ಮಡಿಕೇರಿ, ಸೆ. ೭: ಪಡಿತರ ವಿತರಕರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರಿಗೆ ಜಿಲ್ಲಾ ಪಡಿತರ ವಿತರಕರ ಸಂಘ ಮನವಿ ಸಲ್ಲಿಸಿದೆ.

ಸರ್ವರ್ ಸಮಸ್ಯೆ ಪಡಿತರ ವಿತರಕರನ್ನು ಕಾಡುತ್ತಿದ್ದು, ಇದನ್ನು ಸರಳೀಕರಣಗೊಳಿಸಬೇಕು. ಪಡಿತರ ವಿತರಣೆಗೆ ನಿಗದಿಪಡಿಸಿರುವ ಸಮಯ ಅವೈಜ್ಞಾನಿಕವಾಗಿದ್ದು, ಇದರಿಂದ ಮಾನಸಿಕ ಒತ್ತಡ ಉಂಟಾಗಿದೆ. ಸಮಯವನ್ನು ಮರುಪರಿಶೀಲಿಸಿ ಸಹಕಾರಿಯಾಗುವ ಸಮಯ ನಿಗದಿಗೊಳಿಸಬೇಕು. ಕಳೆದ ಏಪ್ರಿಲ್‌ನಿಂದ ಕಮೀಷನ್ ಹಣ ಸಂದಾಯವಾಗಿಲ್ಲ. ಇದನ್ನು ಪಾವತಿಸಿ, ಮುಂದೆ ಆಯಾ ತಿಂಗಳ ತಾ. ೧೦ರೊಳಗಾಗಿ ಹಣವನ್ನು ಜಮಾ ಮಾಡಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ವಿತರಕರು ಮುಂದಿಟ್ಟಿದ್ದಾರೆ. ಮನವಿ ಸಲ್ಲಿಕೆ ಸಂದರ್ಭ ಸಂಘದ ಪದಾಧಿಕಾರಿಗಳಾದ ಬೆಪ್ಪುರನ ಮೇದಪ್ಪ, ಎನ್.ಎಸ್. ಸಾಂಬಾಯ್ಯ, ಪಟ್ಟು ರಮೇಶ್, ಸಮೀರ್, ಶಿವಣ್ಣ ಸೇರಿದಂತೆ ಇನ್ನಿತರರು ಇದ್ದರು.