ಮಡಿಕೇರಿ, ಸೆ. ೮: ಕೌಟುಂಬಿಕ ಆಚರಣೆಗಳು, ಸಂಪ್ರದಾಯದ ಮುಂದುವರಿಕೆ ಹಾಗೂ ಸಂಸ್ಕಾರಯುತ ಜೀವನದ ಮೂಲಕ ಸಾಮರಸ್ಯದ ಬದುಕು ನಿರ್ಮಾಣ ಸಾಧ್ಯ ಎಂದು ಶಕ್ತಿ ದಿನ ಪತ್ರಿಕೆಯ ಸಂಪಾದಕ ಜಿ ಚಿದ್ವಿಲಾಸ್ ಅಭಿಪ್ರಾಯಪಟ್ಟರು.

ಮಡಿಕೇರಿಯ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಸಭಾಂಗಣದಲ್ಲಿ ನಡೆದ ನಾಯರ್ ಸಮಾಜದ ಓಣಂ ಹಬ್ಬದ ಆಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಜಾತಿ ಧರ್ಮಗಳ ಒಗ್ಗಟ್ಟು ಉತ್ತಮ ಸಮಾಜವನ್ನು ನಿರ್ಮಿಸುತ್ತದೆ ಎನ್ನುವ ಪರಿಕಲ್ಪನೆ ಪ್ರತಿಯೊಬ್ಬರಿಗೂ ಇರಬೇಕು, ಆದರೆ ಇಂದು ಸಮಾಜದಲ್ಲಿ ಧರ್ಮ ಧರ್ಮಗಳ ನಡುವಿನ ಭಿನ್ನಾಭಿಪ್ರಾಯ ಜನರ ಮನಸ್ಸನ್ನು ಒಡೆಯುತ್ತಿದ್ದು, ಸಮಾಜದ ಒಗ್ಗಟ್ಟಿಗೆ ಧಕ್ಕೆ ತರುತ್ತಿದೆ ಎಂದು ವಿಷಾದಿಸಿದರು. ಅತ್ಯಾಚಾರ, ಅನಾಚಾರ, ಕ್ರೌರ್ಯಗಳು ಊಹೆಗೂ ನಿಲುಕದ ರೀತಿ ಸಮಾಜದಲ್ಲಿ ಕಂಡು ಬರುತ್ತಿರುವುದು ಅತ್ಯಂತ ನೋವಿನ ವಿಚಾರವಾಗಿದೆ. ಭಾರತದ ಸಂಸ್ಕಾರದ ಬದುಕನ್ನು ಅಳವಡಿಸಿಕೊಳ್ಳದವರು ಇಂತಹ ಹೀನ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದರು. ಓಣಂ ಹಬ್ಬದ ಆಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಸಮಾಜದ ಅಧ್ಯಕ್ಷ ಕೆ.ಕೆ. ಹರೀಶ್ ಕುಮಾರ್ ವಹಿಸಿದ್ದರು. ನಾಯರ್ ಸಮಾಜದ ಬೆಂಗಳೂರು ಕೇಂದ್ರದ ನ್ಯಾಯ ವಾದಿ ವಿಜಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ನಾರಾಯಣ ನಂಬಿ ಯಾರ್, ಕೋಶಾಧಿಕಾರಿ ವಿಜಯಕುಮಾರ್ ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿದರು. ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಜಾ ನಾಯರ್ ರಾಧಾ ಮನೋಜ್, ಕೋಶಾಧ್ಯಕ್ಷ ಉತ್ತಮನ್, ಮಧುಸೂದನ್ ವೇದಿಕೆಯಲ್ಲಿದ್ದರು. ಯದುವೀರ್ ಪ್ರಾರ್ಥನೆ ಮಾಡಿದರು. ಮಹಿಳಾ ವಿಭಾಗದವರಿಂದ ಆಕರ್ಷಕ ತಿರುವಾದಿರ ಕಳಿ ಹಾಗೂ ಸಮಾಜ ಬಾಂಧವರಿAದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರತಿಭಾವಂತ ವಿದ್ಯಾರ್ಥಿಗಳಾದ ಧಾರ್ಮಿಕ್, ಅರ್ಚನ್ ಕೃಷ್ಣ ಅಭಿನವ್ ಬಿ ನಾಯಕ್, ವಿದ್ಯಾಲಕ್ಷಿö್ಮ, ಅರ್ಜುನ್ ಶ್ರೀಧರ್, ಕಾರ್ತಿಕ್ ಧನುಷ್ ಹಾಗೂ ಈಶ್ವರಿ ಇವರುಗಳನ್ನು ಸನ್ಮಾನಿಸಲಾಯಿತು. ಸಮಾಜಸೇವೆಗಾಗಿ ಮೋಹನ್ ದಾಸ್ ಪಿಳ್ಳೆ, ನಿವೃತ್ತ ಯೋಧ ಪ್ರಭಾಕರ್ ನಾಯರ್, ನಿವೃತ್ತ ಅಧ್ಯಾಪಕಿ ಲಕ್ಷಿö್ಮ ಭರತನ್, ಯೋಗ ಶಿಕ್ಷಕ ಕೆ. ಕೆ.ಮಹೇಶ್ ಕುಮಾರ್ ಶಿಕ್ಷಕಿ ಸುಜಾತ ಅವರುಗಳನ್ನು ಸನ್ಮಾನಿಸಲಾಯಿತು. ಪ್ರೀಜಿತ ಶ್ರೀಧರ್ ವರದಿ ವಾಚಿಸಿ, ರಜನಿ ರಾಜನ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.