ಚಿಕ್ಕಮಗಳೂರು, ಸೆ. ೧೩: ದೇಶದ ಪ್ರಮುಖ ಕಾಫಿ ಸಂಶೋಧನಾ ಸಂಸ್ಥೆಯಾದ ಕಾಫಿ ಮಂಡಳಿಯ ಅಧೀನದ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ (ಅಅಖI) ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ, ಭಾರತೀಯ ಕಾಫಿಯ ಭವಿಷ್ಯಕ್ಕಾಗಿ ಗುಣಮಟ್ಟದ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಖಾಸಗಿ ಪಾಲುದಾರರನ್ನು ಭಾಗಿಯಾಗಿಸಲು ನಿರ್ಧರಿಸಿದೆ.

ಈತನಕ ಕಾಫಿ ಮಂಡಳಿಯು ಆಸಕ್ತ ಬೆಳೆಗಾರರಿಗೆ ವಿವಿಧ ತಳಿಯ ಬೀಜಗಳನ್ನು ಒದಗಿಸುತಿತ್ತು. ಈಗ ಒಂದು ಹೆಜ್ಜೆ ಮುಂದೆ ಹೋಗಿ ಬೀಜ ಪಡೆದ ಕಾಫಿ ನರ್ಸರಿ ಮಾಲೀಕರಿಗೆ ಕಾಫಿ ಮಂಡಳಿಯ ಅಧಿಕೃತ ಮಾನ್ಯತೆಯನ್ನು ಒದಗಿಸಲಿದೆ. ಈ ಮಾನ್ಯತೆಯಲ್ಲಿ ಕಾಫಿ ಮಂಡಳಿಯ ಅಧಿಕಾರಿಗಳು ನರ್ಸರಿಗೆ ಭೇಟಿ ನೀಡಿ ಗಿಡಗಳ ಬೆಳವಣಿಗೆಯನ್ನು ಪರಿಶೀಲಿಸುವುದಲ್ಲದೆ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ. ಆದರೆ ಈ ರೀತಿ ಮಾನ್ಯತೆ ಪಡೆಯಬಯಸುವ ನರ್ಸರಿ ಮಾಲೀಕರು ಕಾಫಿ ಮಂಡಳಿಯು ನೀಡುವ ಬೀಜಗಳನ್ನು ಮಾತ್ರವೇ ಬೆಳೆಯಬೇಕಿದೆ ಇತರ ಅಥವಾ ತಮ್ಮದೇ ತೋಟದಿಂದ ಬೆಳೆದ ಬೀಜವನ್ನು ಉಪಯೋಗಿಸಲು ಅವಕಾಶವಿಲ್ಲ. ಇದಕ್ಕೆ ನಿಗದಿತ ಶುಲ್ಕವನ್ನೂ ಕಾಫಿ ಮಂಡಳಿಗೆ ಪಾವತಿಸಬೇಕಿದ್ದು ಗಿಡಗಳ ಮಾರಾಟದಲ್ಲಿ ಕಾಫಿ ಮಂಡಳಿಗೆ ರಾಯಧನವನ್ನೂ ನೀಡಬೇಕಾಗುತ್ತದೆ.

ಈ ಕುರಿತು ಮಾಹಿತಿ ನೀಡಿದ ಬಾಳೆ ಹೊನ್ನೂರು ಕಾಫಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ ಎಂ ಸೆಂತಿಲ್ ಕುಮಾರ್ ಈ ಯೋಜನೆ ಇನ್ನೂ ಆರಂಬಿಕ ಹಂತದಲ್ಲಿದ್ದು ರೂಪು ರೇಷೆಯನ್ನು ಅಧಿಕಾರಿಗಳ ತಂಡವು ಶೀಘ್ರದಲ್ಲಿ ಅಂತಿಮ ಗೊಳಿಸಲಿದೆ ಎಂದು ಹೇಳಿದರು. ಈ ಮಾನ್ಯತೆ ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳುವ ಕಾಫಿ ಬೆಳೆಗಾರರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಗರಿಷ್ಟ ಮಿತಿ ಇಲ್ಲದೆ ಮಂಡಳಿಯಿAದ ಬೀಜವನ್ನು ಖರೀದಿಸಬಹುದು. ತಮ್ಮ ನರ್ಸರಿಯಲ್ಲಿ ಕಾಫಿ ಮಂಡಳಿಯ ಮೇಲ್ವಿಚಾರಣೆಯಡಿಯಲ್ಲಿ , ಮಂಡಳಿಯ ಗುಣ ಮಟ್ಟದ ಮಾನದಂಡಕ್ಕೆ ಅನುಗುಣವಾಗಿ ಗಿಡಗಳನ್ನು ಬೆಳೆಸಬೇಕು. ಮಾನ್ಯತೆ ಪಡೆದ ನರ್ಸರಿ ಮಾಲೀಕರು ಕಾಫಿ ಮಂಡಳಿಯ ಮಾನ್ಯತೆ ಪಡೆದ ನರ್ಸರಿ ಎಂಬ ಬೋರ್ಡ್ ಮೂಲಕ ಪ್ರಚಾರ ಮಾಡಿಕೊಂಡು ಗಿಡ ಮಾರಾಟ ಮಾಡಬಹುದಾಗಿದೆ. ಈ ರೀತಿ ಮಾನ್ಯತೆ ಪಡೆಯಲು ಕಾಫಿ ಮಂಡಳಿಯು ಷರತ್ತು ನಿಬಂಧನೆಗಳಿಗೆ ಒಪ್ಪಿ ಒಪ್ಪಂದ ಪತ್ರ ಮಾಡಿಕೊಳ್ಳಬೇಕಾಗುತ್ತದೆ. ಈ ರೀತಿ ಪಡೆದ ಮಾನ್ಯತೆ ೫ ವರ್ಷಗಳವರೆಗೆ ಚಾಲ್ತಿಯಲ್ಲಿರುತ್ತದೆ. ಅವಧಿ ಮುಗಿದ ನಂತರ ಮುಂದಿನ ಅವಧಿಗೆ ನವೀಕರಿಸಿಕೊಳ್ಳಬಹುದಾಗಿದೆ. ಆದರೆ ಮಂಡಳಿಯ ಷರತ್ತು ಉಲ್ಲಂಘಿಸಿದರೆ , ಮಾನ್ಯತೆಯು ರದ್ದಾಗಲಿದೆ. ಇದರ ಹೊರತಾಗಿ ಕಾಪಿ ಮಂಡಳಿಯ ಬೀಜ ಮಾರಾಟ ಎಂದಿನAತೆ ಇರಲಿದೆ. ಖಾಸಗಿಯವರ ಪಾಲುದಾರಿಕೆಯು ಕಾಫಿ ಮಂಡಳಿಯ ಮೊಟ್ಟ ಮೊದಲ ಪ್ರಯೋಗವಾಗಿದ್ದು ಈ ಮೂಲಕ ಕಾಫಿಯ ಗುಣಮಟ್ಟವನ್ನು ಸಸಿಯಾಗಿದ್ದಾಗಿನಿಂದಲೇ ಕಾಪಾಡುವುದು ಮಂಡಳಿಯ ಗುರಿ ಆಗಿದೆ ಎಂದು ಸೆಂತಿಲ್ ಕುಮಾರ್ ತಿಳಿಸಿದರು. ಈ ಯೋಜನೆಯಲ್ಲಿ ಕಾಫಿ ನರ್ಸರಿ ಮಾಡುವವರಿಗೆ ಸೂಕ್ತ ತರಬೇತಿಯನ್ನೂ ನೀಡಲಾಗುವುದು. ಎಲ್ಲವೂ ಸರಿ ಹೋದರೆ ಮುಂದಿನ ಎರಡು ತಿಂಗಳಿನಲ್ಲಿ ಈ ನೂತನ ಯೋಜನೆ ಜಾರಿಗೆ ಬರಲಿದೆ. ಕಾಫಿ ಮಂಡಳಿಯ ಅಧಿಕೃತ ನರ್ಸರಿ ಆಗುವುದರಿಂದ ಬೆಳೆಗಾರರಿಗೂ ಗುಣಮಟ್ಟದ ಕಾಫಿ ಸಸಿಗಳು ದೊರೆಯಲಿದೆ ಎಂದು ತಿಳಿಸಿದರು.