ಕುಶಾಲನಗರ, ಸೆ. ೨ : ಗೊಂದಿಬಸವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಮಧುಕುಮಾರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಕಟ್ಟಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಕ್ಷ ಮಧುಕುಮಾರ್, ಸಂಘವು ೨೦೨೫-೨೬ನೇ ಸಾಲಿನಲ್ಲಿ ರೂ ೩,೪೫,೯೨೮ ನಿವ್ವಳ ಲಾಭ ಗಳಿಸಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸೋಮಣ್ಣ, ನಿರ್ದೇಶಕರಾದ ಪ್ರಸನ್ನ ಎಂ.ಎಸ್. ಪ್ರದೀಪ್ ಡಿ.ಜಿ, ನವೀನ ಜಿ.ಎಲ್, ಶಿವಕುಮಾರ್ ಬಿ. ಎಸ್. ರಾಮೇಗೌಡ, ಲಕ್ಷö್ಮಣ ನಾಯಕ, ತಿಮ್ಮಪ್ಪ, ದಿವಾಕರ, ಉಷಾ ಡಿ, ಕಾಮಾಕ್ಷಿ, ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ವೀಣಾ ಬಿ.ವಿ, ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಶ್ರೀನಿವಾಸ ಬಿ ಎಸ್, ಹಾಲು ಪರೀಕ್ಷಕಿ ಸುಜಾತ ಇದ್ದರು.