ಮಡಿಕೇರಿ, ಸೆ. ೮: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕರಡು ಪಟ್ಟಿ ಪ್ರಕಟಗೊಂಡ ಬಳಿಕ ಇದೀಗ ಲಾಜಿಕಲ್ ಡಿಸ್ಕಿçಪೆನ್ಸಿ ಮತ್ತು ನೋ ಮ್ಯಾಪಿಂಗ್ ಅಡಿಯಲ್ಲಿ ನೋಟಿಸ್ ಮತದಾರರಿಗೆ ನೀಡಲಾಗುತ್ತಿದೆ.

ಕೊಡಗಿನಲ್ಲಿ ಲಾಜಿಕಲ್ ಡಿಸ್ಕಿçಪೆನ್ಸ್ಸಿ ಮತ್ತು ನೋ ಮ್ಯಾಪಿಂಗ್ ಸೇರಿ ೫೮,೮೮೩ ಮತದಾರರಿಗೆ ನೋಟಿಸ್ ನೀಡಲು ಗುರುತಿಸಲಾಗಿದ್ದು, ನೋಟಿಸ್ ಪಡೆಯುವ ಮತದಾರರ ವಿವರವನ್ನು ಚುನಾವಣಾ ಆಯೋಗ ಸೋಮವಾರ ತಮ್ಮ ಅಧಿಕೃತ ವೆಬ್ ಸೈಟ್‌ನಲ್ಲಿ ಪ್ರಕಟಿಸಿದೆ. ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ನೋಟಿಸ್ ಪಡೆಯಲಿರುವ ಮತದಾರರಿಗೆ ಯಾವ ಕಾರಣಕ್ಕಾಗಿ ನೋಟಿಸ್ ಜನರೇಟ್ ಆಗಿದೆ ಎಂದು ಉಲ್ಲೇಖಿಸಲಾಗಿದೆ.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಗುಡ್ಡೆಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ೧೯೪ ಬೂತ್ ಸಂಖ್ಯೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಗುಡ್ಡೆಹೊಸೂರು (ಎಡ ಪಾರ್ಶ್ವ) ಮತದಾರರಿಗೆ ಕೊಡಗಿನಲ್ಲೇ ಅತೀ ಹೆಚ್ಚು ನೋಟಿಸ್ ಜನರೇಟರ್ ಆಗಿರುವ ಬೂತ್.

೯೧೦ ಮತದಾರರಲ್ಲಿ ೫೪೯ ಮತದಾರರಿಗೆ ನೋಟಿಸ್ ವಿತರಣೆಯಾಗಲಿದೆ. ಶೇಕಡಾ ೬೦% ರಷ್ಟು ಮತದಾರರು ದಾಖಲೆಯೊಂದಿಗೆ ವಿಚಾರಣೆಗೆ ಹಾಜರಾಗಬೇಕು. ಈ ಮಾಹಿತಿಯನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ೧೮೩ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕಂಡAಗಾಲ ಬೂತ್‌ನಲ್ಲಿ ೧,೧೩೩ ಮತದಾರರ ಪೈಕಿ ೫೩೬ ಮತದಾರರಿಗೆ ನೋಟಿಸ್ ಜನರೇಟ್ ಆಗಿದೆ. ಇದು ವೀರಾಜಪೇಟೆ ಕ್ಷೇತ್ರದ ಬೂತ್‌ವಾರು ನೋಟಿಸ್ ಪಡೆಯಲಿರುವ ಮತದಾರರ ಪೈಕಿ ಅತೀ ಹೆಚ್ಚು ಮಡಿಕೇರಿ ನಗರದಲ್ಲಿ ೪,೩೬೮ ಮತದಾರರು ವಿಚಾರಣೆಗೆ ಹಾಜರಾಗಬೇಕು.

