ಮಡಿಕೇರಿ, ಸೆ. ೨: ಜಾನಪದ ಕಲಾವಿದರು, ವಿದ್ವಾಂಸರು, ವಾದ್ಯಗಾರರು, ಬುಡಕಟ್ಟು ಜನರನ್ನೊಳಗೊಂಡAತೆ ‘ಜಾನಪದ ಸಂಗಮ’ ಹೆಸರಿನ ಕಾರ್ಯಕ್ರಮವನ್ನು ಗಿರಿಜನ ಉಪಯೋಜನೆಯಡಿ ಸರ್ಕಾರವು ಹೊಸ ಯೋಜನೆಯಾಗಿ ಘೋಷಿಸಿದೆ. ಗಿರಿಜನ ಉಪಯೋಜನೆಯಡಿ ರಾಜ್ಯದ ೪ ವಿಭಾಗಗಳಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಜಾನಪದ ಕಲಾಪ್ರಕಾರದ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳ ೧೬ ರಿಂದ ೪೦ ವರ್ಷದೊಳಗಿನ ವಯೋಮಾನದ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅಕಾಡೆಮಿಯ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ರಿಜಿಸ್ಟಾçರ್, ಕರ್ನಾಟಕ ಜಾನಪದ ಅಕಾಡೆಮಿ, ೨ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-೫೬೦೦೦೨ ಇವರಿಗೆ ತಾ.೧೬ ರೊಳಗೆ ತಲುಪಿಸಲು ಕೋರಿದೆ.
ಅರ್ಜಿ ನಮೂನೆಯನ್ನು ಅಕಾಡೆಮಿ ವೆಬ್‌ಸೈಟ್ ವಿಳಾಸ hಣಣಠಿs://ರಿಚಿಟಿಚಿಠಿಚಿಜಚಿ.ಞಚಿಡಿಟಿಚಿಣಚಿಞಚಿ.gov.iಟಿ/ ಇಲ್ಲಿ ಪಡೆದುಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಅಕಾಡೆಮಿ ಇ-ಮೇಲ್ ಡಿegisಣಡಿಚಿಡಿ.ರಿಚಿಟಿಚಿಠಿಚಿಜಚಿ@gmಚಿiಟ.ಛಿom ಹಾಗೂ ದೂ.ಸಂ.೦೮೦-೨೨೨೧೫೫೦೯ ಅನ್ನು ಸಂಪರ್ಕಿಸಬಹುದು.
ಶಿಬಿರಾರ್ಥಿಗಳ ಆಯ್ಕೆಯಲ್ಲಿ ಅಕಾಡೆಮಿಯ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟಾçರ್ ತಿಳಿಸಿದ್ದಾರೆ.