ಸುಂಟಿಕೊಪ್ಪ, ಸೆ. ೮: ಅನಾರೋಗ್ಯದಿಂದ ಬಳಲುತ್ತಿರುವ ಆಟೋ ಚಾಲಕನಿಗೆ ಸುಂಟಿಕೊಪ್ಪ ಆಟೋ-ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ಚಿಕಿತ್ಸೆಗೆ ಧನಸಹಾಯ ನೀಡಲಾಯಿತು.

ಆಟೋ ಚಾಲಕ ಗರÀಗಂದೂರು ನಿವಾಸಿ ದೇವಪ್ಪ ಅವರಿಗೆ ರೂ. ೧೦,೦೦೦ ನೀಡಲಾಯಿತು.

ಈ ಸಂದರ್ಭ ಸಂಘದ ಅಧ್ಯಕ್ಷ ಶರೀಫ್, ಕಾರ್ಯದರ್ಶಿ ಸಚಿನ್, ಖಜಾಂಚಿ ಹರೀಶ್, ಸುನಿಲ್, ಗೌರವ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು.