ಕುಶಾಲನಗರ, ಸೆ. ೬: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ೨೦೨೫-೨೬ನೇ ಸಾಲಿನಲ್ಲಿ ರೂ ೫೮.೧೨ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಬಿ.ಚಂದ್ರಪ್ಪ ಅವರು ತಿಳಿಸಿದರು.

ಸಂಘದ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ಅಭಿವೃದ್ಧಿ ಬಗ್ಗೆ ಮಾಹಿತಿ ಒದಗಿಸಿದರು. ಸಂಘವು ಕಳೆದ ೮೩ ವರ್ಷಗಳಿಂದ ಸದಸ್ಯರಿಗೆ ಹಾಗೂ ಸದಸ್ಯರೇತರರಿಗೆ ಉತ್ತಮ ಸೇವೆ ಒದಗಿಸುತ್ತಾ ಬಂದಿದೆ. ೨೧೨೨ ಸದಸ್ಯರನ್ನು ಹೊಂದಿರುವ ಸಂಘ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕಿಗೆ ಪಡಿತರ ವಿತರಣೆಯ ಸಗಟು ನಾಮಿನಿಯಾಗಿ ಕಾರ್ಯನಿರ್ವಹಿಸುತ್ತಿದೆ.

೧೦೦ ನ್ಯಾಯಬೆಲೆ ಅಂಗಡಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಕುಶಾಲನಗರ ಮುಖ್ಯ ರಸ್ತೆಯಲ್ಲಿ ವ್ಯಾಪಾರ ಸಂಕೀರ್ಣ ಹೊಂದಿದ್ದು, ಗ್ರಾಹಕರ ಶಾಖೆ, ಸ್ಟೇಷನರಿ, ಗೊಬ್ಬರ, ಕ್ರಿಮಿನಾಶಕ, ಬಿತ್ತನೆಬೀಜ, ಕೋವಿ ತೋಟಾ, ಜನತಾ ಬಜಾರ್ ಮೆಡಿಕಲ್ಸ್, ಹಾಗೂ ಸದಸ್ಯರಿಗೆ ಅತೀ ಕಡಿಮೆ ಬಡ್ಡಿ ದರದಲ್ಲಿ ಚಿನ್ನಾಭರಣ ಸಾಲ, ವಾಹನ ಸಾಲ, ಅಡಮಾನ ಸಾಲಗಳ ಬ್ಯಾಂಕಿAಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಸೇವೆ ಹಾಗೂ ಸೌಲಭ್ಯಗಳ ಬಗ್ಗೆ ವಿವರ ನೀಡಿದರು.

ಸಂಘದ ೨೦೨೫-೨೬ನೇ ಸಾಲಿನ ೭೫ನೇ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ ೮ ರಂದು ರೈತಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಂಘದ ೪೨ ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕದಿಂದ ಕಳೆದ ಸಾಲಿನಲ್ಲಿ ರೂ. ೩,೮೩,೦೦೦ ಆದಾಯ ಲಭಿಸಿರುವುದಾಗಿ ತಿಳಿಸಿದರು.

ಸಂಘದ ಸದಸ್ಯರಿಗೆ ಶೇ.೨೦% ರಷ್ಟು ಡಿವಿಡೆಂಡ್ ನೀಡಲಾಗುವುದು ಮಹಾಸಭೆಯಲ್ಲಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವ ೧೦ನೇ ತರಗತಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತಲಾ ಇಬ್ಬರು ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು. ಕುಶಾಲನಗರ, ಹೆಬ್ಬಾಲೆ, ಸುಂಟಿಕೊಪ್ಪ ಭಾಗದ ಶಾಲೆಗಳ ವಿದ್ಯಾರ್ಥಿಗಳಿಗೆ ೩ ಸಾವಿರ ಪುಸ್ತಕ ವಿತರಣೆ ಯೋಜನೆ ಹಮ್ಮಿಕೊಳ್ಳಲಾಗಿದೆ. ರೈತ ಸಹಕಾರ ಸಂಭಾಗಣದಲ್ಲಿ ಬೇಸಿಗೆ ಸಮಯದಲ್ಲಿ ಬಿಸಿ ಶಾಖ ಹೆಚ್ಚಾಗಿ ಇರುವುದರಿಂದ ಸದಸ್ಯರು ಹಾಗೂ ಸಾರ್ವಜನಿಕರ ಸಲಹೆ ಹಾಗೂ ಅಭಿಪ್ರಾಯದಂತೆ ಈಗಾಗಲೇ ಎರಡು ಹೆಲಿಕ್ಯಾಪ್ಟರ್ ಫ್ಯಾನ್ ಗಳನ್ನು ಅಳವಡಿಸಲಾಗಿದೆ.

ರೈತ ಭವನದಲ್ಲಿ ನಿರ್ಮಿಸಿರುವ ಹೈಟೆಕ್ ಶೌಚಾಲಯ ಉದ್ಘಾಟನೆ ಕೂಡ ಸೆ.೮ ರಂದು ಬೆಳಗ್ಗೆ ನಡೆಯಲಿದೆ. ಇದರೊಂದಿಗೆ ಬೈಚನಹಳ್ಳಿಯಲ್ಲಿ ವಿಶಾಲವಾದ ಗೋದಾಮು ನಿರ್ಮಾಣ, ಸಾರಿಗೆ ಬಸ್ ನಿಲ್ದಾಣ ಮುಂಭಾಗದ ಸಂಘದ ನಿವೇಶನದಲ್ಲಿ ಸುಸಜ್ಜಿತ ಕಾಂಪ್ಲೆಕ್ಸ್ ನಿರ್ಮಾಣ ಚಿಂತನೆ ಹೊಂದಲಾಗಿದೆ. ಸಂಘದ ಕಛೇರಿಯನ್ನು ಕೂಡ ಹೈಟೆಕ್ ಮಾಡಲಾಗುವುದು ಎಂದು ಅವರು ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಚಂದ್ರಕಲಾ ಹೆಚ್.ಟಿ, ನಿರ್ದೇಶಕರಾದ ಮಲ್ಲಿಕಾರ್ಜುನ ಬಿ.ಸಿ, ಮಹದೇª

ï ಹೆಚ್.ಎನ್, ಪಾರ್ವತಿ ಬಿ.ಎಂ, ಮಂಜುನಾಥ್ ಕೆ.ಎಸ್, ಪೊನ್ನಪ್ಪ ಎನ್.ಸಿ. ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಜಿ. ಜಗದೀಶ್ ಇದ್ದರು.