ಮಡಿಕೇರಿ, ಸೆ. ೧೦: ಪ್ರಕರಣವೊಂದಕ್ಕೆ ಸಂಬAಧಿಸಿದAತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಗ್ರಾಹಕರೊಬ್ಬರಿಗೆ ಒಟ್ಟು ರೂ. ೨೫,೯೬೦ ಪರಿಹಾರ ಪಾವತಿಸುವಂತೆ ಆದೇಶ ನೀಡಿದೆ.
ಮಡಿಕೇರಿ, ಗೌಳಿಬೀದಿ ನಿವಾಸಿಯಾದ ವಕೀಲ ಕೆ.ಡಿ. ದಯಾನಂದ ಅವರು ವ್ಯವಸ್ಥಾಪಕ ನಿರ್ದೇಶಕರು / ವ್ಯವಸ್ಥಾಪಕರು, ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಇವರು ಗ್ರಾಹಕರಿಗೆ ಂiಡಿಣeಟ ಈಂSಖಿಚಿg ಸೇವೆಯನ್ನು ಒದಗಿಸುವ ಸೇವಾ ಪೂರೈಕೆದಾರರ ಕಡೆಯಿಂದ ಈಂSಖಿಚಿg ಖರೀದಿಸಿದ್ದು ಅವರು ಮಡಿಕೇರಿಯಿಂದ ಬೆಂಗಳೂರಿನ ಕಡೆಗೆ ಎಕ್ಸ್ಪ್ರೆಸ್ ಹೈವೇ ಮೂಲಕ ತಾ. ೦೬.೦೯.೨೦೨೪ ರಂದು ಪ್ರಯಾಣಿಸುತ್ತಿದ್ದಾಗ ಅವರ ವಾಹನ ಬಿಡದಿ ಟೋಲ್ ದಾಟಲು ಅವರ ಹತ್ತಿರ ಂiಡಿಣeಟ ಈಂSಖಿಚಿgನಲ್ಲಿ ಬ್ಯಾಲೆನ್ಸ್ ಇಲ್ಲದ ಕಾರಣ ಸ್ಥಳದಲ್ಲೇ ಈಂSಖಿಚಿg ಖರೀದಿಸಲು ಒಟ್ಟು ರೂ. ೭೦೦ ಪಾವತಿಸಿದ್ದರು. ಅಲ್ಲದೇ ರೀಚಾರ್ಜ್ ಶುಲ್ಕ ರೂ. ೫೦೦ನ್ನು ಪಾವತಿ ಮಾಡಿದ್ದರು. ಂiಡಿಣeಟ ಈಂSಖಿಚಿg ಸೇವೆಗೆ ಎಲ್ಲಾ ದಾಖಲಾತಿಗಳನ್ನು ಸಲ್ಲಿಸಿದ್ದರೂ ತಾ. ೦೭.೦೯.೨೦೨೪ ರಂದು ಬೆಂಗಳೂರಿನಿAದ ವಾಪಸ್ಸು ಬರುವಾಗ ಮತ್ತೆ ಕಡಿಮೆ ಬ್ಯಾಲೆನ್ಸ್ ಎಂದು ದ್ವಿಗುಣ ಶುಲ್ಕ ರೂ. ೪೬೦ಗಳನ್ನು ಮತ್ತು ರೀಚಾರ್ಜ್ಗೆ ರೂ. ೫೦೦ಗಳನ್ನು ಮತ್ತೆ ಪಡೆದುಕೊಂಡಿದ್ದರು. ನಂತರ ಸದರಿ Pಚಿಥಿಣm ಈಂSಖಿಚಿg ತಾ. ೩೧.೦೩.೨೦೨೪ ರಿಂದಲೇ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತ್ತು ಎಂಬುದು ದಯಾನಂದ ಅವರಿಗೆ ತಿಳಿದು ಬಂದ ಕಾರಣ ಅದನ್ನು ತಮಗೆ ಕೊಡಿಸಿಕೊಡಬೇಕೆಂದು ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ಸಲ್ಲಿಸಿದ್ದರು. ಇವರ ಪ್ರಕರಣವನ್ನು ಆಯೋಗವು ದಾಖಲು ಮಾಡಿಕೊಂಡು ಉಭಯ ಕಡೆಗಳ ವಾದ ವಿವಾದಗಳನ್ನು ಆಲಿಸಿದ ಕೊಡಗು ಜಿಲ್ಲಾ ಗ್ರಾಹಕರ ಆಯೋಗದ ಪ್ರಬಾರ ಅಧ್ಯಕ್ಷರಾದ ಡಾ. ರೇಣುಕಾಂಬ ಸಿ. ಮತ್ತು ಸದಸ್ಯರಾದ ಗೌರಮ್ಮಣ್ಣಿ ಅವರುಗಳು ದೂರನ್ನು ಪುರಸ್ಕರಿಸಿ, ದೂರುದಾರರಿಗೆ ತಾ. ೦೭.೦೯.೨೦೨೪ ರಂದು ಬೆಂಗಳೂರಿನಿAದ ಮಡಿಕೇರಿಗೆ ವಾಪಸ್ಸು ಬರುವಾಗ ಪಡೆದಂತಹ ಈಂSಖಿಚಿg ಮೊತ್ತ ರೂ. ೫೦೦+೪೬೦ಗಳನ್ನು, ಸೇವಾ ನ್ಯೂನತೆಗೆ ಪರಿಹಾರವಾಗಿ ರೂ. ೫,೦೦೦, ಮಾನಸಿಕ ವೇದನೆಗೆ ರೂ. ೫,೦೦೦, ವ್ಯಾಜ್ಯದ ಖರ್ಚು ವೆಚ್ಚಕ್ಕೆ ರೂ. ೫,೦೦೦ ಹಾಗೂ ಅನುಚಿತ ವ್ಯಾಪಾರ ಪದ್ಧತಿಗೆ ಪರಿಹಾರವಾಗಿ ರೂ. ೧೦,೦೦೦ಗಳನ್ನು ಪಾವತಿಸಬೇಕೆಂದು ಆದೇಶ ನೀಡಿದ್ದಾರೆ.