ವೀರಾಜಪೇಟೆ, ಸೆ. ೭: ತಾಲೂಕಿನ ಮಗ್ಗುಲ ಗ್ರಾಮದಲ್ಲಿರುವ ಕಲಿಯುಗದ ಕರ್ಮದಾತ ಶ್ರೀ ಶನೀಶ್ವರ ಮತ್ತು ನವಗ್ರಹ ದೇವಾಲಯದಲ್ಲಿ ವರ್ಷಂಪ್ರತಿ ನಡೆಯುವಂತೆ ಈ ಬಾರಿಯೂ ಶ್ರಾವಣ ಮಾಸದ ಪೂಜಾ ಮಹೋತ್ಸವವು ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿAದ ಸಂಪನ್ನಗೊAಡಿತು.

ಕಳೆದ ಆಗಸ್ಟ್ ೧೫ರ ಮೊದಲ ಶನಿವಾರದಂದು ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಚಾಲನೆ ಪಡೆದ ಶ್ರಾವಣ ಪೂಜಾ ಮಹೋತ್ಸವವು, ಆಗಸ್ಟ್ ೨೨, ಆಗಸ್ಟ್ ೨೯ ಹಾಗೂ ಸೆಪ್ಟೆಂಬರ್ ೫ರ ಶನಿವಾರದವರೆಗೆ ಒಟ್ಟು ನಾಲ್ಕು ಶನಿವಾರಗಳ ಕಾಲ ಸಾಗಿದ್ದು, ಮಹಾಪೂಜೆಯೊಂದಿಗೆ ಮುಕ್ತಾಯಗೊಂಡಿತು.

ಶ್ರಾವಣ ಶನಿವಾರಗಳ ಪವಿತ್ರ ದಿನಗಳಲ್ಲಿ ದೇವಾಲಯದಲ್ಲಿ ನವಗ್ರಹ ಪೂಜೆ, ಶನಿ ಶಾಂತಿ ಪೂಜೆ ಹಾಗೂ ಶನಿ ಜಪ ಸೇರಿದಂತೆ ವಿವಿಧ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಶನಿ ದೇವರಿಗೆ ವಿಶೇಷ ಅಭಿಷೇಕ, ಮಹಾಪೂಜೆ ಮತ್ತು ಮಹಾಮಂಗಳಾರತಿ ನೆರವೇರಿತು. ಶನಿ ದೋಷ ನಿವಾರಣೆ, ಮನಃಶಾಂತಿ ಹಾಗೂ ಕಷ್ಟ-ಕಾರ್ಪಣ್ಯಗಳು ದೂರವಾಗಿ ಸಮೃದ್ಧಿ ಲಭಿಸಲಿ ಎಂದು ಪ್ರಾರ್ಥಿಸಿ ತಾಲೂಕು ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತಾದಿಗಳು ದೇವಾಲಯದಲ್ಲಿ ಎಳ್ಳು ದೀಪ ಬೆಳಗಿಸಿ, ವಿಶೇಷ ಪೂಜೆ ಸಲ್ಲಿಸಿ ತಮ್ಮ ಹರಕೆಗಳನ್ನು ತೀರಿಸಿ ದೇವರ ಕೃಪೆಗೆ ಪಾತ್ರರಾದರು.

ಪ್ರತಿ ಶನಿವಾರ ಮಧ್ಯಾಹ್ನ ನಾಡಿನ ಕ್ಷೇಮಕ್ಕಾಗಿ ಮಹಾಪೂಜೆ ನೆರವೇರಿ, ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಚೋಕಂಡ ರಮೇಶ್ ಅವರು ಮಾತನಾಡಿ, “ಗ್ರಾಮಸ್ಥರು, ಊರಿನವರು ಹಾಗೂ ದಾನಿಗಳ ಉದಾರ ತನು-ಮನ-ಧನದ ಸಹಕಾರದಿಂದ ಶ್ರಾವಣ ಮಾಸದ ನಾಲ್ಕೂ ಶನಿವಾರಗಳ ಪೂಜಾ ಮಹೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಇದೇ ಸಂದರ್ಭ ನಾಡಿನ ಸುಭಿಕ್ಷೆಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಪ್ರಧಾನ ಅರ್ಚಕರು, “ಶ್ರಾವಣ ಶನಿವಾರದ ಪವಿತ್ರ ದಿನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನವಗ್ರಹ ಹಾಗೂ ಶ್ರೀ ಶನೀಶ್ವರ ದೇವರಿಗೆ ಪೂಜೆ ಸಲ್ಲಿಸಿದ್ದಾರೆ ಎಂದರು.