ಗೋಣಿಕೊಪ್ಪ ವರದಿ, ಸೆ. ೧; ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನದಲ್ಲಿ ವಿದ್ಯಾರ್ಥಿಗಳು ಅಜ್ಜ-ಅಜ್ಜಿಯರೊಂದಿಗೆ ಸಂಭ್ರಮಪಟ್ಟರು. ಹಿರಿಯರ ಪ್ರೀತಿ, ಅನುಭವ, ತ್ಯಾಗ ಮತ್ತು ಕುಟುಂಬಕ್ಕೆ ಅವರು ನೀಡುವ ಅಮೂಲ್ಯ ಕೊಡುಗೆಯನ್ನು ಸ್ಮರಿಸಿಕೊಳ್ಳುವಂತಾಯಿತು. ಶಾಲೆಗೆ ಆಗಮಿಸಿದ್ದ ಅಜ್ಜ-ಅಜ್ಜಿಯರು ತಮ್ಮ ಮೊಮ್ಮಕ್ಕಳೊಂದಿಗೆ ಬೆಂಕಿ ರಹಿತ ತಯಾರಿಸಿದ ವಿವಿಧ ಬಗೆಯ ತಿಂಡಿ-ತಿನಿಸುಗಳನ್ನು ಸಿದ್ಧಪಡಿಸಿ, ಸವಿಯಲು ನೀಡಿದರು. ಮಕ್ಕಳೊಂದಿಗೆ ತಿನಿಸುಗಳನ್ನು ತಯಾರಿಸಿ ಪ್ರೀತಿ ಹಂಚಿಕೊಳ್ಳಲಾಯಿತು.

ಸAಸ್ಥೆಯ ಸಂಸ್ಥಾಪಕಿ ಡಾ. ಅಪ್ಪನೆರವಂಡ ಶಾಂತಿ ಅಚ್ಚಪ್ಪ, ಹಿರಿಯ ನಾಗರಿಕರ ಮಹತ್ವ ತಿಳಿಸಿಕೊಟ್ಟರು. ಹಾಗೂ ಶಾಲೆಯ ಪ್ರಾಂಶುಪಾಲ ಪುಷ್ಪ ಸುಬ್ಬಯ್ಯ ಹಿರಿಯರನ್ನು ಆತ್ಮೀಯವಾಗಿ ಗೌರವಿಸಿದರು. ಶಾಲೆಯ ಕೋ-ಆರ್ಡಿನೇಟರ್ ಸರಿತಾ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ಪೋಷಕರ ಮಹತ್ವ, ಅವರ ಪ್ರೀತಿ, ತ್ಯಾಗ ಹಾಗೂ ಜೀವನಾನುಭವದ ಕುರಿತು ಅಪೇಕ್ಷಾ ರೈ ತಿಳಿಸಿದರು. ನೀತಿ ಜಗದೀಶ್ ಸ್ವಾಗತಿಸಿದರು. ನೇಹಾಲ್ ಅವರು ಹಿರಿಯರ ಮಹತ್ವವನ್ನು ಸಾರುವ ಸುಂದರ ಕವಿತೆಯನ್ನು ವಾಚಿಸಿದರು. ರೇಖಾ ನಾಣಯ್ಯ ವಂದಿಸಿದರು.