ಮಡಿಕೇರಿ, ಸೆ. ೯: ಎಂಡಿಎAಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಕುಶಾಲನಗರ ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೋಮವಾರಪೇಟೆ ತಾಲೂಕಿನ ಮಾದಾಪುರ ನಿವಾಸಿ ಶಫೀಕ್ (೨೭) ಬಂಧಿತ ಆರೋಪಿ. ಕುಶಾಲನಗರ ವ್ಯಾಪ್ತಿಯ ಹಳೇ ಮಾರ್ಕೇಟ್ ರಸ್ತೆಯಲ್ಲಿ ಎಂಡಿಎAಎ ಮಾರಾಟ ಮಾಡುತ್ತಿರುವುದರ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ ೧೪ ಗ್ರಾಂ ಎಂಡಿಎAಎ, ಕೃತ್ಯಕ್ಕೆ ಬಳಸಿದ ಕಾರು ಹಾಗೂ ಮೊಬೈಲ್ ಅನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಸೋಮವಾರಪೇಟೆ ಡಿವೈಎಸ್‌ಪಿ ಚಂದ್ರಶೇಖರ್, ಕುಶಾಲನಗರ ಟೌನ್ ಇನ್ಸ್ಪೆಕ್ಟರ್ ಬಿ.ಆರ್. ಪ್ರದೀಪ್, ಮಡಿಕೇರಿ ಗ್ರಾಮಾಂತರ ಪಿಎಸ್‌ಐ ಹೆಚ್.ಟಿ. ಗೀತಾ, ಮುಖ್ಯ ಪೇದೆ ಸುನಿಲ್ ಕುಮಾರ್, ಡಿಸಿಆರ್‌ಬಿಯ ನಿರಂಜನ್, ಬಿ.ಕೆ. ಪ್ರವೀಣ್, ಸಿ.ಕೆ. ರಾಜೇಶ್, ಶರತ್ ರೈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.