ಕೊಡಗಿನ ಕೆಲವೊಂದು ಬೂತ್ ಗಳಲ್ಲಿ ಶೇಕಡಾ ೫೦ ಕ್ಕೂ ಹೆಚ್ಚು ಮತದಾರರಿಗೆ ನೋಟಿಸ್; ಲಾಜಿಕಲ್ ಡಿಸ್ಕಿçಪೆನ್ಸಿ ಹಾಗೂ ನೋ ಮ್ಯಾಪಿಂಗ್ ಅಡಿಯಲ್ಲಿ ನೋಟಿಸ್ ನೀಡಲಾಗುವ ಮತದಾರರಲ್ಲಿ ಕೆಲವೊಂದು ಬೂತ್ ಗಳಲ್ಲಿ ಶೇಕಡಾ ೫೦ ಕ್ಕೂ ಮತದಾರರಿಗೆ ನೋಟಿಸ್ ಜನರೇಟರ್ ಆಗಿರುವ ಮಾಹಿತಿ ಬಹಿರಂಗಗೊAಡಿದೆ.ತಿತಿಮತಿ ವ್ಯಾಪ್ತಿಯ ಬಹುತೇಕ ಎಲ್ಲಾ ಬೂತ್‌ಗಳಲ್ಲಿ ೧೫೦ ಕ್ಕೂ ಹೆಚ್ಚು ಮತದಾರರಿಗೆ ನೋಟಿಸ್ ಜನರೇಟ್ ಆಗಿದೆ.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಮಡಿಕೇರಿ ನಗರದ ಬೂತ್ ೨೩೫ರಲ್ಲಿ ೯೮೩ ಮತದಾರರ ಪೈಕಿ ೩೫೮ ಮತದಾರರಿಗೆ ನೋಟಿಸ್ ಜನರೇಟ್ ಆಗಿದೆ.ಮಡಿಕೇರಿ ನಗರದ ೨೩೬ ಬೂತ್ ನಲ್ಲಿ ೮೬೬ ಮತದಾರರ ಪೈಕಿ ೩೧೬ ಮತದಾರರು ವಿಚಾರಣೆಗೆ ಹಾಜರಾಗಬೇಕಿದೆ. ಮಡಿಕೇರಿ ನಗರದ ೨೩೭ ಬೂತ್ ನಲ್ಲಿ ೨೭೬ ಮತದಾರರು ನೋಟಿಸ್ ಪಡೆಯಲಿದ್ದಾರೆ.

ಮಡಿಕೇರಿ ವಿಧಾನಸಭಾ ಕ್ಷೇತ್ರದ ೨೮೪ ಬೂತ್ ನಲ್ಲಿ ೨೨೦ ಮತದಾರರು,೨೭೬ ಬೂತ್ ನಲ್ಲಿ ೨೮೮ ಮತದಾರರು,೨೪೨ ಬೂತ್ ನಲ್ಲಿ ೨೪೮ ಮತದಾರರಿಗೆ ನೋಟಿಸ್ ಜನರೇಟ್ ಆಗಿದೆ. ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಬೂತ್ ೩೬ ರಲ್ಲಿ ೩೩೪ ಮತದಾರರು, ಬೂತ್ ೫೫ರಲ್ಲಿ ೩೩೩, ೧೪೩ನೇ ಬೂತ್ ನಲ್ಲಿ ೩೦೧ ಮತದಾರರು,೧೮೦ನೇ ಬೂತ್ ನಲ್ಲಿ ೪೨೦ ಮತದಾರರು,೧೮೮ನೇ ಬೂತ್ ನಲ್ಲಿ ೩೮೯ ಮತದಾರರು,೧೯೧ನೇ ಬೂತ್ ನಲ್ಲಿ ೩೮೯ ಮತದಾರರು ವಿಚಾರಣೆಗೆ ಹಾಜರಾಗಬೇಕಿದೆ. ೨೨೮ನೇ ಬೂತ್‌ನಲ್ಲಿ ೩೯೫ ಹಾಗೂ ೨೧೭ ಬೂತ್ ನಲ್ಲಿ ೩೭೨ ಮತದಾರರು ನೋಟಿಸ್ ಪಡೆಯಲಿದ್ದಾರೆ.

ದುಬೈನಲ್ಲಿರುವ ಮತದಾರರಿಗೆ ನೋಟಿಸ್

ಕೊಡಗು ಜಿಲ್ಲೆಯಲ್ಲಿ ಇದೀಗ ಪ್ರಸ್ತುತ ದುಬೈನಲ್ಲಿ ಉದ್ಯೋಗದಲ್ಲಿರುವ ಮತದಾರರೊಬ್ಬರಿಗೆ ನೋಟಿಸ್ ನೀಡಲಾಗಿದೆ.

ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂತ್ ೧೦೯ರ ಮತದಾರ ಅಮನ್ ಎಂ.ಎA ಅವರಿಗೆ ನೋಟಿಸ್ ಜನರೇಟ್ ಆಗಿದ್ದು,ಸೆಪ್ಟೆಂಬರ್ ೧೦ ರಂದು ಬೆಳಿಗ್ಗೆ ೯ ಗಂಟೆಯಿAದ ೧೨ ಗಂಟೆಯೊಳಗೆ ವಿಚಾರಣೆಗೆ ಹಾಜರಾಗಬೇಕೆಂದು ಬಿಎಲ್‌ಒ ನೋಟಿಸ್ ನೀಡಿದ್ದಾರೆ.ಆದರೆ ಅಮನ್ ಎಂ.ಎA ಪ್ರಸ್ತುತ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ.

