ಗೋಣಿಕೊಪ್ಪ ವರದಿ, ಸೆ. ೮: ಹಾಲುಗುಂದ ಬೈರಂಬಾಡ ಫಾರ್ಮರ್ಸ್ ರಿಕ್ರಿಯೇಷನ್ ಕ್ಲಬ್ ಆಶ್ರಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ನಡೆಸಲಾಯಿತು. ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿ ಗೌರವ ಸ್ವೀಕರಿಸಿದರು.
ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪುದಿಯೊಕ್ಕಡ ರಮೇಶ್ ಉದ್ಘಾಟಿಸಿ ಶುಭ ಕೋರಿದರು. ಜಂಟಿ ಕಾರ್ಯದರ್ಶಿ ಕೇತಿರ ಯತೀಶ್ ಹಾಜರಿದ್ದರು.
ಫಾರ್ಮರ್ಸ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಪಂದಿಕAಡ ದಿನೇಶ್, ಉಪಾಧ್ಯಕ್ಷ ಅಪ್ಪಾರಂಡ ಸುದೀರ್, ದೇವತಕ್ಕ ಮಚ್ಚೇಟಿರ ನಂಜಪ್ಪ, ಕಾರ್ಯಾಧ್ಯಕ್ಷ ಚೆಯ್ಯಂಡ ಭರತ್ ಉಪಸ್ಥಿತರಿದ್ದರು. ಪಂದಿಕAಡ ನಾಗೇಶ್ ಸ್ವಾಗತಿಸಿದರು.