ಸಿದ್ದಾಪುರ,. ೧೦: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಬಿ.ಜಿ.ರಾಮ್‌ಜಿ ಜಾಬ್ ಕಾರ್ಡ್ ಮೇಳಕ್ಕೆ ಅಭಿವೃದ್ಧಿ ಅಧಿಕಾರಿ ಸತೀಶ್ ಕೆ.ವಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ನರೇಗ ಯೋಜನೆಯನ್ನು ಕೇಂದ್ರ ಸರಕಾರವು ಸೌಲಭ್ಯವನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ವಿಕಸಿತ ಭಾರತ ಗ್ರಾಮಿಣ್ ರೋಜ್‌ಗಾರ್ ಯೋಜನೆ ಎಂದು ಮಾರ್ಪಡಿಸಿದ್ದು ವಾರ್ಷಿಕ ಕುಟುಂಬ ಒಂದಕ್ಕೆ ೧೨೫ ದಿನಗಳ ಕೆಲಸವನ್ನು ನೀಡಲಾಗುತ್ತಿದ್ದು ದಿನಕ್ಕೆ ಒಬ್ಬ ವ್ಯಕ್ತಿಗೆ ೩೮೨ ರೂಪಾಯಿ ಕೂಲಿ ನೀಡಲಾಗುತ್ತಿದೆ ಎಂದರು. ಗ್ರಾಮೀಣ ಭಾಗದ ಜನರು ತಮ್ಮ ಜಾಬ್‌ಕಾರ್ಡ್ ಮಾಡಿಸುವಂತೆ ಕರೆ ನೀಡಿದರು.

ಯೋಜನೆಯ ವೀರಾಜಪೇಟೆ ತಾಲೂಕು ಮಾಹಿತಿ, ಶಿಕ್ಷಣ ಮತ್ತು ಸಂವಹನ ಅಧಿಕಾರಿ ನರೇಂದ್ರ ಮಾತನಾಡಿ, ವಿಬಿ.ಜಿ.ರಾಮ್‌ಜೀ ಯೋಜನೆಯಲ್ಲಿ ಕೃಷಿ ಹೊಂಡ, ಹಸು, ಕೋಳಿ, ಮೇಕೆ ಕೊಟ್ಟಿಗೆ ನಿರ್ಮಾಣಕ್ಕೆ ಅವಕಾಶವಿದ್ದು ತಮ್ಮ ಕಾಮಗಾರಿಯನ್ನು ತಾವೇ ನಿರ್ಮಿಸಿಕೊಳ್ಳುವ ಅವಕಾಶ ಇದೆ. ಪ್ರತಿಯೊಬ್ಬರು ಜಾಬ್ ಕಾರ್ಡ್ ಮಾಡಿಸಿಕೊಳ್ಳುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಸುವರ್ಣಾವಕಾಶವಿದ್ದು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್‌ಬುಕ್‌ನೊಂದಿಗೆ ಆಯಾ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಪಂಚಾಯಿತಿ ಆಡಳಿತಾಧಿಕಾರಿ ಜನೀಶ್ ಕುಮಾರ್, ಲೆಕ್ಕ ಸಹಾಯಕ ಸುಬ್ರಮಣಿ, ನೋಡಲ್ ಅಧಿಕಾರಿ ಗಣೇಶ್, ಸಿಬ್ಬಂದಿಗಳಾದ ಈಶ್ವರ, ಸವಿತ, ರಜಿನಿ ಹಾಜರಿದ್ದರು.