ಚೆಟ್ಟಳ್ಳಿ, ಸೆ. ೧: ಮಾಡಹಾಗಲ ಬೆಳೆಯ ವೈಜ್ಞಾನಿಕ ಕೃಷಿ ಪದ್ಧತಿ ಹಾಗೂ ಕೀಟ-ರೋಗ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡುವ ಕ್ಷೇತ್ರ ದಿನ ಹಾಗೂ ತರಬೇತಿ ಕಾರ್ಯಕ್ರಮ ತಾ. ೩ ರಂದು ಚೆಟ್ಟಳ್ಳಿಯ ಕೇಂದ್ರಿಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ನಡೆಯಲಿದೆ.
ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಅಧೀನದ ಕೆಎಆರ್-ಐಐಹೆಚ್ಆರ್ ಕೇಂದ್ರಿಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ (ಐಸಿಎಆರ್), ಚೆಟ್ಟಳ್ಳಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ.ಕಾರ್ಯಕ್ರಮದಲ್ಲಿ ಮಾಡಹಾಗಲದ ವೈಜ್ಞಾನಿಕ ಕೃಷಿ ಕುರಿತು ಸಿಹೆಚ್ಇಎಸ್ ವಿಜ್ಞಾನಿ ಡಾ. ರಾಮಾವತ್ ರಮೇಶ್ ಬಾಬು ಹಾಗೂ ಮಾಡಹಾಗಲದಲ್ಲಿ ಕೀಟ ಮತ್ತು ರೋಗಗಳ ನಿರ್ವಹಣೆ ಕುರಿತು ವಿಜ್ಞಾನಿ ಹರಿತಾ ಮೋಹನ್ ರೈತರಿಗೆ ತಾಂತ್ರಿಕ ಮಾಹಿತಿ ನೀಡಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ರೈತರ - ವಿಜ್ಞಾನಿಗಳ ಸಂವಾದ ಹಾಗೂ ಮಾಡಹಾಗಲ ಕ್ಷೇತ್ರಕ್ಕೆ ಭೇಟಿ ಕೂಡ ನಡೆಯಲಿದೆ. ಮಾಡಹಾಗಲದ ವೈಜ್ಞಾನಿಕ ಕೃಷಿ, ಉತ್ತಮ ಇಳುವರಿ ಪಡೆಯುವ ವಿಧಾನಗಳು ಹಾಗೂ ಕೀಟ-ರೋಗ ನಿರ್ವಹಣೆ ಕುರಿತು ರೈತರಿಗೆ ಪ್ರಾಯೋಗಿಕ ಮಾಹಿತಿ ನೀಡಲಾಗುತ್ತದೆ. ಆಸಕ್ತ ರೈತರು ಹೆಚ್ಚಿನ ಮಾಹಿತಿಗಾಗಿ ೭೮೯೨೮೮೨೩೫೧ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.