ವೀರಾಜಪೇಟೆಯಲ್ಲಿ ಗಣೇಶೋತ್ಸವ ಸಂಭ್ರಮ - ೨೧ ಸಮಿತಿಗಳಿಂದ ಗಣಪನ ಪ್ರತಿಷ್ಠಾಪನೆ

ವಿಶೇಷ ವರದಿ : ಈಶಾನ್ವಿ

ವೀರಾಜಪೇಟೆ: ಗೌರಿ-ಗಣೇಶ ಪ್ರತಿಷ್ಠಾಪನಾ ಮಹೋತ್ಸವವು ಸೋಮವಾರ ವೀರಾಜಪೇಟೆ ಪಟ್ಟಣದಲ್ಲಿ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿAದ ನೆರವೇರಿತು. ಪಟ್ಟಣದ ಪ್ರಮುಖ ೨೧ ಸಮಿತಿಗಳ ವತಿಯಿಂದ ಒಂದಕ್ಕಿAತ ಒಂದು ವಿಭಿನ್ನವಾದ ಹಾಗೂ ಆಕರ್ಷಕವಾದ ಪರಿಸರ ಸ್ನೇಹಿ ಗಣಪತಿಯ ಮೂರ್ತಿಗಳನ್ನು ಶಾಸ್ತೊçÃಕ್ತವಾಗಿ, ಸಂಪ್ರದಾಯಬದ್ಧವಾಗಿ ಪ್ರತಿಷ್ಠಾಪಿಸಲಾಯಿತು.

ಪ್ರತಿವರ್ಷದ ಸಂಪ್ರದಾಯದAತೆ, ನಗರಕ್ಕೆ ಕಳಸಪ್ರಾಯದಂತಿರುವ ಐತಿಹಾಸಿಕ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಬೆಳಿಗ್ಗೆ ವಿಶೇಷ ಹೋಮ-ಹವನಗಳು ಹಾಗೂ ಸಾಮೂಹಿಕ ಗಣಹೋಮ ಜರುಗಿತು. ವಿವಿಧ ಬಗೆಯ ಹೂವುಗಳಿಂದ ಅಲಂಕೃತಗೊAಡ ದೇವಸ್ಥಾನದಲ್ಲಿ ಗಣೇಶನ ಉತ್ಸವ ಮೂರ್ತಿಯನ್ನು ಪ್ರಥಮವಾಗಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.

ಬಳಿಕ ಸಿಡಿಮದ್ದು ಸಿಡಿಸುವ ಮೂಲಕ ಪಟ್ಟಣದ ಇತರ ಸಮಿತಿಗಳಿಗೆ ಪ್ರತಿಷ್ಠಾಪನೆಗೆ ಅಧಿಕೃತ ಸೂಚನೆ ನೀಡಲಾಯಿತು. ದೇವಾಲಯದಲ್ಲಿ ಸೂಚನೆ ಸಿಗುತ್ತಿದ್ದಂತೆಯೇ, ಪ್ರಸಿದ್ಧ ಶ್ರೀ ಬಸವೇಶ್ವರ ದೇವಾಲಯ ಸೇರಿದಂತೆ ಉಳಿದ ೨೦ ಪ್ರಮುಖ ಸಮಿತಿಗಳಲ್ಲಿ ಏಕಕಾಲದಲ್ಲಿ ಮಂತ್ರಘೋಷಗಳೊAದಿಗೆ, ಶಾಸ್ತೊçÃಕ್ತವಾಗಿ ವಿಘ್ನೇಶ್ವರನ ಪ್ರತಿಷ್ಠಾಪನೆ ನೆರವೇರಿತು.

