ಕೂಡಿಗೆ, ಸೆ. ೨: ಕೂಡಿಗೆ, ಮತ್ತು ಹೆಬ್ಬಾಲೆ ವಲಯ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟವು ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲಾ ಮೈದಾನದಲ್ಲಿ ಆರಂಭಗೊAಡಿತು.

ಕ್ರೀಡಾ ಧ್ವಜಾರೋಹಣವನ್ನು ಸೋಮವಾರಪೇಟೆ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಎಂ.ವಿ. ಮಂಜೇಶ್ ನೆರವೇರಿಸಿ ಮಾತನಾಡಿ, ಪ್ರಾಥಮಿಕ ಹಂತದ ಕ್ರೀಡಾಕೂಟಗಳು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೂರಕವಾಗುತ್ತದೆ ಎಂದರು.

ಕ್ರೀಡಾ ಜ್ಯೋತಿ ಹಾಗೂ ಧ್ವಜ ವಂದನೆಯನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಭಾರತಿ ಸ್ವೀಕರಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಕೆ. ಬಸವರಾಜ್ ಮತ್ತು ಕೂಡಿಗೆ ಕ್ಲಸ್ಟರ್ ಸಿ.ಆರ್.ಪಿ. ಶಾಂತ್ ಕುಮಾರ್ ಮಾತನಾಡಿದರು.

ಕೂಡಿಗೆ ವಲಯ ಮಟ್ಟದ ಕ್ರೀಡಾಕೂಟ ೨೦೨೬-೨೭ನೇ ಸಾಲಿನ ಪ್ರಾಯೋಜಕತ್ವವನ್ನು ಮದಲಾಪುರ ಪ್ರಾಥಮಿಕ ಶಾಲೆ ವಹಿಸಿಕೊಂಡಿದೆ.

ಈ ಸಂದರ್ಭ ಮದಲಾಪುರ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ರೇಣುಕಾ ಸೇರಿದಂತೆ ಕೂಡಿಗೆ ಮತ್ತು ಹೆಬ್ಬಾಲೆ ವಲಯಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕರು ಹಾಜರಿದ್ದರು.