ನಾಪೋಕ್ಲು, ಸೆ. ೨: ಬಲ್ಲಮಾವಟಿಯ ಅಪೊಲೋ ಯುವಕ ಸಂಘ ಮತ್ತು ಕಾವೇರಿ ಮಹಿಳಾ ಸಮಾಜದ ಇವರ ಸಂಯುಕ್ತ ಆಶ್ರಯದಲ್ಲಿ ನಾಲ್ನಾಡ್ ಕೈಲ್ ಪೊಳ್ದ್ ಪ್ರಯುಕ್ತ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಬಲ್ಲಮಾವಟಿಯ ನೇತಾಜಿ ವಿದ್ಯಾಸಂಸ್ಥೆ ಮೈದಾನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಪೋಲೋ ಯುವಕ ಸಂಘದ ಖಜಾಂಚಿ ಮೂವೆರ ವಿನು ಬಿದ್ದಪ್ಪ ಅವರು ವಹಿಸಿದ್ದರು. ಕಾರ್ಯಕ್ರಮವನ್ನು ಗ್ರಾಮದ ಕಾಫಿ ಬೆಳೆಗಾರ ಚಂಗೇಟಿರ ಅಪ್ಪಯ್ಯ ತೆಂಗಿನಕಾಯಿಗೆ ಗುಂಡು ಹಾರಿಸುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಮರ್ಚೆಂಟ್ ನೇವಿ ಅಧಿಕಾರಿ ನುಚ್ಚಿಮಣಿಯಂಡ ಜಾಲಿ ಬೆಳ್ಳಿಯಪ್ಪ ಹಾಗೂ ಅಪೋಲೋ ಸಂಘದ ಸ್ಥಳ ದಾನಿಗಳಾದ ಅಪ್ಪಚೆಟ್ಟೋಳಂಡ ರಾಜ ಭೀಮಯ್ಯ ಪಾಲ್ಗೊಂಡಿದ್ದರು.
ತೆAಗಿನಕಾಯಿ ಗುಂಡು ಹೊಡೆ ಯುವುದು, ಭಾರದ ಕಲ್ಲು ಎಸೆತ, ೧೦೦ಮೀ ಓಟ, ಗೂಟ ಸುತ್ತಿ ಓಡುವುದು, ಮಹಿಳೆಯರಿಗೆ ೧೦೦ಮೀ ಓಟ, ಪಾಸಿಂಗ್ ದಿ ಬಾಲ್, ಡ್ರಮ್ಗೆ ಚೆಂಡು ಹಾಕುವುದು, ವಯಸ್ಕರಿಗೆ (೫೦ ವರ್ಷ ಮೇಲ್ಪಟ್ಟು) ೧೦೦ಮೀ ಕಾಲ್ನಡಿಗೆ, ಕಣ್ಣು ಕಟ್ಟಿ ಮಡಕೆ ಒಡೆಯುವುದು, ಪ್ರೌಢಶಾಲಾ ಬಾಲಕರು ಹಾಗೂ ಬಾಲಕಿಯರಿಗೆ ೧೦೦ಮೀ ಓಟ, ಕಾಲಿಗೆ ಬೆಲೂನ್ ಕಟ್ಟಿ ಒಡೆಯುವುದು, ನಿಂಬೆ ಚಮಚ ಓಟ ಹಾಗೂ ಇತರ ಸ್ಪರ್ಧೆಗಳು ಜರುಗಿದವು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.
ನುಚ್ಚಿಮಣಿಯಂಡ ರಶಿತ ಮುತ್ತಣ್ಣ ನಿರೂಪಿಸಿ ವಂದಿಸಿದರು.