ಸೋಮವಾರಪೇಟೆ, ಸೆ. ೧೫: ವೃದ್ಧೆ ಪತ್ನಿಗೆ ಗುಂಡು ಹೊಡೆದು ಹತ್ಯೆ ಮಾಡಿದ ನಂತರ ತಾನೂ ಸಹ ಕೋವಿಯಿಂದ ಗುಂಡು ಹಾರಿಸಿಕೊಂಡು ವೃದ್ಧರೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗಡಿಗೆ ಗ್ರಾಮದಲ್ಲಿ ನಿನ್ನೆ ಸಂಭವಿಸಿದೆ.

ಕುAಬಾರಗಡಿಗೆ ಗ್ರಾಮದ ಕನ್ನಿಕÀಂಡ ಟಿ. ಸುಬ್ಬಯ್ಯ (ಕಮ್ಮಣಿ-೭೭) ಹಾಗೂ ಪತ್ನಿ ಬೋಜಮ್ಮ (ಸರಸು-೭೪) ಎಂಬವರುಗಳೇ ಸಾವನ್ನಪ್ಪಿದವರಾಗಿದ್ದು, ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಹಿತ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.

ಘಟನೆಯ ಬಗ್ಗೆ ಸುಬ್ಬಯ್ಯ ಅವರ ಪುತ್ರ ದೊರೆಮಣಿ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸುಬ್ಬಯ್ಯ ಅವರು ಪತ್ನಿ ಬೋಜಮ್ಮ ಅವರಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದು, ನಂತರ ಮನೆಯೊಳಗೆ ತೆರಳಿ ಅದೇ ಬಂದೂಕಿನಿAದ ಗುಂಡು ಹಾರಿಸಿಕೊಂಡು ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ೯ ಗಂಟೆಯಿAದ ಮಧ್ಯಾಹ್ನ ೨ ಗಂಟೆಯ ಒಳಗೆ ಘಟನೆ ಸಂಭವಿಸಿರಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಘಟನೆ ನಡೆದ ದಿನದಂದು ತಾನು ಮತ್ತು ಮಗಳು, ತಮ್ಮನ ಮಗ ಅಬ್ಬೂರುಕಟ್ಟೆಯಲ್ಲಿರುವ ಸಂಬAಧಿಕರ ಮನೆಗೆ ತೆರಳಿದ್ದು, ಮಧ್ಯಾಹ್ನ ೨ ಗಂಟೆ ಸುಮಾರಿಗೆ ಗ್ರಾಮಸ್ಥರೋರ್ವರು ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ನಂತರ ಮನೆಗೆ ಆಗಮಿಸಿದಾಗ ಈರ್ವರು ಮೃತಪಟ್ಟಿರುವುದು ದೃಢಪಟ್ಟಿದೆ. ತನ್ನ ಸಹೋದರ ಭೀಮಣಿ ಅವರೂ ಸಹ ಗ್ರಾಮದ ದೇವಾಲಯ ಆವರಣ ಸ್ವಚ್ಛತಾ ಕಾರ್ಯಕ್ಕೆ ಹೋಗಿದ್ದು, ಸ್ಥಳದಲ್ಲಿ ಯಾರೂ ಇಲ್ಲದ ಸಂದರ್ಭ ತಾಯಿಯನ್ನು ಹತ್ಯೆ ಮಾಡಿ ತಂದೆಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪುತ್ರ ದೊರೆಮಣಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತನ್ನ ತಂದೆ ಮುಂಗೋಪಿಯಾಗಿದ್ದು, ಈ ಹಿಂದಿನಿAದಲೂ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ನಿನ್ನೆ ದಿನ ಮತ್ತೆ ಗಲಾಟೆ ನಡೆದ ಸಂದರ್ಭ ಕೋವಿಯಿಂದ ಗುಂಡು ಹಾರಿಸಿರಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಡಿವೈಎಸ್‌ಪಿ ಚಂದ್ರಶೇಖರ್, ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಹದೇವ ಸೇರಿದಂತೆ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಮೃತರು ಐವರು ಮಕ್ಕಳನ್ನು ಅಗಲಿದ್ದಾರೆ.

ಘಟನೆಯ ಬಗ್ಗೆ ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಹದೇವ ಅವರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.