ಕಾವೇರಿ ಗಣೇಶೋತ್ಸವ ಸಮಿತಿ (ಮೂರ್ನಾಡು ರಸ್ತೆ), ಶ್ರೀ ವಿನಾಯಕ ಸೇವಾ ಸಮಿತಿ (ಪಂಜರ್‌ಪೇಟೆ), ಶ್ರೀ ಮಹಾ ಗಣಪತಿ ಸೇವಾ ಸಂಘ (ಗಣಪತಿ ಬೀದಿ), ಶ್ರೀ ಬಸವೇಶ್ವರ ದೇವಾಲಯ, ಮಹಾಗಣಪತಿ ದೇವಾಲಯ, ಶ್ರೀ ವಿಘ್ನೇಶ್ವರ ಸೇವಾ ಸಮಿತಿ (ಅರಸು ನಗರ) ವಿನಾಯಕ ಭಕ್ತ ಮಂಡಳಿ (ಅಂಗಾಳ ಪರಮೇಶ್ವರಿ ದೇವಸ್ಥಾನ),ನೇತಾಜಿ ಗಣೇಶೋತ್ಸವ ಸಮಿತಿ (ನೆಹರು ನಗರ), ವಿಜಯ ವಿನಾಯಕ ಉತ್ಸವ ಸಮಿತಿ (ದಖ್ಖನಿ ಮೊಹಲ್ಲ), ಕಣ್ಣಣ್ಣಿ ಯುವಕ ಸಂಘ (ಮಲೆತಿರಿಕೆ ಬೆಟ್ಟ), ಸರ್ವಸಿದ್ಧಿ ವಿನಾಯಕ ಉತ್ಸವ ಸಮಿತಿ (ಸುಂಕದಕಟ್ಟೆ), ಶ್ರೀ ಗಣಪತಿ ಸೇವಾ ಸಮಿತಿ (ಗಾಂಧಿನಗರ), ಶ್ರೀ ವಿಘ್ನೇಶ್ವರ ಸೇವಾ ಸಮಿತಿ (ಕೆ.ಬೋಯಿಕೇರಿ), ಜಲದರ್ಶಿನಿ ಗಣೇಶೋತ್ಸವ ಸಮಿತಿ (ಚಿಕ್ಕಪೇಟೆ), ವಿಘ್ನೇಶ್ವರ ಸೇವಾ ಸಮಿತಿ (ಪೌರಸೇವಾ ನೌಕರರ ಸಂಘ, ಪುರಸಭೆ), ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿ (ಮೀನುಪೇಟೆ), ಶ್ರೀ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ (ಹರಿಕೇರಿ), ವರದ ವಿನಾಯಕ ಉತ್ಸವ ಸಮಿತಿ ಅಯ್ಯಪ್ಪ ಬೆಟ್ಟ, ಶ್ರೀ ಕುಂದತ್ ವಿನಾಯಕ ಯುವಕರ ಸಮಿತಿ (ಕುಕ್ಲೂರು) ಶ್ರೀ ಬಾಲ ಆಂಜನೇಯ ಗಣಪತಿ ಸೇವಾ ಸಮಿತಿ (ಅಪ್ಪಯ್ಯ ಸ್ವಾಮಿ ರಸ್ತೆ) ವಿನಾಯಕ ಸೇವಾ ಸಮಿತಿ (ಶಿವಕೇರಿ) ಒಟ್ಟು ೨೧ ಸ್ಥಳಗಳಲ್ಲಿ ವಿನಾಯಕನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ಈ ಬಾರಿ ಗೌರಿಕೆರೆಯಲ್ಲಿನ ಶ್ರೀ ಗೌರಿಕೆರೆ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪನೆ ನಡೆದಿಲ್ಲ. ನಗರ ವ್ಯಾಪ್ತಿಯ ಸುಮಾರು ೩೧ ಕಡೆಗಳಲ್ಲಿ ನಗರದ ಹೊರವಲಯಗಳಲ್ಲಿ ಹಾಗೂ ಸಾರ್ವಜನಿಕರ ಮನೆಗಳಲ್ಲಿಯೂ ಸೇರಿ ಒಟ್ಟಾರೆಯಾಗಿ ೧೦೦ಕ್ಕೂ ಹೆಚ್ಚು ಕಡೆಗಳಲ್ಲಿ ವಿಘ್ನೇಶ್ವರನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.

ಸೋಮವಾರಪೇಟೆಯ ವಿವಿಧೆಡೆ ಗೌರಿ-ಗಣೇಶ ಪ್ರತಿಷ್ಠಾಪನೆ

ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಗ್ರಾಮಾಭಿವೃದ್ಧಿ ಮಂಡಳಿ, ಯುವಕ ಸಂಘಗಳ ಆಶ್ರಯದಲ್ಲಿ ಗೌರಿ ಗಣೇಶೋತ್ಸವ ಆಚರಣೆ ಸಂಭ್ರಮದಿAದ ಆಯೋಜಿಸಿದ್ದು, ಸ್ವರ್ಣ ಗೌರಿ ಹಾಗೂ ಗಣೇಶನ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ ವಿವಿಧ ಪೂಜಾ ಕಾರ್ಯಗಳೊಂದಿಗೆ ಸಡಗರದಿಂದ ನಡೆಯಿತು.

ಗ್ರಾಮದ ಸಮುದಾಯ ಭವನಗಳು, ದೇವಾಲಯ, ಪೆಂಡಾಲ್‌ಗಳನ್ನು ನಿರ್ಮಿಸಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಉತ್ಸವ ಮೂರ್ತಿಗಳನ್ನು ಗಂಗಾಪೂಜೆಯೊAದಿಗೆ ಮೆರವಣಿಗೆ ಮೂಲಕ ತಂದು ಪೀಠದಲ್ಲಿ ಪ್ರತಿಷ್ಠಾಪಿಸಲಾಯಿತು. ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟಂತೆ ಒಟ್ಟು ೮೫ ಕಡೆಗಳಲ್ಲಿ ಗೌರಿ ಗಣೇಶೋತ್ಸವ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದ್ದು, ಮೂರು ಕಡೆಗಳಲ್ಲಿ ಪ್ರತಿಷ್ಠಾಪಿಸಿದ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ಸಂಜೆ ನೆರವೇರಿತು. ಅ.೪ರೊಳಗೆ ಬಹುತೇಕ ಎಲ್ಲಾ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ನಡೆಯಲಿದೆ. ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಸೇವಾ ಸಮಿತಿಯ ವತಿಯಿಂದ ಪೆಂಡಾಲ್ ನಿರ್ಮಿಸಿ ಉತ್ಸವ ಆಚರಿಸಲಾಗುತ್ತಿದೆ. ಇದರೊಂದಿಗೆ ಕಕ್ಕೆಹೊಳೆ ಜಂಕ್ಷನ್ ಬಳಿ ಶ್ರೀ ಗಣಪತಿ ಸೇವಾ ಸಮಿತಿ, ಆಲೇಕಟ್ಟೆ ರಸ್ತೆಯಲ್ಲಿ ಭಾರತೀಯ ಯುವಕ ಸಂಘ, ಸೋಮೇಶ್ವರ ದೇವಾಲಯ, ಬಸವೇಶ್ವರ ದೇವಾಲಯ, ಶ್ರೀ ರಾಮಮಂದಿರ, ಆನೆಕೆರೆ ಜಂಕ್ಷನ್, ಕಿಬ್ಬೆಟ್ಟ, ತಣ್ಣೀರುಹಳ್ಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.