ಕೆ.ಎಂ ಇಸ್ಮಾಯಿಲ್ ಕಂಡಕರೆ

ಮಡಿಕೇರಿ, ಸೆ. ೨: ಎಸ್‌ಐಆರ್ ಪ್ರಕ್ರಿಯೆ ಎರಡನೇ ಹಂತ ಆಗಸ್ಟ್ ೩೧ರಂದು ಆರಂಭಗೊAಡಿದ್ದು, ಕರಡು ಮತದಾರರ ಪಟ್ಟಿ ಪ್ರಕಟಗೊಂಡ ಬಳಿಕ ನೋ ಮ್ಯಾಪಿಂಗ್ ಹಾಗೂ ಲಾಜಿಕಲ್ ಡಿಸ್ಕ್ರಿಪೆನ್ಸಿ ಅಡಿಯಲ್ಲಿ ಗುರುತಿಸಲಾಗಿರುವ ಮತದಾರರಿಗೆ ನೋಟೀಸ್ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಮಂಗಳವಾರ ಸಂಜೆ ವರೆಗೆ ಬಿಎಲ್‌ಓಗಳ ಮೂಲಕ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ೯೩೭ ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ೩೦೫ ಮತದಾರರು ಸೇರಿ ಒಟ್ಟು ೧೨೪೨ ಮತದಾರರಿಗೆ ನೋಟೀಸ್ ನೀಡಲಾಗಿದೆ. ೫೭,೬೪೧ ಮತದಾರರಿಗೆ ನೋಟೀಸ್ ನೀಡಲು ಬಾಕಿ ಇದೆ. ಮಡಿಕೇರಿ ಕ್ಷೇತ್ರದಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ೯,೨೫೨ ಹಾಗೂ ೯,೫೩೩ ಮತದಾರರನ್ನು ನೋ ಮ್ಯಾಪಿಂಗ್ ಅಡಿಯಲ್ಲಿ ಗುರುತಿಸಲಾಗಿತ್ತು. ಮಡಿಕೇರಿ ಕ್ಷೇತ್ರದಲ್ಲಿ ೧೮,೭೮೫ ಮತದಾರರ ನೋಟಿಸ್ ಜನರೇಟ್ ಆಗಿದ್ದು, ೧೭,೮೪೨ ಮತದಾರರಿಗೆ ನೋಟಿಸ್ ವಿತರಣೆ ಬಾಕಿ ಇದೆ.

ವೀರಾಜಪೇಟೆ ಕ್ಷೇತ್ರದಲ್ಲಿ ೨೬,೫೫೮ ಮತದಾರರನ್ನು ಲಾಜಿಕಲ್ ಡಿಸ್ಕಿçಪೆನ್ಸಿ ಹಾಗೂ ೧೩,೫೫೦ ಮತದಾರರನ್ನು ನೋ ಮ್ಯಾಪಿಂಗ್ ಎಂದು ಗುರುತಿಸಲಾಗಿದೆ. ಕ್ಷೇತ್ರದಲ್ಲಿ ೪೦,೧೦೮ ಮತದಾರರ ನೋಟೀಸ್ ಜನರೇಟ್ ಆಗಿದ್ದು, ೩೦೫ ಮಂದಿ ಮತದಾರರಿಗೆ ಮಾತ್ರ ಮಂಗಳವಾರದವರೆಗೆ ಬಿಎಲ್‌ಓಗಳ ಮೂಲಕ ನೋಟಿಸ್ ವಿತರಣೆ ಮಾಡಲಾಗಿದೆ. ವೀರಾಜಪೇಟೆ ಕ್ಷೇತ್ರದಲ್ಲಿ ೩೯,೭೯೯ ಮತದಾರರ ನೋಟಿಸ್ ವಿತರಣೆ ಬಾಕಿ ಇದೆ.

