ಸಿದ್ದಾಪುರ, ಸೆ. ೧೦: ಹಾಡಹಗಲೇ ಸಾರ್ವಜನಿಕ ರಸ್ತೆಯ ಮೂಲಕ ಒಂಟಿಸಲಗವೊAದು ಸಂಚರಿಸುತ್ತಾ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ ಘಟನೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು, ಚೆಟ್ಟಳ್ಳಿ, ಮಲಕ್ಕೋಡು ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಕೂಡ್ಲೂರು - ಚೆಟ್ಟಳ್ಳಿ ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ರಸ್ತೆಯ ಮೂಲಕ ದಿನನಿತ್ಯ ಸಂಚರಿಸುತ್ತಿದ್ದ ಒಂಟಿಸಲಗವೊAದು ಗುರುವಾರ ಮಧ್ಯಾಹ್ನ ೧೨ ಗಂಟೆಗೆ ಕೂಡ್ಲೂರು - ಚೆಟ್ಟಳ್ಳಿಯ ಮುಖ್ಯ ರಸ್ತೆಗಾಗಿ ಸಂಚರಿಸುತ್ತಿದ್ದ ಸಂದರ್ಭ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಮೀನುಕೊಲ್ಲಿ ಶಾಖೆಯ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಆನೆಯನ್ನು ಕಾಡಿಗೆ ಓಡಿಸಿದರು. ದಿನನಿತ್ಯ ಈ ಭಾಗದಲ್ಲಿ ಆನೆ ಸಂಚರಿಸುವ ಸಮಯದಲ್ಲಿ ಅರಣ್ಯ ಸಿಬ್ಬಂದಿ ಅವುಗಳ ಚಲನವಲನವನ್ನು ಪತ್ತೆಹಚ್ಚಿ ಗ್ರಾಮಸ್ಥರಿಗೆ ಮಾಹಿತಿ ನೀಡುವ ಮೂಲಕ ಎಚ್ಚರಿಕೆಯಿಂದ ಇರುವಂತೆ ಸಂದೇಶ ರವಾನಿಸಿದ್ದಾರೆ. ಅಲ್ಲದೆ ಬೆಳಿಗ್ಗೆ ಹಾಗೂ ಸಂಜೆ ರಸ್ತೆ ಬದಿಯಲ್ಲಿ ಕಾವಲು ನಿಂತು ಗ್ರಾಮಸ್ಥರಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸುನೀತಾ ಮಂಜುನಾಥ್ ತಿಳಿಸಿದರು. ಆದರೆ ಗುರುವಾರದಂದು ದಿಢೀರನೆ ಮಧ್ಯಾಹ್ನ ಪ್ರತ್ಯಕ್ಷಗೊಂಡ ಒಂಟಿಸಲಗದಿAದಾಗಿ ಗ್ರಾಮಸ್ಥರು ಆತಂಕಕ್ಕೆ ಸಿಲುಕಿದರು ಎಂದು ಅವರು ಮಾಹಿತಿ ನೀಡಿದ್ದಾರೆ. - ವಾಸು