ಸೋಮವಾರಪೇಟೆ, ಸೆ. ೨: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವಾರ್ಷಿಕ ಮಹಾಸಭೆ ಮಾನಸ ಸಭಾಂಗಣದಲ್ಲಿ ಸಂಘದ ಮಾಜಿ ಅಧ್ಯಕ್ಷ ಆರ್. ಮೋಹನ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕಳೆದ ಎರಡು ವರ್ಷಗಳಿಂದ ಸಂಘದ ಯಾವುದೇ ಚಟುವಟಿಕೆಗಳು ವ್ಯವಸ್ಥಿತಿವಾಗಿ ನಡೆದಿಲ್ಲ. ಯಾವುದೇ ಯೋಜನೆಗಳನ್ನು ಸಂಘದ ಸದಸ್ಯರಿಗೆ ನೀಡಲಾಗಿಲ್ಲ. ಮುಂದಿನ ದಿನಗಳಲ್ಲಿ ಎಲ್ಲ ಚಟುವಟಿಕೆಗಳನ್ನು ನಡೆಸಲು ನೂತನ ಸಾಲಿನ ಅಧ್ಯಕ್ಷರು ಮುಂದಾಗಬೇಕು. ಎಲ್ಲರನ್ನು ಸಂಘಟಿತರನ್ನಾಗಿ ಮಾಡಿ ಮತ್ತಷ್ಟು ಸಂಘವನ್ನು ಬಲಿಷ್ಠವಾಗಿ ಕಟ್ಟಬೇಕೆಂದು ಮೋಹನ್ ಕರೆ ನೀಡಿದರು.

ಇದೇ ಸಂದರ್ಭ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಸಂಘದ ನೂತನ ಅಧ್ಯಕ್ಷರಾಗಿ ಎಸ್.ವಿ. ಸಂಪತ್, ಉಪಾಧ್ಯಕ್ಷರಾಗಿ ಪ್ರಸನ್ನ ಯಡೂರು, ಪ್ರಧಾನ ಕಾರ್ಯದರ್ಶಿ ಪಿ.ಎಂ. ಕವನ್, ಸಹ ಕಾರ್ಯದರ್ಶಿ ಎ.ಸಿ. ಜಗದೀಶ್ ಹಾಗೂ ಖಜಾಂಚಿಯಾಗಿ ಐಗೂರಿನ ಬಿ.ಆರ್. ವಿಜು ಅವಿರೋಧವಾಗಿ ಆಯ್ಕೆಯಾದರು.

ಮುಂದಿನ ಸಭೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಘದ ಆಡಳಿತ ಮಂಡಳಿ ರಚಿಸಲಾಗುವುದು ಎಂದು ಆಯ್ಕೆಯಾದ ಅಧ್ಯಕ್ಷ ಸಂಪತ್ ಸಭೆಗೆ ತಿಳಿಸಿದರು.

ವೇದಿಕೆಯಲ್ಲಿ ಸಂಘದ ಪಾಣತ್ತಲೆ ಶಶಿ, ಅಬ್ದುಲ್ ಕರೀಂ, ಎನ್.ಡಿ. ಕೃಷ್ಣಪ್ಪ, ಶಶಿಕುಮಾರ್, ರವೀಶ್, ಸುನಿಲ್ ರೈ, ಪುಟ್ಟರಾಜು, ಎಸ್. ಪುಟ್ಟಣ್ಣ, ಶಿವಣ್ಣ, ರಾಜಣ್ಣ, ಬಜೆಗುಂಡಿ ಗಣೇಶ್ ಇದ್ದರು.