ಕೂಡಿಗೆ, ಸೆ. ೧೨: ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸೀಗೆಹೊಸೂರು ಗ್ರಾಮದಲ್ಲಿ ರೂ. ೨೯ ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ವಾಣಿಜ್ಯ ಮಳಿಗೆ ಹಾಗೂ ಗೋದಾಮಿನ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕುಶಾಲನಗರ ತಾಲೂಕು ಆಹಾರ ನಿರೀಕ್ಷಕಿ ಎಂ.ಎಸ್. ಸ್ವಾತಿ ನ್ಯಾಯಬೆಲೆ ಅಂಗಡಿಯನ್ನು ಉದ್ಘಾಟಿಸಿದರು. ಕಣಿವೆ ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಅವರು ಗೊಬ್ಬರ ಮಾರಾಟ ಮಳಿಗೆ ಉದ್ಘಾಟಿಸಿದರು. ಸಂಘದ ಹಿರಿಯ ನಿರ್ದೇಶಕ ಕೆ.ಟಿ. ಅರುಣ್ ಕುಮಾರ್ ಹಾಗೂ ವೃತ್ತಿಪರ ನಿರ್ದೇಶಕ ಆರ್.ಕೆ. ನಾಗೇಂದ್ರಬಾಬು ಅವರು ಗೋದಾಮು ಉದ್ಘಾಟಿಸಿದರು.
ಸಾಹಿತಿ ಭಾರದ್ವಾಜ್ ಆನಂದತೀರ್ಥ ಮಾತನಾಡಿ, ಅಧಿಕಾರಾವಧಿಯಲ್ಲಿ ಸಂಘದ ಅಭಿವೃದ್ಧಿ ಹಾಗೂ ಸದಸ್ಯರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಬಗ್ಗೆ ಆಡಳಿತ ಮಂಡಳಿ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ವೃತ್ತಿಪರ ನಿರ್ದೇಶಕ ಆರ್.ಕೆ. ನಾಗೇಂದ್ರಬಾಬು ಮಾತನಾಡಿ, ಸಂಘದ ಏಳಿಗೆಗೆ ಸದಸ್ಯರ ಸಹಕಾರ ಅತ್ಯಂತ ಮುಖ್ಯ. ಸಂಘದ ಗೌರವ ಹಾಗೂ ಕೀರ್ತಿಯನ್ನು ಎತ್ತಿಹಿಡಿಯುವ ಕಾರ್ಯದಲ್ಲಿ ಆಡಳಿತ ಮಂಡಳಿಯೊAದಿಗೆ ಸದಸ್ಯರು ಸದಾ ಕೈಜೋಡಿಸಬೇಕು ಎಂದರು.
ಸAಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸದಸ್ಯರ ಒಗ್ಗಟ್ಟಿನ ಶಕ್ತಿಯಿಂದಲೇ ಸಂಘ ಅಭಿವೃದ್ಧಿ ಹೊಂದಲು ಸಾಧ್ಯ. ಸಂಘದ ಮೂಲಕ ರೈತ ಸದಸ್ಯರಿಗೆ ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರು ಆರ್ಥಿಕವಾಗಿ ಪ್ರಗತಿ ಸಾಧಿಸಲು ನೆರವಾಗಲಾಗುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಸ್.ಆರ್. ಸುನಿಲ್ ರಾವ್, ಸಂಘದ ಉಪಾಧ್ಯಕ್ಷ ವಿ. ಬಸಪ್ಪ, ನಿರ್ದೇಶಕರಾದ ಕೆ.ಟಿ. ಅರುಣ್ ಕುಮಾರ್, ಕೃಷ್ಣಗೌಡ, ಕೆ.ಕೆ. ಪವಿತ್ರ, ರಮೇಶ್, ನಾಗರಾಜ್, ಕೆ.ಬಿ. ರಾಮಚಂದ್ರ, ಕೆ.ಪಿ. ರಾಜು, ಎಸ್.ಎಸ್. ಕೃಷ್ಣ, ಜಯಶ್ರೀ, ವೃತ್ತಿಪರ ನಿರ್ದೇಶಕರಾದ ಆರ್.ಕೆ. ನಾಗೇಂದ್ರ, ಡಿ.ಎಸ್. ಚಂದ್ರಶೇಖರ್, ಕುಶಾಲನಗರ ವೃತ್ತ ಮೇಲ್ವಿಚಾರಕ ಅರುಣ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ಹರ್ಷ ಸೇರಿದಂತೆ ಸೀಗೆಹೊಸೂರು, ಭುವನಗಿರಿ, ಗಂಗೆಕಲ್ಯಾಣ ಹಾಗೂ ಜೇನುಕಲ್ಲು ಬೆಟ್ಟ ಗ್ರಾಮಗಳ ನೂರಾರು ರೈತರು ಮತ್ತು ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಕೆ.ಟಿ. ಅರುಣ್ ಕುಮಾರ್ ಸ್ವಾಗತಿಸಿ. ಎ.ಜಿ. ಪೂರ್ಣಿಮಾ ನಿರೂಪಿಸಿ. ಚಂದ್ರಶೇಖರ್ ವಂದಿಸಿದರು.