ವೀರಾಜಪೇಟೆ: ಸಾಂಸ್ಕöÈತಿಕ ಹಾಗೂ ಧಾರ್ಮಿಕ ವೈಭವಕ್ಕೆ ಹೆಸರುವಾಸಿಯಾದ ವಿರಾಜಪೇಟೆಯ ಸುಂಕದಕಟ್ಟೆಯಲ್ಲಿ ಸರ್ವ ಸಿದ್ದಿ ಉತ್ಸವ ಸಮಿತಿಯ ವತಿಯಿಂದ ಇದೀಗ ೨೭ನೇ ವರ್ಷದ ಗೌರಿ ಗಣೇಶ ಪ್ರತಿಷ್ಠಾಪನಾ ಮಹೋತ್ಸವವು ಶ್ರದ್ಧಾ-ಭಕ್ತಿ ಹಾಗೂ ವೈಭವದಿಂದ ನೆರವೇರುತ್ತಿದೆ.
ಈ ಧಾರ್ಮಿಕ ಕಾರ್ಯಕ್ಕೆ ನಾಂದಿ ಹಾಡಿದವರು ದಿ. ವಿ.ಕೆ. ನಾಗರಾಜು ಅವರು. ಸುಂಕದಕಟ್ಟೆಯಲ್ಲಿ ಗೌರಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿ, ಉತ್ಸವವನ್ನು ಸಂಘಟಿಸಬೇಕೆAಬ ಮಹತ್ಕಾರ್ಯಕ್ಕೆ ನಿರ್ಧರಿಸಿ ಅವರೇ ಇದನ್ನು ಮೊದಲು ಪ್ರಾರಂಭಿಸಿದರು. ಆ ಆರಂಭಿಕ ದಿನಗಳಲ್ಲಿ ದಿ. ವಿ.ಕೆ. ನಾಗರಾಜು ಅವರ ಜೊತೆಗೆ ಪ್ರಕಾಶ, ಅರುಣ್ ಹಾಗೂ ಅಶೋಕ್ ಅವರು ಕೈಜೋಡಿಸಿ ಉತ್ಸವದ ಯಶಸ್ಸಿಗೆ ಶ್ರಮಿಸಿದ್ದರು. ಪ್ರಾರಂಭದ ವರ್ಷಗಳಲ್ಲಿ ಗಣೇಶ ಮೂರ್ತಿಯನ್ನು ಸುಂಕದಕಟ್ಟೆಯ ಪಂಪ್ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತಿತ್ತು.
ಕಾಲಕ್ರಮೇಣ ಈ ಉತ್ಸವವು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತು. ಕಳೆದ ೨೭ ವರ್ಷಗಳಿಂದ ವೀರಾಜಪೇಟೆ ಯಲ್ಲಿ ನಡೆಯುವ ಐತಿಹಾಸಿಕ ಗಣೇಶೋತ್ಸವದ ಶೋಭಾಯಾತ್ರೆಯಲ್ಲಿ ಸರ್ವ ಸಿದ್ದಿ ಉತ್ಸವ ಸಮಿತಿಯು ಭಾಗವಹಿಸುತ್ತಾ ಬಂದಿದೆ. ಪ್ರಸ್ತುತ ಈ ಮೂರ್ತಿಯ ವಿಸರ್ಜನಾ ಮಹೋತ್ಸವವು ಗೌರಿಕೆರೆಯಲ್ಲಿ ಅತ್ಯಂತ ಸಾಂಪ್ರದಾಯಿಕ ಹಾಗೂ ವಿಜೃಂಭಣೆಯಿAದ ನೆರವೇರುತ್ತಿದೆ.
ಸುಂಕದಕಟ್ಟೆಯಲ್ಲಿರುವ ಸಮುದಾಯ ಭವನದಲ್ಲಿ ಶ್ರೀ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಉತ್ಸವದ ಅವಧಿಯಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ಹಾಗೂ ಅನ್ನದಾನ ಸೇವೆಗಳು ನೆರವೇರುತ್ತವೆ.
ವಿಸರ್ಜನಾ ಮಹೋತ್ಸವ ಮತ್ತು ಶೋಭಾಯಾತ್ರೆಯು ಜನಮನ ಸೆಳೆಯುವ ಪ್ರಮುಖ ಆಕರ್ಷಣೆಯಾಗಿದೆ. ಸಾಂಪ್ರದಾಯಿಕ ಕಲಾತಂಡಗಳು, ಮನಮೋಹಕ ವಿದ್ಯುತ್ ಅಲಂಕೃತ ಮಂಟಪಗಳು ಹಾಗೂ ಸಾಮಾಜಿಕ ಜಾಗೃತಿ ಮತ್ತು ಕಳಕಳಿಯನ್ನು ಬಿಂಬಿಸುವ ವೈವಿಧ್ಯಮಯ ಸ್ತಬ್ಧಚಿತ್ರಗಳು ಈ ಉತ್ಸವಕ್ಕೆ ಮೆರುಗು ನೀಡುತ್ತವೆ.
ಪ್ರಸ್ತುತ ಸರ್ವ ಸಿದ್ದಿ ಉತ್ಸವ ಸಮಿತಿಯಲ್ಲಿ ೫೦ ಉತ್ಸಾಹಿ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಸ್ಥಾಪಕ ಅಧ್ಯಕ್ಷರಾಗಿದ್ದ ದಿ. ವಿ.ಕೆ. ನಾಗರಾಜು ಅವರ ಪುತ್ರರಾದ ನಿಕ್ಷಿತ್ ಅವರು ಸಮಿತಿಯ ಉಪಾಧ್ಯಕ್ಷರಾಗಿ ತಂದೆಯವರ ಹಾದಿಯಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಯತೀಶ್ ಅವರು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮಿತಿಯನ್ನು ಒಟ್ಟಾಗಿ ಕರೆದೊಯ್ಯತ್ತಿದ್ದಾರೆ. ಪ್ರತಿ ಬಾರಿಯೂ ವಿಶೇಷ ಆಕರ್ಷಣೆಯ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಜೊತೆಗೆ ಅಲಂಕಾರದ ಕಡೆಗೆ ಹೆಚ್ಚಿನ ಆಸ್ಥೆಯನ್ನು ನೀಡಲಾಗುತ್ತದೆ.
೨೭ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಸರ್ವ ಸಿದ್ದಿ ಉತ್ಸವ ಸಮಿತಿಯ ಗೌರಿ ಗಣೇಶೋತ್ಸವವು, ಧಾರ್ಮಿಕ ಶ್ರದ್ಧೆಯ ಜೊತೆಗೆ ಸಾಮಾಜಿಕ ಐಕ್ಯತೆ ಮತ್ತು ಸಂಸ್ಕöÈತಿಯನ್ನು ಎತ್ತಿಹಿಡಿಯುವ ಪ್ರಮುಖ ಉತ್ಸವವಾಗಿ ಹೊರಹೊಮ್ಮಿದೆ.
- ರಜಿತ ಕಾರ್ಯಪ್ಪ,
ವೀರಾಜಪೇಟೆ.
ಮೊ: ೯೪೮೧೭೭೧೮೫೧