ಕೂಡಿಗೆ, ಸೆ. ೧೧: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿರುವ ಜೇನುಕಲ್ಲು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷರಾದ ಟಿ.ಕೆ. ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನೆರವೇರಿತು.

ಸಭೆಯನ್ನುದ್ದೇಶಿಸಿ ಮಾತಾನಾಡಿದ ಚಂದ್ರಶೇಖರ್ ಅವರು, ಈ ಸಾಲಿನಲ್ಲಿ ಸಂಘವು ರೂ.೬.೭೮ ಲಕ್ಷ ಲಾಭಾಂಶ ಗಳಿಸಿದೆ, ಹಾಲು ಉತ್ಪಾದಕ ರೈತರು ಸಂಘಕ್ಕೆ ಗುಣಮಟ್ಟದ ಹಾಲು ಹಾಕುವ ಮೂಲಕ ಸಂಘದ ಅಭಿವೃದ್ಧಿ ಸಹಕಾರಿಗಳಾಗಬೇಕು, ಈ ಸಾಲಿನಲ್ಲಿ ಸಂಘದ ಸದಸ್ಯರ ಹಸುಗಳಿಗೆ ಉಚಿತವಾಗಿ ಗರ್ಭದಾರಣೆ ಮತ್ತು ವಿಮಾ ಯೋಜನೆಗಳನ್ನು ಜಾರಿ ತರುವ ಮೂಲಕ ಅನುಕೂಲ ಕಲ್ಪಿಸಲಾಗುವುದು, ಹೈನುಗಾರಿಕೆಗೆ ಪೂರಕವಾದ ಸಹಕಾರ ನೀಡುವ ನಿಟ್ಟಿನಲ್ಲಿ ಸಾಲ ಸೌಲಭ್ಯಗಳ ಯೋಜನೆಗೆ ರಿಯಾಯಿತಿ ಪಡೆಯಲು ಸಂಬAಧಿಸಿದAತೆ ಕ್ರಮ ವಹಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನ ಹಾಲು ಒಕ್ಕೂಟದ ವಿಸ್ತಾರಣಾಧಿಕಾರಿ ಬಿ.ವಿ. ವೀಣಾ ಮಾತನಾಡಿ, ಒಕ್ಕೂಟದ ವತಿಯಿಂದ ಉತ್ತಮ ಗುಣಮಟ್ಟದ ಪಶು ಆಹಾರವನ್ನು ಈಗಾಗಲೇ ಸಮಯಕ್ಕೆ ಸರಿಯಾಗಿ ವಿತರಣೆ ಮಾಡಲಾಗುತ್ತಿದೆ, ಅಲ್ಲದೆ ಉಚಿತ ಪಶು ಚಿಕಿತ್ಸೆ ಸಂಬAಧಿಸಿದAತೆ ಕ್ರಮ ವಹಿಸಲಾಗುವುದು ಎಂದರು.

ಈ ಸಂದರ್ಭ ಸಂಘಕ್ಕೆ ವಾರ್ಷಿಕವಾಗಿ ಹೆಚ್ಚು ಹಾಲನ್ನು ಹಾಕಿದ ರೈತರಿಗೆ ಬಹುಮಾನವನ್ನು ನೀಡಲಾಯಿತು.

ಸಭೆಯಲ್ಲಿ ಹಾಜರಿದ್ದ ಸದಸ್ಯರು ಅಭಿವೃದ್ಧಿಗೆ ಪೂರಕವಾದ ಚರ್ಚೆಗಳನ್ನು ನಡೆಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಂ. ಬಸವರಾಜ್ ವಾರ್ಷಿಕ ವರದಿ ಮಂಡಿಸಿದರು.

ಈ ಸಂದರ್ಭ ಉಪಾಧ್ಯಕ್ಷ ಕೆ.ಆರ್. ಜಗದೀಶ್, ನಿರ್ದೇಶಕರುಗಳಾದ ಎಂ.ಕೆ. ಅಪ್ಪಾಜಿ, ಹೆಚ್.ಎಂ. ನಾಗೇಶ್, ವಿ.ಎಲ್. ಪ್ರಕಾಶ್, ಚಂದ್ರೇಗೌಡ, ಎಸ್ .ಜಿ. ಬಸವರಾಜ್, ಅನಮ್ಮ ಬಿಜು, ಜ್ಯೋತಿ ವಿನಯಕುಮರ್, ಎಸ್. ಎಂ. ಬಸವರಾಜ್, ಬಿ.ಎನ್. ಮೋಹನ್, ಗೌರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಂ ಬಸವರಾಜ್ ಸೇರಿದಂತೆ ನೂರಾರು ಹಾಲು ಉತ್ಪಾದಕ ರೈತರು ಹಾಜರಿದ್ದರು.