ಕೂಡಿಗೆ, ಸೆ. ೨: ಶ್ರೀ ದಂಡಿನಮ್ಮ ಮತ್ತು ಬಸವೇಶ್ವರ ದೇವಾಲಯ ಸೇವಾ ಸಮಿತಿಯ ವತಿಯಿಂದ ಕೂಡಿಗೆ ಗ್ರಾಮದ ಹೆಬ್ಬಾಗಿಲಿನ ದ್ವಾರ ರೂ. ೭ ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ಆಡಳಿತ ಮಂಡಳಿಯ ವತಿಯಿಂದ ನೆರವೇರಿತು.
ಪೂಜಾ ಕೈಂಕರ್ಯಗಳನ್ನು ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಪ್ರಧಾನ ಅರ್ಚಕ ರಾಘವೇಂದ್ರ ಆರ್ಚಾರ್ ನೆರವೇರಿಸಿದರು.
ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಸ್. ಚಂದ್ರು, ಉಪಾಧ್ಯಕ್ಷ ಕೆ.ಬಿ. ಪ್ರಕಾಶ್, ಕಾರ್ಯದರ್ಶಿ ಕೆ.ಟಿ. ವೆಂಕಟೇಶ್,ಸಹ ಕಾರ್ಯದರ್ಶಿ ಸಂತೋಷ್, ಕರ್ನಾಟಕ ರಾಜ್ಯ ಲ್ಯಾಂಪ್ ಮಹಾಮಂಡಳದ ಅಧ್ಯಕ್ಷ, ಎಸ್. ಆರ್ . ಅರುಣ್ ರಾವ್, ಕೂಡಿಗೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಟಿ. ಗಿರೀಶ್, ದೇವಾಲಯ ಸಮಿತಿ ಮಾಜಿ ಅಧ್ಯಕ್ಷರುಗಳಾದ ಕೆ.ಟಿ ಶ್ರೀನಿವಾಸ್, ಕೆ.ಪಿ. ಸೋಮಣ್ಣ, ಕೆ.ಎನ್. ಮಂಜುನಾಥ, ಜಯಣ್ಣ, ನಿರ್ದೇಶಕರಾದ ರಂಗ (ಮಲೇಶ್) ಕೂಪ್ಪಲು ಮಂಜುನಾಥ, ನಿವೃತ್ತ ಇಂಜಿನಿಯರ್ ಕೆ.ಕೆ. ತಿಮ್ಮಪ್ಪ, ಕುಶಾಲನಗರ ಸಹಕಾರ ಸಂಘದ ಮಾಜಿ ನಿರ್ದೇಶಕ ಕೆ.ಕೆ. ನಾಗರಾಜಶೆಟ್ಟಿ. ಮಾಜಿ ಕಾರ್ಯದರ್ಶಿಗಳಾದ ಕೆ.ಎಂ. ನಾಗರಾಜ್, ಗುರುಪಾದಸ್ವಾಮಿ, ರಾಜಶೇಖರ್, ಗ್ರಾಮದ ಪ್ರಮುಖರಾದ ಶಿವಕುಮಾರ್, ವಿಶ್ವ, ವಾಸು, ಕೆ.ಕೆ ಶ್ರೀನಿವಾಸ್, ಶ್ರೀನಿವಾಸ್ ಶೆಟ್ಟಿ ಸೇರಿದಂತೆ ಹಲವು ಗ್ರಾಮಸ್ಥರು ಹಾಜರಿದ್ದರು.