ದಿನಾಂಕ, ಸಮಯ ಉಲ್ಲೇಖ

ಲಾಜಿಕಲ್ ಡಿಸ್ಕ್ರಿಪೆನ್ಸಿ ಹಾಗೂ ನೋ ಮ್ಯಾಪಿಂಗ್ ಅಡಿಯಲ್ಲಿ ಗುರುತಿಸಲಾಗಿರುವ ಮತದಾರರಿಗೆ ನೀಡುವ ನೋಟೀಸ್‌ನಲ್ಲಿ ತಮಗೆ ಯಾವ ಕಾರಣಕ್ಕೆ ನೋಟೀಸ್ ನೀಡಲಾಗುತ್ತಿದೆ ಎಂಬ ಮಾಹಿತಿ ಇರಲಿದೆ.

ಮತದಾರರ ಹೆಸರು, ಎಪಿಕ್ ನಂಬರ್, ಬೂತ್ ಹೆಸರು ಹಾಗೂ ಯಾವುದೇ ಗೊಂದಲ ಇದ್ದರೆ ಬಿಎಲ್‌ಓಗಳನ್ನು ಸಂಪರ್ಕಿಸಲು ಬಿಎಲ್‌ಓಗಳ ಮೊಬೈಲ್ ಸಂಖ್ಯೆ ಕೂಡ ನೋಟಿಸ್‌ನಲ್ಲಿ ನೀಡಲಾಗಿದೆ. ದಿನಾಂಕ, ಸಮಯ ಮತ್ತು ಸ್ಥಳವನ್ನು ಕೂಡ ಉಲ್ಲೇಖಿಸಲಾಗಿದೆ.

ನೋಟೀಸ್ ಪಡೆದ ಮತದಾರ ತಮಗೆ ನೀಡಿರುವ ದಿನಾಂಕದAದು ನೋಟೀಸ್ ಹಿಂಭಾಗದಲ್ಲಿ ನೀಡಿರುವ ದಾಖಲೆಯೊಂದಿಗೆ ಇಆರ್.ಒ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ. ಒಂದು ವೇಳೆ ಇಆರ್.ಒ ಸೂಚಿಸಿರುವ ದಿನಾಂಕದAದು ಹಾಜರಾಗಲು ಸಾಧ್ಯವಾಗದಿದ್ದಲ್ಲಿ ಒಂದು ಬಾರಿ ಮಾತ್ರ ವಿನಾಯಿತಿ ನೀಡಲಾಗುತ್ತದೆ.ಎರಡನೇ ಬಾರಿ ಕೂಡ ಗೈರು ಹಾಜರಾದಲ್ಲಿ ಅಂತಿಮ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲಾಗುತ್ತದೆ.

ಕೊಡಗು ಜಿಲ್ಲೆಯಲ್ಲಿ ೫೮,೮೮೩ ಮತದಾರರಿಗೆ ನೋಟೀಸ್ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಜನರೇಟ್ ಆಗಿದ್ದು, ಇವರೆಲ್ಲರೂ ಚುನಾವಣಾ ಆಯೋಗ ಸೂಚಿಸಿರುವ ಸೂಕ್ತ ದಾಖಲೆಗಳನ್ನು ನೀಡಿದಲ್ಲಿ ಮಾತ್ರ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಅವಕಾಶ. ಒಂದು ವೇಳೆ ನೋಟೀಸ್ ಪಡೆದ ಮತದಾರರ ವಿಚಾರಣೆಗೆ ಹಾಜರಾಗಿ ಸೂಕ್ತ ದಾಖಲೆಗಳನ್ನು ಸಲ್ಲಿಸಿದರೂ ಕೂಡ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳ್ಳದಿದ್ದರೆ ಇಆರ್.ಒ ಹಾಗೂ ಎಇಆರ್.ಒ ನಿರ್ಧಾರವನ್ನು ಪ್ರಶ್ನಿಸಿ ಜಿಲ್ಲಾ ಚುನಾವಣಾಧಿಕಾರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ನೋಟೀಸ್ ವಿಲೇವಾರಿ ಪ್ರಕ್ರಿಯೆ ಅಕ್ಟೋಬರ್ ೨೨ರವರೆಗೆ ನಡೆಯಲಿದ್ದು, ಅ.೨೭ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ.

