ಮಡಿಕೇರಿ, ಸೆ. ೮: ನಮ್ಮ ಗ್ರಾಮ ತೊಂಬತ್ತುಮನೆ ಹಾಗೂ ಚೂರಿಕಾಡ್ ಪೈಸಾರಿ ಕಾಂತೂರು, ಮೂರ್ನಾಡು, ಐಕೊಳ, ತೊಂಬತ್ತುಮನೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ವರದಿಯಾಗಿದೆ. ಗ್ರಾಮಗಳ ಸುತ್ತಮುತ್ತ ಹುಲಿಯ ಚಲನವಲನ ಕಂಡುಬರುತ್ತಿರುವುದರಿAದ ರೈತರು, ಕೂಲಿ ಕಾರ್ಮಿಕರು, ಮಹಿಳೆಯರು, ಮಕ್ಕಳು ಮತ್ತು ಶಾಲಾ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ.

ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಹುಲಿಯ ಚಲನವಲನವನ್ನು ಪತ್ತೆಹಚ್ಚಲು ತಜ್ಞರ ತಂಡವನ್ನು ನಿಯೋಜಿಸಬೇಕು. ಗ್ರಾಮಗಳ ಸುತ್ತಮುತ್ತ ಸೂಕ್ತ ನಿಗಾವ್ಯವಸ್ಥೆ, ಕ್ಯಾಮೆರಾ ಅಳವಡಿಕೆ ಹಾಗೂ ಅರಣ್ಯ ಸಿಬ್ಬಂದಿಯ ಗಸ್ತು ಹೆಚ್ಚಿಸಬೇಕು. ಜನರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

-ಪಿ.ಪಿ. ಸುಕುಮಾರ್