ಮಡಿಕೇರಿ, ಸೆ. ೫: ಮೈಸೂರು ಬಳಿಯ ಹೂಟಗಳ್ಳಿಯ ಕೊಡಗು ಗೌಡ ಕ್ಷೇಮಾಭಿವೃದ್ಧಿ ಸಂಘದ ೧೨ನೇ ವಾರ್ಷಿಕ ಮಹಾಸಭೆ ಕೊಡಗು ಗೌಡ ಸಮಾಜ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಪೊನ್ನಚನ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಪೊನ್ನಚನ ಅಪ್ಪಯ್ಯ, ಸಂಘದ ಸದಸ್ಯರ ಕುಟುಂಬಗಳಲ್ಲಿ ನಡೆಯುವ ಸುಖ-ದುಃಖದ ಸಂದರ್ಭಗಳಲ್ಲಿ ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕೊಡಗಿನ ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಂಡು ಪರಸ್ಪರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕೊಡಗು ಗೌಡ ಸಮಾಜ ಮೈಸೂರು ವತಿಯಿಂದ ಆಯೋಜಿಸುವ ಗಣರಾಜ್ಯೋತ್ಸವ, ಸ್ವಾತಂತ್ರ‍್ಯೋತ್ಸವ, ಆಟಿ ಹಬ್ಬ, ಕೈಲ್ ಮುಹೂರ್ತ, ಹುತ್ತರಿ ಹಬ್ಬ, ಕಾವೇರಿ ತೀರ್ಥ ವಿತರಣೆ, ಗುಡ್ಡೆಮನೆ ಅಪ್ಪಯ್ಯ ಗೌಡರ ಸಂಸ್ಮರಣಾ ದಿನ ಹಾಗೂ ಅರೆಭಾಷೆ ದಿನಾಚರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಸಂಘದ ಸದಸ್ಯರು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭ ಸಂಘದ ಹಿರಿಯ ಸದಸ್ಯರಾದ ಬೆಳ್ಳಿಮಾನಿ ಮೋಹನಕುಮಾರ್ ಹಾಗೂ ಸುಧಾರಾಣಿ ದಂಪತಿಯ ಪುತ್ರಿ ಕುಮಾರಿ ದಕ್ಷ ಅವರು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯ ವತಿಯಿಂದ ವಿದೇಶದಲ್ಲಿ ಕಾರ್ಯನಿರ್ವಹಿಸಲು ತೆರಳುತ್ತಿರುವ ಹಿನ್ನೆಲೆಯಲ್ಲಿ ಸಂಘದ ವತಿಯಿಂದ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಮುಕ್ಕಾಟಿ ಅರುಣ್ ಕುಮಾರ್, ಉಪಾಧ್ಯಕ್ಷ ಚೆರುಕನ ಲವ, ಖಜಾಂಚಿ ಎಡಿಕೇರಿ ಪೂಣಚ್ಚ, ಸಹಕಾರ್ಯದರ್ಶಿ ಹೊಸೊಕ್ಲು ಅಪ್ಪಯ್ಯ, ನಡುಮನೆ ಚಂಗಪ್ಪ, ನಿರ್ದೇಶಕರಾದ ನೆಕ್ಕಿಲ ಮಾಧವ, ಉದಯನ ಸುರೇಶ್, ಚೀಯಪ್ಪನ ರಾಜೇಶ್, ಚೆರುಕನ ಕುಶ, ಮುಕ್ಕಾಟಿ ತಿಲಕಾನಂದ, ಸೂರ್ತಲೆ ಹರೀಶ್, ಕರ್ಣಯ್ಯನ ನೀಲಾಕ್ಷಿ ಮೋಹನ್, ಚಿಕ್ಕೋಡಿ ಪುಷ್ಪ ರೇಖಾ ರಮೇಶ್ ಹಾಗೂ ವಿಶೇಷ ಆಹ್ವಾನಿತರಾದ ಕಡ್ಲೇರ ನಾಗೇಶ್ ಮತ್ತು ನಂಗಾರು ಮೋಹನ್ ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ಮುಕ್ಕಾಟಿ ಅರುಣ್ ಕುಮಾರ್ ಸ್ವಾಗತಿಸಿದರು. ಉಪಾಧ್ಯಕ್ಷ ಚೆರುಕನ ಲವ ವಂದಿಸಿದರು.