ಮುಳ್ಳೂರು, ಸೆ. ೧೩: ಶನಿವಾರಸಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಪ್ರತಿದಿನ ಸುಮಾರು ಇಪ್ಪತ್ತಕ್ಕೂ ಹೆಚ್ಚು ವೈಟ್ ಬೋರ್ಡ್ ಟ್ಯಾಕ್ಸಿಗಳು ಬಾಡಿಗೆಗೆ ಹೋಗುತ್ತಿದ್ದು ಇದರಿಂದ ಈಗಾಗಲೇ ಹಳದಿ ಬೋರ್ಡ್ ಟ್ಯಾಕ್ಸಿ ಹೊಂದಿರುವವರಿಗೆ ತೊಂದರೆ ಅಗುತ್ತಿದೆ ಎಂದು ಕರ್ನಾಟಕ ಟ್ಯಾಕ್ಸಿ ಡ್ರೆöÊವರ್ ಟ್ರೇಡ್ ಯೂನಿಯನ್ ಸೋಮವಾರಪೇಟೆ ಮತ್ತು ಶನಿವಾರಸಂತೆ ವತಿಯಿಂದ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಯಿತು.
ಸಂಘಟಕರು ನೀಡಿರುವ ದೂರಿನಲ್ಲಿ ವೈಟ್ ಬೋರ್ಡ್ ವಾಹನಗಳನ್ನು ಬಾಡಿಗೆಗೆ ಓಡಿಸುತ್ತಿರುವ ಕುರಿತು ನಾವು ಅವರನ್ನು ಕೇಳಿದಾಗ ಅವರು ನಮ್ಮ ಮೇಲೆ ಹಲ್ಲೆ ನಡೆಸುತ್ತಾರೆ. ಈ ಕುರಿತು ಸೋಮವಾರಪೇಟೆ ಸಂಘಟನೆಯಿAದ ಪೊಲೀಸರಿಗೆ ದೂರು ನೀಡಿದ್ದೇವೆ. ಈ ನಿಟ್ಟಿನಲ್ಲಿ ವೈಟ್ ಬೋರ್ಡ್ ಟ್ಯಾಕ್ಸಿಗಳ ವಿರುದ್ಧ ಮತ್ತೊಮ್ಮೆ ದೂರು ನೀಡುವ ಮೂಲಕ ವೈಟ್ ಬೋರ್ಡ್ ಟ್ಯಾಕ್ಸಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ. ಸೋಮವಾರಪೇಟೆ ಮತ್ತು ಶನಿವಾರಸಂತೆ ಯೂನಿಯನ್ ಪದಾಧಿಕಾರಿಗಳು ಮತ್ತು ಸದಸ್ಯರು ಶನಿವಾರಸಂತೆ ಸಿಐ ಕೃಷ್ಣರಾಜ್ ಅವರಿಗೆ ದೂರು ನೀಡಿದರು.