ಮಡಿಕೇರಿ, ಸೆ. ೨: ಮಡಿಕೇರಿಯ ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಮಂಡುವAಡ ಪಿ ಮುತ್ತಪ್ಪ ಅಧ್ಯಕ್ಷತೆಯಲ್ಲಿ ಮಡಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು.

ಮಂಡುವAಡ ಮುತ್ತಪ್ಪ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಸಂಘವು ಜಿಲ್ಲಾದ್ಯಂತ ಕಾರ್ಯವ್ಯಾಪ್ತಿ ಹೊಂದಿದೆ. ೨೦೨೫-೨೬ ಸಾಲಿನ ಲೆಕ್ಕಪರಿಶೋಧನಾ ವರದಿಯಂತೆ ಸಂಘ ಎ ವರ್ಗೀಕರಣ ಪಡೆದುಕೊಂಡಿದೆ. ಸಂಘದಲ್ಲಿ ಒಟ್ಟು ಸದಸ್ಯರ ಸಂಖ್ಯೆ ೨೧೬೫ ಇದ್ದು ಒಟ್ಟು ಪಾಲುಬಂಡವಾಳ ೧.೧೨ ಕೋಟಿ, ಒಟ್ಟು ಠೇವಣಾತಿ ರೂ. ೬.೭೪ ಕೋಟಿ, ವಿತರಿಸಿರುವ ಸಾಲ ರೂ. ೫.೭೩ ಕೋಟಿಗಳಾಗಿವೆ. ಮನೆಸಾಲ, ಕೃಷಿಸಾಲ ಹಾಗೂ ಕೃಷಿಯೇತರ ದೀರ್ಘಾವದಿ ಸಾಲ, ಠೇವಣಿಗಳ ಮೇಲಿನ ಸಾಲ, ಆಭರಣ ಸಾಲ ನೀಡಲಾಗುತ್ತಿದೆ. ಈ ಬಾರಿ ಶೇ. ೯೭ ರಷ್ಟು ಸಾಲ ವಸೂಲಾಗಿದೆ ಎಂದು ಮಾಹಿತಿ ನೀಡಿದರು.

ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್‌ನಲ್ಲಿ ೩.೩೨ ಕೋಟಿ ಹೂಡಿಕೆ ಮಾಡಲಾಗಿದೆ. ಈ ಬಾರಿ ೨೯ ಲಕ್ಷ ನಿವ್ವಳ ಲಾಭಗಳಿಸಿದರಿಂದ ಸದಸ್ಯರಿಗೆ ಶೇ.೧೦ ಡಿವಿಡೆಂಡ್ ನೀಡಲಾಗುತ್ತಿದೆ ಎಂದು ವಿವರಿಸಿದರು.

ಹತ್ತನೇ ಹಾಗು ಪಿಯುಸಿ ಪರೀಕ್ಷೆಯಲ್ಲಿ ಶೇ ೯೦ ರ ಮೇಲ್ಪಟ್ಟು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷÀ ಕೊಳುವಂಡ.ಬಿ. ಉತ್ತಪ್ಪ, ನಿರ್ದೇಶಕರಾದ ಚೋವಂಡ ಡಿ ಕಾಳಪ್ಪ, ಅಂಜಪರವAಡ ಉಷಾ, ಕೊಂಗAಡ ಎ.ತಿಮ್ಮಯ್ಯ, ನಂದೇಟಿರ ರಾಜಾಮಾದಪ್ಪ, ಕೇಕಡ ಎಂ. ಸುಗುಣ, ಶಾಂತೆಯAಡ. ಟಿ ದೇವರಾಜ್, ನಾಪನೆರವಂಡ ಎ. ಪೊನ್ನಮ್ಮ, ಡಾ. ಸಣ್ಣುವಂಡ ಎಂ. ಕಾವೇರಪ್ಪ, ಮೇದುರ ಪಿ. ಕಾವೇರಪ್ಪ, ಚೆರುಮಂದAಡ ಜಿ. ಪೊನ್ನಪ್ಪ, ಕಾಂಡೆರ ಯು. ಕುಟ್ಟಪ್ಪ ಹಾಗೂ ಮುಖ್ಯಕಾರ್ಯನಿರ್ವಣಾಧಿಕಾರಿ ಕಳ್ಳೇಂಗಡ ನೀಮಾ ರಂಜನ್ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಚೆಟ್ರಂಡ ವಸಂತಿ ಪೂಣಚ್ಚ ಪ್ರಾರ್ಥಿಸಿ, ಕುಡುವಂಡ ಬಿ.ಉತ್ತಪ್ಪ ವಂದಿಸಿದರು.