ನಾಪೋಕ್ಲು, ಸೆ. ೧೩: ಇಲ್ಲಿನ ಇಂದಿರಾ ನಗರದ ವಿವೇಕಾನಂದ ಸಂಘದ ಗಣೇಶ ಉತ್ಸವ ಸೇವಾ ಸಮಿತಿ ವತಿಯಿಂದ ೨೧ನೇ ವರ್ಷದ ಅದ್ದೂರಿ ಗಣೇಶೋತ್ಸವ ಅಂಗವಾಗಿ ಭಾನುವಾರ ಸಂಜೆ ಇಂದಿರಾ ನಗರದಲ್ಲಿ ಸಂಘದ ಧ್ವಜಾರೋಹಣ, ಲೋಗೋ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾಫಿ ಬೆಳೆಗಾರ ಬಿದ್ದಾಟಂಡ ದಿನೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅತಿಥಿಗಳಾಗಿ ಭಾಗವಹಿಸಿದ್ದ ಪಂಚಾಯಿತಿ ಮಾಜಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ ಮಾತನಾಡಿ, ವಿನಾಯಕ ಚತುರ್ಥಿ ಸರ್ವರನ್ನು ಒಗ್ಗೂಡಿಸುವ ಹಬ್ಬ ಎಂದು ಹೇಳಿದರು.

ಮತ್ತೋರ್ವ ಮುಖ್ಯ ಅತಿಥಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಅಂಬಿ ಕಾರ್ಯಪ್ಪ ಮಾತನಾಡಿ, ಗಣೇಶ ಚತುರ್ಥಿ ಸಾಮರಸ್ಯದ ಹಬ್ಬವಾಗಿದೆ ಎಂದರು. ಕಾರ್ಯಕ್ರಮದಲ್ಲಿ ೨೦೨೫ -೨೬ ಸಾಲಿನಲ್ಲಿ ೧೦ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ೮೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸೈಕ್ಲಿಂಗ್ ಕೋಚ್ ಚೆರಿ ಚರ್ಮಣ, ರಾಜ್ಯಮಟ್ಟದ ಕಬಡ್ಡಿ ಆಟಗಾರ್ತಿ ಮೇಘನಾ, ಹಾಕಿ ಆಟಗಾರ್ತಿ ತನುಶ್ರೀ, ವಿದ್ಯಾರ್ಥಿಗಳಾದ ಅದ್ವಿಕ್ ಗಣಪತಿ, ದೀಕ್ಷಿತ ದೇಚಕ್ಕ, ಸರ್ವಿಕ ಮಂಜುನಾಥ್ ಹರ್ಷಿತ ಕುಶಾಲಪ್ಪ ಸಹನಾ ಪಿ. ಎಸ್., ಹಂಸಿನಿ, ಕರಣ್ಯ ಇವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಟಿ.ಕೆ ಶಿವ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನಾಪೋಕ್ಲು, ಹಿಂದು ಮಲಯಾಳಿ ಸಂಘದ ಅಧ್ಯಕ್ಷ ಅನಿಲ್, ಕೆಇಬಿ ಇಂಜಿನಿಯರ್ ಪ್ರಸಾದ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ದಾನಿ ಮೂವೇರ ಧರಣಿ ಗಣಪತಿ, ಕವಿತಾ ದಿನೇಶ್ ಸಂಘದ ಉಪಾಧ್ಯಕ್ಷ ಆನಂದ, ಉಸ್ತುವಾರಿ ಜಲೇಂದ್ರ ,ಮಾಜಿ ಅಧ್ಯಕ್ಷ ಶಶಿ, ಸದಸ್ಯ ಕಪ್ಪಸ್ವಾಮಿ, ವಿನಾಯಕ, ಶರವಣ ಸೇರಿದಂತೆ ಇತರ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಸAಘದ ವತಿಯಿಂದ ತಾ. ೧೪ರಂದು ಬೆಳಿಗ್ಗೆ ೯ಕ್ಕೆ ಗೌರಿ ಗಣೇಶ ಉತ್ಸವ ಮೂರ್ತಿಯನ್ನು ಕೊಂಡೊಯ್ದು ಪ್ರತಿಷ್ಠಾಪನೆ ಮಾಡಲಾಗುತ್ತದೆ.