಕೆ., ಕಾರ್ಯಕ್ರಮ ಸಂಚಾಲಕಿ ನಿಶಾ ಸಿ.ಎಲ್. ಹಾಗೂ ಐಕ್ಯೂಎಸಿ ಸಂಚಾಲಕಿ ಹೇಮಾ ಬಿ.ಡಿ. ಉಪಸ್ಥಿತರಿದ್ದರು. ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಸ್ವಾಗತಿಸಿದರು. ವಿದ್ಯಾರ್ಥಿನಿ ನಿಶಿ ಸರಸ್ವತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.