ಮತದಾರರಿಗೆ ಮಾಹಿತಿಯೇ ಇಲ್ಲ!

ಲಾಜಿಕಲ್ ಡಿಸ್ಕೆçಪೆನ್ಸಿ ಮತ್ತು ನೋ ಮ್ಯಾಪಿಂಗ್ ಅಡಿಯಲ್ಲಿ ಗುರುತಿಸಲಾಗಿರುವ ಮತದಾರರಿಗೆ ನೋಟೀಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಮತದಾರರಿಗೆ ನೋಟೀಸ್ ಬಗ್ಗೆ ಮಾಹಿತಿಯೇ ಇಲ್ಲ. ನೋಟೀಸ್ ಜನರೇಟ್ ಆಗಿರುವ ಮತದಾರರ ಮಾಹಿತಿಯನ್ನು ಚುನಾವಣಾ ಆಯೋಗ ಇದುವರೆಗೆ ಪ್ರಕಟಿಸಿಲ್ಲ.

ಲಾಜಿಕಲ್ ಡಿಸ್ಕ್ರಿಪೆನ್ಸಿ ಮತ್ತು ನೋ ಮ್ಯಾಪಿಂಗ್ ಅಡಿಯಲ್ಲಿ ಗುರುತಿಸಲಾಗಿರುವ ಮತದಾರರ ವಿವರ ಬಿಎಲ್‌ಓ ಆ್ಯಪ್‌ನಲ್ಲಿ ಮೊದಲೇ ಮಾಹಿತಿ ಇರಲಿದೆ.ಆದರೆ ಇದರ ಬಗ್ಗೆ ಬಿಎಲ್‌ಓಗಳು ಕೂಡ ಮತದಾರರಿಗೆ ಮಾಹಿತಿ ನೀಡದೆ ಮತದಾರರು ಸಂಕಷ್ಟಕ್ಕೀಡಾಗಿದ್ದಾರೆ. ನೋಟಿಸ್ ಬಗ್ಗೆ ಮಾಹಿತಿಯಿಲ್ಲದೆ,

ಇದು ಯಾವ ಫಾರ್ಮ್! ಮತ್ತೆ ಅರ್ಜಿ ತುಂಬಿ ಕೊಡಬೇಕು! ಎಂದು ನೋಟೀಸ್ ಪಡೆದ ಮತದಾರರು ಬಿಎಲ್‌ಓಗಳನ್ನು ಪ್ರಶ್ನಿಸಿದ್ದಾರೆ. ಇದರ ಬಗ್ಗೆ ಮತದಾರರಿಗೆ ಮಾಹಿತಿ ನೀಡಬೇಕಿದ್ದ ರಾಜಕೀಯ ಪಕ್ಷಗಳ ಏಜೆಂಟರುಗಳ ಕೂಡ ಮೌನಕ್ಕೆ ಜಾರಿದ್ದಾರೆ. ಎಸ್‌ಐಆರ್ ಮೊದಲ ಹಂತದ ಆರಂಭದಲ್ಲಿ ಫಾರ್ಮ್ ಭರ್ತಿ ಮಾಡಿಕೊಡಲು ಆಸಕ್ತಿ ನಂತರ ದಿನಗಳಲ್ಲಿ ರಾಜಕೀಯ ಪಕ್ಷಗಳ ಏಜೆಂಟರುಗಳ ಮೌನಕ್ಕೆ ಶರಣಾಗಿದ್ದಾರೆ. ನೋಟೀಸ್ ಪಡೆದ ಮತದಾರರು ದಿಕ್ಕು ದೋಚದೆ ದಾಖಲೆಗಳನ್ನು ಒದಗಿಸಲು ಪರದಾಡುವಂತಾಗಿದೆ. ನೋಟೀಸ್ ಪಡೆದ ಅನಕ್ಷರಸ್ಥ ಮತದಾರರು ಮತ್ತು ಚುನಾವಣಾ ಆಯೋಗ ಸೂಚಿಸಿರುವ ದಾಖಲೆಗಳಿಲ್ಲದ ಮತದಾರರು ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ.