ಮಡಿಕೇರಿ, ಸೆ. ೧೦: ಹೊದ್ದೂರು ಗ್ರಾಮದ ಶ್ರೀ ಪ್ರಸನ್ನ ಗಣಪತಿ ಸಂಘದ ಆಶ್ರಯದಲ್ಲಿ ೨೦ನೇ ವರ್ಷದ ಶ್ರೀ ಗೌರಿ - ಗಣೇಶೋತ್ಸವ ತಾ. ೧೪ ರಂದು ಶ್ರೀ ಶಾಸ್ತ-ಈಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.

ಬೆಳಿಗ್ಗೆ ೯ ಗಂಟೆಗೆ ಪ್ರಾರ್ಥನೆ, ಶುದ್ಧ ಕಲಶ, ೧೦ ಗಂಟೆಗೆ ಶ್ರೀ ಗಣಪತಿ ಹೋಮ, ಶ್ರೀ ಗೌರಿ - ಗಣೇಶೋತ್ಸವ ಮೂರ್ತಿಯ ಪ್ರತಿಷ್ಠಾಪನೆ, ಪ್ರಾಣ ಪ್ರತಿಷ್ಠೆ, ಮಂಗಳಾರತಿ ಹಾಗೂ ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ ಬಳಿಕ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.

ಅಂದು ಸಂಘದ ವತಿಯಿಂದ ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಗಳಿಸಿದ ನೆರವಂಡ ಯಾನ ಪೊನ್ನಮ್ಮ ಅವರನ್ನು ಸನ್ಮಾನಿಸಿ, ಗೌರವಿಸಲಾಗುವುದು.