ಆದರೆ ಇದುವರೆಗೆ ಕೂಡ ಚುನಾವಣಾ ಆಯೋಗ ವಿದೇಶದಲ್ಲಿ ಉದ್ಯೋಗದಲ್ಲಿರುವ ಮತದಾರರಿಗೆ ನೋಟಿಸ್ ಜಾರಿಯಾದರೆ ಏನ್ ಮಾಡಬೇಕೆಂದು ಸ್ಪಷ್ಟವಾಗಿ ಲಿಖಿತ ಆದೇಶ ನೀಡಿಲ್ಲ.ಖುದ್ದಾಗಿ ಹಾಜರಾಗಬೇಕೇ! ಅಥವಾ ಅವರ ಪರವಾಗಿ ಕುಟುಂಬಸ್ಥರು ವಿಚಾರಣೆಗೆ ಹಾಜರಾದರೆ ಸಾಕೇ ಎಂದು ಮತದಾರರು ಗೊಂದಲದಲ್ಲಿದ್ದಾರೆ. ನೋಟಿಸ್ ವಿಚಾರಣೆಗಾಗಿ ದುಬೈನಿಂದ ಏಕಾಏಕಿ ಬರಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ.

ಮಂಗಳವಾರದವರೆಗೆ ವಿದೇಶದಲ್ಲಿರುವ ಕೊಡಗಿನ ಮತದಾರರಿಗೆ ನೋಟಿಸ್ ವಿತರಣೆಯಾಗಿರುವ ಏಕೈಕ ಘಟನೆ ಮಾತ್ರ ವರದಿಯಾಗಿದ್ದು,ಸಂಪೂರ್ಣ ನೋಟಿಸ್ ವಿತರಣೆಯ ಬಳಿಕ ಎಷ್ಟು ಮಂದಿ ವಿದೇಶದಲ್ಲಿರುವ ಕೊಡಗಿನ ಮತದಾರರಿಗೆ ನೋಟಿಸ್ ನೀಡಲಾಗಿದೆ ಎಂಬ ಸ್ಪಷ್ಟ ಮಾಹಿತಿ ದೊರೆಯಲಿದೆ.

ಬಿಎಲ್‌ಒ ಎಡವಟ್ಟು ಮತದಾರರಿಗೆ ಸಂಕಷ್ಟ

ಎಸ್‌ಐಆರ್ ಪ್ರಕ್ರಿಯೆಯ ಮೊದಲ ಹಂತದಲ್ಲಿ ಎನ್ಯುಮರೇಶನ್ ಫಾರ್ಮ್ ಅಪ್ಲೋಡ್ ಮಾಡುವಾಗ ಬಿಎಒಗಳು ಮಾಡಿರುವ ಎಡವಟ್ಟಿನಿಂದ ಮತದಾರರು ನೋಟಿಸ್ ಪಡೆದು ವಿಚಾರಣೆಗೆ ಹಾಜರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಅದಲ್ಲದೇ ಲಾಜಿಕಲ್ ಡಿಸ್ಕ್ರಿಪೆನ್ಸಿಯಲ್ಲಿ ಪ್ರತ್ಯೇಕಿಸಲಾಗಿರುವ ಮತದಾರರ ಮಾಹಿತಿ ಬಿಎಲ್ ಒ ಆ್ಯಪ್‌ನಲ್ಲಿ ಇತ್ತು. ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳುವದಕ್ಕಿಂತ ಮುಂಚಿತವಾಗಿ ಸರಿಪಡಿಸಲು ಕೂಡ ಅವಕಾಶ ಇತ್ತು.ಆದರೆ ಬೆರಳೆಣಿಕೆಯಷ್ಟು ಭಾಗದಲ್ಲಿ ಮಾತ್ರ ಸರಿಪಡಿಸಲಾಗಿದೆ.ಲಾಜಿಕಲ್ ಡಿಸ್ಕ್ರಿಪೆನ್ಸಿ ಅಡಿಯಲ್ಲಿ ಗುರುತಿಸಿರುವ ಮತದಾರರಿಗೆ ಕೂಡ ಬಿಎಲ್‌ಒ ಮಾಹಿತಿ ನೀಡಿಯೇ ಇಲ್ಲ ಎಂಬ ಆರೋಪಗಳು ಕೇಳಿಬರುತ್ತಿದೆ.

ಅಮ್ಮತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಲಿಯೇರಿಯಲ್ಲಿ ಮತದಾರರೊಬ್ಬರು ಎನ್ಯುಮರೇಶನ್ ಫಾರ್ಮ್ ಭರ್ತಿ ಮಾಡಿ ಕೊಟ್ಟಿದ್ದರು ಕೂಡ ಬಿಎಲ್‌ಒ ಅಪ್ಲೋಡ್ ಮಾಡದೆ ನಿರ್ಲಕ್ಷö್ಯ ವಹಿಸಿದ್ದಾರೆ ಎಂದು ಮತದಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

-ವರದಿ : ಕೆ.ಎಂ. ಇಸ್ಮಾಯಿಲ್ ಕಂಡಕೆರೆ