ಮಡಿಕೇರಿ,ಸೆ.೪; ಸರಕಾರ ಬಡವರಿಗೆ ಉಚಿತವಾಗಿ ನೀಡುತ್ತಿರುವ ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಆಹಾರ ಇಲಾಖೆಯವರು ಅಕ್ಕಿ ಸಹಿತ ವಾಹನ ವಶಪಡಿಸಿಕೊಂಡು ಪೊಲೀಸರ ವಶಕ್ಕೊಪ್ಪಿಸಿದ್ದಾರೆ.

ಮಡಿಕೇರಿಯಿಂದ ಪಿಕ್ ಅಪ್ ವಾಹನದಲ್ಲಿ (ಕೆ ೧೨ ಸಿ ೩೨೫೦) ಸುಮಾರು ೭೦ ಚೀಲಗಳಲ್ಲಿ ತುಂಬಿಕೊAಡು ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಲಾಗಿದೆ. ಮಡಿಕೇರಿಯಿಂದ ಶನಿವಾರಸಂತೆ ಕಡೆಗೆ ಅಕ್ಕಿ ಸಾಗಾಟ ಮಾಡುತ್ತಿದ್ದುದಾಗಿ ತಿಳಿದುಬಂದಿದೆ. ಆಹಾರ ನಿರೀಕ್ಷಕಿ ವೀಣಾ ನೀಡಿದ ದೂರಿನನ್ವಯ ಅಕ್ಕಿ ಹಾಗೂ ವಾಹನವನ್ನು ವಶಪಡಿಸಿಕೊಂಡಿರುವ ನಗರ ಠಾಣಾಧಿಕಾರಿ ಶ್ರೀಧರ್, ಚಾಲಕ ಸೋಮವಾರಪೇಟೆಯ ರವಿ ಎಂಬಾತನನ್ನು ಬಂದಿಸಿದ್ದಾರೆ.