ವೀರಾಜಪೇಟೆ, ಸೆ. ೯: ರಾಜರ ಕಾಲದಿಂದಲು ಆಚರಿಸಿಕೊಂಡು ಬಂದಿರುವ ಕೊಡವ ಸಂಸ್ಕೃತಿಯನ್ನು ಮುನ್ನಡೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಬ್ದಾರಿ ಹಾಗು ಕರ್ತವ್ಯವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ನಿವೃತ ಪ್ರೊ ಡಾ ಕೋಡಿರ ಲೋಕೇಶ್ ಹೇಳಿದರು.

ಕಾಕೋಟುಪರಂಬು ಕೈಲ್‌ಮುಹೂರ್ತ ಸಂಘದ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಕೈಲ್‌ಮುಹೂರ್ತ ಆಟೋಟ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಕೊಡವರು ತಮ್ಮದೇ ಆದ ವಿಶಿಷ್ಟ ಆಚಾರ, ವಿಚಾರ, ಪದ್ಧತಿ ಪರಂಪರೆ, ವಿಬಿನ್ನ ಸಂಸ್ಕೃತಿಯನ್ನು ಹೊಂದಿದ್ದಾರೆ. ಇಂತಹ ಸಂಸ್ಕೃತಿಯನ್ನು ಪ್ರಪಂಚದ ಬೇರೆ ಎಲ್ಲಿಯು ಕಾಣ ಸಿಗುವುದಿಲ್ಲ. ಪರಿಸರದೊಂದಿಗೆ ಹೊಂದಿಕೊAಡಿರುವ ಕೊಡವರು ಕೃಷಿ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡುವುದಲ್ಲದೆ ತಾವು ಕೃಷಿಗೆ ಬಳಸಿದ ಪರಿಕರಗಳಿಗೆ ಕೈಲ್‌ಮುಹೂರ್ತ ಹಬ್ಬದಂದು ಪೂಜೆ ಪುನಸ್ಕಾರಗಳನ್ನು ನಡೆಸುವುದು ಹಿಂದಿನಿAದಲು ನಡೆದುಕೊಂಡು ಬಂದಿರುವ ಪ್ರತೀತಿ ಆಗಿದೆ ಎಂದರು.

ವಕೀಲ ಮೇವಡ ಚಿಣ್ಣಪ್ಪ ಮಾತನಾಡಿ, ಹಬ್ಬಗಳು ಕೇವಲ ಹಬ್ಬದೂಟಗಳಿಗೆ ಮಾತ್ರ ಸೀಮಿತವಾಗಿರಬಾರದು. ಹಬ್ಬದ ಸಂಭ್ರವiದೊAದಿಗೆ ಕ್ರೀಡೆ ಮತ್ತು ಮನರಂಜನೆಗಳು ನಮ್ಮ ಮನಸ್ಸಿಗೆ ಉಲ್ಲಾಸವನ್ನು ನೀಡುವುದಲ್ಲದೆ ಶಾರೀರಿಕವಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.

ಕೈಲ್‌ಮುಹೂರ್ತ ಸಂಘದ ಅಧ್ಯಕ್ಷ ಮಂಡೇಟಿರ ಸುರೇಶ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಅತಿಥಿಗಳನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಅಪ್ಚಚಂಗಡ ಪ್ರಕಾಶ್ ಪೂಣಚ್ಚ ಉಪಸ್ಥಿತರಿದ್ದರು.

ಹಬ್ಬದ ಪ್ರಯುಕ್ತ ಆಯೋಜಿಸಿದ ಕ್ರೀಡಾಕೂಟದಲ್ಲಿ ಕೋವಿಯಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪಳೆಯಂಡ ರಘು ಉತ್ತಪ್ಪ(ಪ್ರ), ಮೇವಡ ಬೆಳ್ಳಿಯಪ್ಪ(ದ್ವಿ), ನವೀನ್(ತೃ), ಪಾಯಿಂಟ್ ೨೨ ಕೋವಿಯಲ್ಲಿ ಪಟ್ಟಡ ಬೋಪಣ್ಣ(ಪ್ರ), ಪುತ್ತರಿರ ನಂಜಪ್ಪ(ದ್ವಿ), ಅಪ್ಪುಮಣಿಯಂಡ ಬಜನ್(ತೃ), ನಿಧಾನವಾಗಿ ಬೈಕ್ ಚಾಲನೆಯಲ್ಲಿ ದಿಲನ್ ದೇವಯ್ಯ(ಪ್ರ), ಜೀವನ್(ದ್ವಿ), ಬೋಪಣ್ಣ(ತೃ), ಭಾರದ ಗುಂಡು ಎಸೆತ ಗೌತಮ್(ಪ್ರ), ಕಾಣತಂಡ ರೋಷನ್(ದ್ವಿ), ಅಜ್ಜೆಟಿರ ರೋಷನ್(ತೃ), ಪುರುಷರ ಹಗ್ಗಜಗ್ಗಾಟದಲ್ಲಿ ಕೆವೈಸಿ ಬಿ(ಪ್ರ), ಕೆವೈಸಿ ಎ (ದ್ವಿ), ಮಹಿಳೆಯರ ವಿಭಾಗದಲ್ಲಿ ಸೌಮ್ಯ ಫ್ರೆಂಡ್ಸ್ಸ್(ಪ್ರ), ಜಾನ್ಸಿ ಫ್ರೆಂಡ್ಸ್ (ದ್ವಿ) ಸ್ಥಾನ ಪಡೆದುಕೊಂಡರು.